ದಿನ ಭವಿಷ್ಯ: ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ...
Published 3 ಜೂನ್ 2026, 23:38 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು. ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಹೊಸ ಯೋಜನೆಗಳನ್ನು ರೂಢಿಸಿಕೊಳ್ಳಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಸಾಧ್ಯತೆ ಇದೆ.
ವೃಷಭ
ನಿಮ್ಮ ಉದಾರ ಮನೊಭಾವದಿಂದ ಇತರರಿಗೆ ಸಹಾಯ ಮಾಡಿದ ಫಲ ನಿಮಗೆ ಅನುಭವಕ್ಕೆ ಬರಲಿದೆ. ನಿಮ್ಮ ಮನೋಭಿಲಾಷೆ ವ್ಯಕ್ತ ಪಡಿಸಲು ಹಿಂಜರಿಯಬೇಡಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಧನೆಗೆ ಸುಸಮಯ.
ಮಿಥುನ
ಚಿಲ್ಲರೆ ಮಾರಾಟಗಾರರಿಗೆ ಮತ್ತು ಹೂವು, ಹಣ್ಣು ಬೆಳೆಗಾರರಿಗೆ ಶುಭ ದಿನ. ನಿಮ್ಮ ಜೀವನವನ್ನು ಹಿಂದಿರುಗಿ ನೋಡಿದರೆ ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಎನಿಸುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ ಅನಿಸಲಿದೆ.
ಕರ್ಕಾಟಕ
ಹಿರಿಯರ ಮಧ್ಯಸ್ತಿಕೆಯಿಂದ ವಿವಾದಗಳು ಬಗೆ ಹರಿಯುವವು, ಮೊದಲಿನಂತೆ ಸಂಬಂಧ ಗಟ್ಟಿಯಾಗಲಿದೆ. ನಿಮ್ಮ ಲಾಭಕ್ಕಾಗಿ ಇನ್ನೊಬ್ಬರಿಗೆ ಮೋಸ ಮಾಡಬೇಡಿ. ಭಯ-ಭೀತಿಯಿಂದ ಹೊರಬರುವಂತಾಗುವುದು.
ಸಿಂಹ
ಇಂದು ನಿಮ್ಮ ಅದೃಷ್ಟದ ಕಾಲವಾದ ಕಾರಣ ಬಂದ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು. ಹೆಂಡತಿಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು.
ಕನ್ಯಾ
ಕೆಲಸವು ನಿಧಾನಗತಿಯಲ್ಲಿ ಸಾಗುವ ಕಾರಣ ಯೋಜಿತ ಕಾರ್ಯವು ಬಾಕಿ ಉಳಿಯಲಿದೆ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಸ್ಪಂದನೆ ಸಿಗುವುದು. ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟವಿರುವುದು.
ತುಲಾ
ನಾನಾ ಕಡೆಗಳಿಂದ ಸಂಪಾದನೆ ಇರುವುದು, ಬರಬೇಕಿದ್ದ ಹಣ ಅಡಚಣೆಗಳಿಲ್ಲದೆ ಶೀಘ್ರ ಬರುವುದು. ಬುದ್ಧಿವಂತಿಕೆಯಿಂದ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿರಿ. ಧಾರ್ಮಿಕ ವಿಷಯದ ಅಧ್ಯಯನದಲ್ಲಿ ಆಸಕ್ತಿ ಮೂಡುವುದು.
ವೃಶ್ಚಿಕ
ಗಣಿತದಲ್ಲಿ ಅಥವಾ ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ಧ್ಯಾನ, ಯೋಗದಿಂದ ಮಾನಸಿಕ ಒತ್ತಡ ಸ್ವಲ್ಪ ಕಡಿಮೆಯಾಗುವುದು. ಮದುವೆ ನಿಶ್ಚಯಗೊಳ್ಳುವ ಸಾಧ್ಯತೆಗಳಿವೆ.
ಧನು
ನಿಮ್ಮ ದೇಹದಲ್ಲಿ ವಾತ ಪಿತ್ಥದ ಅಂಶ ಅಧಿಕವಾಗುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕವಾಗುತ್ತದೆ. ವಾಹನ ವಹಿವಾಟುಗಳಲ್ಲಿ ನಿಮ್ಮ ನಿರೀಕ್ಷೆಯನ್ನು ಮೀರಿದ ಲಾಭವನ್ನು ಪಡೆಯಬಹುದು.
ಮಕರ
ಇಂದು ವೃತ್ತಿ ಪರವಾಗಿ ನಡೆಯುವ ಎಲ್ಲ ವಿಷಯಗಳನ್ನೂ ಸಹ ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ಗೊಂದಲದಲ್ಲಿರುವ ನಿಮಗೆ, ಅಭಿಪ್ರಾಯ ವಿನಿಮಯಗಳಿಂದ ಮನಸ್ಸಿಗೆ ನೆಮ್ಮದಿ ಮೂಡುವುದು.
ಕುಂಭ
ಎಷ್ಟೆ ಅನುಭವ ಇದ್ದರೂ ಇನ್ನೂ ಜೀವನದ ಪಾಠವನ್ನು ಕಲಿಯುವುದು ಅಗತ್ಯವೆನಿಸುವುದು. ಗುಡಿ ಕೈಗಾರಿಕೆಯವರಿಗೆ ಅಥವಾ ಸಣ್ಣ ಕೈಗಾರಿಕೆಯವರಿಗೆ ಈ ದಿನ ಸಾಕಷ್ಟು ಲಾಭ ಸಿಗಲಿದೆ. ಕಫದ ವ್ಯಾಧಿ ಹೆಚ್ಚಾಗಲಿದೆ.
ಮೀನ
ನಿಮ್ಮ ಮಾತು ಮತ್ತು ಕೃತಿಯನ್ನು ಆದಷ್ಟು ಒಂದನ್ನು ಮಾಡಿಕೊಳ್ಳಿ. ಕೆಲವೊಂದು ಸಂದರ್ಭದಲ್ಲಿ ನಿಮ್ಮ ಮಾತು ಸತ್ಯವಾಗಿದ್ದರೂ ಅದನ್ನು ಸಾಬೀತು ಪಡಿಸಲಾಗುವುದಿಲ್ಲ. ಕೃಷಿಕರು ಧಾನ್ಯ ರಕ್ಷಣೆ ಬಗ್ಗೆ ಗಮನವಹಿಸಿ.