ದಿನ ಭವಿಷ್ಯ: 13 ಮೇ 2026 ಬುಧವಾರ– ಲಾಭ ನಷ್ಟಗಳ ಮಿಶ್ರ ಫಲ
Published 12 ಮೇ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಣ್ಣ-ತಮ್ಮಂದಿರ ಅಥವಾ ಹೆಚ್ಚಿನ ಒಡನಾಟ ಹೊಂದಿರುವ ವ್ಯಕ್ತಿಗಳ ಹರಿತವಾದ ನುಡಿಗಳು ಬೇಸರ ಉಂಟುಮಾಡಬಹುದು. ಬಹುಭಾಷಾ ತಾರೆಯರಿಗೆ ಅವಕಾಶ ಲಭಿಸಲಿದೆ.
ವೃಷಭ
ಬಟ್ಟೆ ವಿನ್ಯಾಸಗಾರರಿಗೆ ರಫ್ತು ಮಾರಾಟ ಹೆಚ್ಚಲಿದೆ. ಜವಳಿಯ ಮೇಲೆ ಬಂಡವಾಳ ಹಾಕಲು ಸಕಾಲ. ನಿಮ್ಮ ಆಸ್ತಿಗಳನ್ನು ಮಾರಾಟಮಾಡಿ ಸಾಲ ಮುಕ್ತರಾಗುವ ಯೋಚನೆ ಸರಿಯಲ್ಲ.
ಮಿಥುನ
ಸಜ್ಜನರ ಸಹವಾಸದಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಮೇಲಿದ್ದ ಸಂಶಯ ನಿವಾರಣೆಯಾಗಲಿದೆ. ಮಹಾಲಕ್ಷ್ಮಿಯನ್ನು ಆರಾಧಿಸಿ ಶುಭವಾಗಲಿದೆ.
ಕರ್ಕಾಟಕ
ನೀವೇ ಆಶ್ರಯಕೊಟ್ಟಂತಹ ವ್ಯಕ್ತಿಗಳಿಂದ ಮೋಸ ಹೋಗುವ ಸಂಭವವಿದೆ. ಅತಿಯಾದ ನಂಬಿಕೆ ಇಂದು ಮುಳುವಾಗಬಹುದು. ಮಾರಾಟಗಾರರಿಗೆ ಲಾಭ ನಷ್ಟಗಳ ಮಿಶ್ರ ಫಲ ಸಿಗಲಿದೆ.
ಸಿಂಹ
ಅಡುಗೆ ಕೆಲಸ ಮಾಡುವವರಿಗೆ ಕೆಲಸದ ಬಿಗಿಯಿಂದ ಸ್ವಂತ ಕೆಲಸ ಮಾಡಿಕೊಳ್ಳುವುದು ದುಸ್ತರ. ಪ್ರಯಾಣದ ಸಂದರ್ಭದಲ್ಲಿ ನಾಲ್ಕು ಚಕ್ರಗಳ ವಾಹನವನ್ನು ಬಳಸುವುದು ಲೇಸು.
ಕನ್ಯಾ
ದೇಹದಲ್ಲಾಗುವ ಪ್ರತಿಯೊಂದು ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಯಾವುದೇ ಅಹಿತಕರವಾದ ಬದಲಾವಣೆ ಅನುಭವಕ್ಕೆ ಬಂದಲ್ಲಿ, ನಿರ್ಲಕ್ಷಿಸಬೇಡಿ. ಸಾಲ ತೀರಿಸಲು ಅವಕಾಶ ಸಿಗಲಿದೆ.
ತುಲಾ
ರಕ್ಷಣಾ ವ್ಯವಸ್ಥೆಯವರಿಗೆ ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪಿದ ಕಾರಣದಿಂದ ಮನಸ್ಸಿಗೆ ಸಮಾಧಾನವಾಗುವುದು. ಸಮಾರಂಭಗಳಿಗಾಗಿ ಹೊಸ ಬಟ್ಟೆ ತರುವಂತೆ ಮನೆಯವರಿಂದ ಒತ್ತಾಯ ಬರಲಿದೆ.
ವೃಶ್ಚಿಕ
ಕಮಿಷನ್ ಏಜೆಂಟ್‌ಗಳಿಗೆ ಅದರಲ್ಲೂ ವಿಶೇಷವಾಗಿ ಭೂ ವ್ಯವಹಾರ ನಡೆಸುವವರಿಗೆ ಅಧಿಕ ಆದಾಯ ಉಂಟಾಗುವುದು. ಮನೆಯಲ್ಲಿ ಹಿತಕರ ವಾತಾವರಣ ಇರಲಿದೆ. ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ .
ಧನು
ಮಾನಸಿಕ ಶಕ್ತಿಗಳು ಬಲಗೊಂಡು ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ. ಹೈನುಗಾರಿಕೆ ಮತ್ತು ಕೃಷಿಯಲ್ಲಿ ಪ್ರಯತ್ನ ನಡೆಸಿದರೆ ಉತ್ತಮ ಫಲ ಸಿಗುವುದು.
ಮಕರ
ಬುದ್ಧಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ಪಾಲುದಾರಿಕೆ ಮತ್ತು ಸಹಭಾಗಿತ್ವದ ವ್ಯವಹಾರಗಳಿಂದ ಉತ್ತಮ ವರಮಾನ . ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ವ್ಯಾಪಾರಗಳಿಂದ ಹೇರಳ ಲಾಭವಿದೆ.
ಕುಂಭ
ಹೋಟೆಲ್ ಉದ್ದಿಮೆಯವರಿಗೆ ಕ್ಲೇಶ ಕಂಡುಬರಲಿದೆ. ಕೆಲವೊಂದು ಕೋರ್ಟಿನ ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರಿಯಿರಿ. ಷರತ್ತುಗಳ ರೀತಿಯಲ್ಲಿ ಕಾಣಲಿದೆ.
ಮೀನ
ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೊಂದಿದ ಶಿಸ್ತುಬದ್ಧ ಅಭ್ಯಾಸವು ಉತ್ತಮ ಫಲ ದೊರಕಿಸಿ ಕೊಡಲಿದೆ. ಇಷ್ಟು ದಿನಗಳ ಕಠಿಣ ಕೆಲಸದಿಂದ ಬಿಡುಗಡೆ ಬೇಕೆನಿಸುವುದು. ವ್ಯಾಪಾರದಲ್ಲಿ ಹಣವನ್ನು ಪಡೆಯಲು ಕಷ್ಟವಾಗಬಹುದು.