ಭಾನುವಾರ, 14 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 12 ಮೇ 2026 ಮಂಗಳವಾರ– ಚಿನ್ನಾಭರಣಗಳ ಖರೀದಿಯ ಯೋಗವಿದೆ
Published 11 ಮೇ 2026, 18:56 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪಾಲುದಾರಿಕೆಯ ವ್ಯವಹಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಜೀವನಶೈಲಿಗೆ ವಿರುದ್ಧವಾದ ಘಟನೆ ನಡೆಯಬಹುದು. ಚಿನ್ನಾಭರಣಗಳ ಖರೀದಿಯ ಯೋಗವಿದೆ.
ವೃಷಭ
ಅಭಿವೃದ್ಧಿಯ ಬಗ್ಗೆ ಪ್ರಮುಖ ಕಾರ್ಯ ಗಳನ್ನು ಕೈಗೆತ್ತಿಕೊಳ್ಳಲು ಸಮಯ. ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರ ದಿನಗಳು. ಎಲ್ಲಾ ಕೆಲಸಗಳೂ ತ್ವರಿತಗತಿಯಲ್ಲಿ ಸಾಗಲಿವೆ.
ಮಿಥುನ
ಪ್ರೀತಿಪಾತ್ರರಿಗೆ ನೋವಾದ ಕಾರಣದಿಂದ ಮನಸ್ಸು ಎಲ್ಲಾ ಕೆಲಸಗಳಿಂದ ವಿಮುಖವಾಗುವ ಸಾಧ್ಯತೆ ಇರುವುದು. ಗುರು–ಹಿರಿಯರ ದರ್ಶನ ಯೋಗ ಇದೆ. ಮಗಳ ಶಿಕ್ಷಣವನ್ನು ಮುಂದುವರಿಸಿ.
ಕರ್ಕಾಟಕ
ಅಭಿವೃದ್ಧಿ ದಾರಿಗೆ ಕಗ್ಗಂಟುಗಳನ್ನು ಉಂಟುಮಾಡುವ ಸಂಬಂ ಧಿಕರಲ್ಲಿ ವಿಚಾರ ವಿನಿಮಯ ಮಾಡದಿರುವುದು ಉತ್ತಮ. ಉದ್ಯೋಗಾಕಾಂಕ್ಷಿ ಗಳಿಗೆ ಗಣಪತಿಯ ಅನುಗ್ರಹದಿಂದ ಬಯಸಿದ ಕ್ಷೇತ್ರದಲ್ಲಿ ಅವಕಾಶ ಸಿಗಲಿದೆ.
ಸಿಂಹ
ಯಾವುದೇ ಅನುಮಾನಗಳಿಲ್ಲದೇ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಮನೆ ಕಟ್ಟಡದ ಕೆಲಸಗಳು ಮುಕ್ತಾಯದ ಹಂತಕ್ಕೆ ತಲುಪಲಿವೆ. ದೂರ ಪ್ರಯಾಣ ಸಂಭವವಿರುತ್ತದೆ.
ಕನ್ಯಾ
ದುಷ್ಟರ ಸಹವಾಸದಿಂದ ದೂರವಿರುವ ಪ್ರಯತ್ನ ಮಾಡಿ. ವಿದೇಶದಲ್ಲಿ ಉದ್ಯೋಗದ ಸಂಪಾದನೆಗಾಗಿ ಪ್ರಯತ್ನ ಮಾಡಬಹುದು. ನೂತನ ವಾಹನ ಖರೀದಿಯ ಬಗ್ಗೆ ಚಿಂತನೆ ಬರಲಿದೆ.
ತುಲಾ
ರಾಜಕೀಯ ಜೀವನದಲ್ಲಿ ಪರಿಸ್ಥಿತಿ ಸುಧಾರಿಸಿಕೊಳ್ಳಲು ಅನುಕೂಲವಾಗುವ ಅವಕಾಶಗಳು ದೊರೆಯಲಿವೆ. ಆಪ್ತ ಸ್ನೇಹಿತರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು. ಬಿಳಿ ಬಣ್ಣ ಶುಭವನ್ನು ಉಂಟುಮಾಡುತ್ತದೆ.
ವೃಶ್ಚಿಕ
ವೃತ್ತಿ ಸಂಬಂಧ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಿರಿ. ಯಾವ ಕಾರಣಕ್ಕೂ ನಿಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರ ಜೀವನದಲ್ಲಿ ಆಟವಾಡಬೇಡಿ. ಪರೋಪಕಾರಿಯಾಗಿ ಬದುಕುವ ಬಗ್ಗೆ ತೀರ್ಮಾನಿಸಿರಿ.
ಧನು
ಸ್ವಂತವಾಗಿ ಆರಂಭ ಮಾಡಿದ ವ್ಯವಹಾರದಲ್ಲಿ ಲಾಭಗಳಿಸುವ ವಿಚಾರದಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಕಾಯಬೇಕಾಗುತ್ತದೆ. ಸವಾಲೊಡ್ಡುವ ಸನ್ನಿವೇಶಗಳು ಸಹೋದರಿ ಅಥವಾ ಭಾವನಿಂದ ಎದುರಾಗಬಹುದು.
ಮಕರ
ಸಮಾಜದಲ್ಲಿ ಸ್ಥಾನಮಾನ ಹೊಂದಿರುವ ನಿಮಗೆ ಮಸಿ ಬಳಿಯುವ ಪ್ರಯತ್ನ ಸಂಬಂಧಿಕರಿಂದ ನಡೆಯುವುದು. ಮಕ್ಕಳ ಬೆಳವಣಿಗೆ ವಿಚಾರದಲ್ಲಿ ಕಾಳಜಿ ತೋರುವ ಅನಿವಾರ್ಯತೆ ಹೆಚ್ಚಲಿದೆ. ಹಸಿರು ಬಣ್ಣ ಅದೃಷ್ಟ ತರುವುದು.
ಕುಂಭ
ಸಾಂಸ್ಕೃತಿಕವಾಗಿ ಮುಖ್ಯವಾಗಿ ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ. ಪ್ರತಿಷ್ಠಿತ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಾಣುವಿರಿ.
ಮೀನ
ಜಮೀನಿನ ಕೆಲಸ ಕಾರ್ಯಗಳು ಮನಸ್ಸಿನಲ್ಲಿ ತೀರ್ಮಾನಿಸಿದಂತೆ ನಡೆಯಲಿವೆ. ನಿಮ್ಮ ಕಲ್ಪನಾಶಕ್ತಿ ಇಂದು ಚುರುಕಾಗಿ ಕೆಲಸ ಮಾಡಲಿದೆ. ಕೆಲಸದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಎದುರಾಗಬಹುದು.
ADVERTISEMENT
ADVERTISEMENT