ದಿನ ಭವಿಷ್ಯ: ಈ ರಾಶಿಯವರನ್ನು ಆತ್ಮವಿಶ್ವಾಸ ರಕ್ಷಿಸಲಿದೆ
Published 8 ಮೇ 2026, 23:27 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಂದಾಣಿಕೆಯ ಮನೋಭಾವ ಕಡಿಮೆಯಾಗುವುದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಜಾಗ್ರತೆ ವಹಿಸಿ. ನೀವೇ ವಿಮರ್ಶಿಕೊಳ್ಳಿ ಸರಿ ತಪ್ಪುಗಳ ಅರಿವಾಗಲಿದೆ.
ವೃಷಭ
ಮಗನ ವಿಷಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಡವಿದ ಅನುಭವ ಆಗಲಿದೆ. ಗೆಳೆಯನಿಂದ ಸವಾಲುಗಳನ್ನು ಎದುರಿಸುವಲ್ಲಿ ಸಹಾಯ ನಿರೀಕ್ಷಿಸಬಹುದು. ಆತ್ಮವಿಶ್ವಾಸ ನಿಮ್ಮನ್ನು ರಕ್ಷಿಸಲಿದೆ.
ಮಿಥುನ
ದೇವರ ಆಶೀರ್ವಾದ ಇರುವುದರಿಂದ ಪ್ರಯಾಣ ಅನುಕೂಲಕರವಾಗಿ ಮತ್ತು ಅನಾಯಾಸವಾಗಿ ಇರುತ್ತದೆ. ಸೋದರ ಮಾವನ ಆರೋಗ್ಯದ ವ್ಯತ್ಯಾಸದಿಂದ ದಿನಚರಿಯಲ್ಲಿ ಬದಲಾವಣೆ ಉಂಟಾಗುತ್ತದೆ.
ಕರ್ಕಾಟಕ
ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕಾರ್ಯಸಾಧನೆಗೆ ಅನುಕೂಲಕರ ಹಾಗೂ ಲಾಭದಾಯಕ ವಾತಾವರಣ ಸಿಗಲಿದೆ. ದಿನದ ಮೊದಲಾರ್ಧ ಬೇಸರವಿದ್ದರೆ ಕೊನೆಯನ್ನು ಸಂತೋಷದಲ್ಲಿ ಕಳೆಯುತ್ತೀರಿ.
ಸಿಂಹ
ಉದರಬಾಧೆಯನ್ನು ಉಪಶಮನ ಮಾಡಿಕೊಳ್ಳುವುದಕ್ಕಾಗಿ ಹಸಿ ತರಕಾರಿಯನ್ನೋ ಅಥವಾ ಸ್ನಿಗ್ಧ ಆಹಾರವನ್ನಷ್ಟೇ ಸೇವಿಸಿ. ವಿವಾಹ ಯೋಗ್ಯ ವಯಸ್ಕರಿಗೆ ಪ್ರಯತ್ನವಿದ್ದರೆ ಮದುವೆ ನಿಶ್ಚಯವಾಗುವುದು.
ಕನ್ಯಾ
ವ್ಯವಹಾರದಲ್ಲಿ ವಿದೇಶಿ ಸಂಪರ್ಕಗಳು ಅಥವಾ ದೊಡ್ಡ ಮಟ್ಟದ ದೇಶೀಯ ವ್ಯವಹಾರಗಳ ಸಂಪರ್ಕಗಳು ಹೆಚ್ಚಲಿವೆ. ದಂಪತಿಗಳ ಮಧ್ಯೆ ಅನವಶ್ಯಕವಾದ ವಾದ ವಿವಾದ ಉಂಟಾಗಬಹುದು.
ತುಲಾ
ಇಂದ್ರಿಯಗಳ ಚಾಂಚಲ್ಯತೆ ಏಕಾಗ್ರತೆಯನ್ನು ಭಂಗಗೊಳಿಸುವ ಜತೆಗೆ ಹಾದಿ ತಪ್ಪಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಆತುರ ತೋರುವಿರಿ.
ವೃಶ್ಚಿಕ
ಪೊಲೀಸ್ ಅಧಿಕಾರಿಗಳಿಗೆ ಸರಿ ತಪ್ಪು ತೀರ್ಮಾನಿಸುವುದು ಕಷ್ಟ. ವೃತ್ತಿಯಲ್ಲಿ ಒತ್ತಡ ಹೆಚ್ಚುವುದು. ನೀಲಿವಸ್ತ್ರ ಅಥವಾ ಹರಳು ಕಾರ್ಯಸಾಧನೆಗೆ ಸಹಾಯಕವಾಗಲಿದೆ. ವ್ಯವಹಾರ ನಡೆಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಡಿ.
ಧನು
ಹಿರಿಯರ ಮಾರ್ಗದರ್ಶನದಂತೆ ನಡೆದು ಕೆಲಸಗಳನ್ನು ಮಾಡುವು ದರಿಂದ ಅಡೆತಡೆಗಳು ಇರುವುದಿಲ್ಲ. ಉದ್ಯೋಗ ಬದಲಾವಣೆಯ ಬಗ್ಗೆ ತೀರ್ಮಾನಿಸಬೇಡಿ. ವಕೀಲಿ ವೃತ್ತಿಯವರಿಗೆ ಅಧ್ಯಯನದ ಕೊರತೆ ಕಾಣಲಿದೆ.
ಮಕರ
ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಪಡೆಯುವವರು ಆಮೂಲಾಗ್ರ ಚಿಂತನೆ ನಡೆಸಿ ಒಪ್ಪಿಕೊಳ್ಳುವುದು ಸೂಕ್ತ. ಸ್ಥಾನ ಬದಲಾವಣೆಯಿಂದ ಮನಸ್ಸಿಗೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವುದು.
ಕುಂಭ
ಹಣಕಾಸು ಸಂಸ್ಥೆಗಳ ನೆರವಿನಿಂದ ಬಹುದಿನದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಮನದಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಸೂಕ್ತ ದಿನವಾಗಿದೆ.
ಮೀನ
ಅಧಿಕಾರದಲ್ಲಿ ಸ್ಥಾನಮಾನ ಪಡೆಯಲು ಧಾರ್ಮಿಕ ಕಾರ್ಯಗಳನ್ನು ನಡೆಸಿ. ಗಿಡ ಮೂಲಿಕೆಗಳಿಂದ ಉದರವ್ಯಾಧಿಗಳು ಗುಣವಾಗಲಿವೆ. ಅಸಾಮಾನ್ಯ ವ್ಯಕ್ತಿಯನ್ನು ವ್ಯಾಪಾರ ನಿಮಿತ್ತ ಭೇಟಿ ಮಾಡುವಿರಿ.