ಗುರುವಾರ, 11 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 14 ಮೇ 2026 ಗುರುವಾರ- ತಾಳ್ಮೆಯಿಂದ ಇರುವುದು ಉತ್ತಮ
Published 13 ಮೇ 2026, 18:48 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಿದ್ಯಾರ್ಥಿಗಳು ಸರಾಗವಾಗಿ ತಮ್ಮ ಅಭ್ಯಾಸವನ್ನು ಮುಂದುವರಿಸುವುದರಿಂದ ಜಯವನ್ನು ಕಾಣುವರು. ತಂದೆಯಿಂದ ನೆರವು ಸಿಗಲಿದೆ. ವಿರೋಧಿಗಳು ನಿಮ್ಮನ್ನು ಏನೂ ಮಾಡಲಾರರು.
ವೃಷಭ
ನೃತ್ಯ ಮತ್ತು ಅಭಿನಯ ಕಲಿಯಲು ಆಸಕ್ತಿ ಉಂಟಾಗುವುದು ಹಾಗೂ ಹೆಸರು ಸಂಪಾದಿಸಬಹುದು. ಸಾಂಸಾರಿಕವಾಗಿ ಪತಿ– ಪತ್ನಿಯ ಅನ್ಯೋನ್ಯತೆಯ ಕನಸು ನನಸಾಗಲಿದೆ. ಹೊಸ ಬಟ್ಟೆ ಖರೀದಿಸುವ ಯೋಗ.
ಮಿಥುನ
ಅತ್ತೆ-ಸೊಸೆ ನಡುವೆ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ ಇರಲಿ. ನಿಮ್ಮ ಅರ್ಹತೆಗೆ ತಕ್ಕ ಸ್ಥಾನಮಾನ ಲಭಿಸುವವರೆಗೆ ತಾಳ್ಮೆಯಿಂದ ಇರುವುದು ಉತ್ತಮ. ವಾಣಿಜ್ಯ ವ್ಯಾಪಾರಗಳಿಂದ ಅಧಿಕ ಲಾಭ.
ಕರ್ಕಾಟಕ
ಯಶಸ್ಸಿನ ಕೆಲಸಗಳಿಗೆ ಹಿಂದಿನ ಸೋಲು ನಿಮ್ಮನ್ನು ಬಾಧಿಸುತ್ತಿವುದರ ಜೊತೆಗೆ ಇಂದಿನ ಉತ್ಸಾಹದಲ್ಲಿ ಕೊರತೆ ಎದ್ದು ಕಾಣಲಿದೆ. ವಿದ್ಯಾರ್ಥಿ ಗಳಿಗೆ ಪರೀಕ್ಷೆಯಲ್ಲಿ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ಸಾಧಿಸಲು ಕಷ್ಟವಾಗುವುದು.
ಸಿಂಹ
ಈ ದಿನ ಪ್ರಾರಂಭಿಸಿದ ಕೆಲಸವನ್ನು ಸಂಪೂರ್ಣವಾಗಿ ಮುಗಿಸುವ ಬಗ್ಗೆ ಜವಾಬ್ದಾರಿ ಇರಲಿ. ಎಲ್ಲರನ್ನೂ ನಂಬುವ ನಿಮ್ಮ ದೌರ್ಬಲ್ಯದಿಂದ ತೊಂದರೆ ಉಂಟಾಗಬಹುದು. ಈ ದಿನ ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗುವುದು.
ಕನ್ಯಾ
ಯಾವುದೇ ಅನಿವಾರ್ಯಗಳಿಲ್ಲದೆ ಕೇವಲ ಹಿರಿಮೆಗಾಗಿ ವಿಲಾಸಿ ವಸ್ತುಗಳನ್ನು ಖರೀದಿಸುವಿರಿ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಅಧಿಕ ಲಾಭ. ಸಾಲದ ಹಣ ಈ ದಿನ ಹಿಂತಿರುಗಿ ಬರುವುದು.
ತುಲಾ
ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ತೇಜೋವಧೆ ಮಾಡಿದ ವ್ಯಕ್ತಿಗಳ ಎದುರು ಇಂದು ಅವರಿಗಿಂತ ಉತ್ತಮ ಸ್ಥಿತಿಯಲ್ಲಿರುವ ನೀವು ವಿನಯವನ್ನು ಮರೆಯದಿರಿ. ವೈಯಕ್ತಿಕ ಕೆಲಸಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ.
ವೃಶ್ಚಿಕ
ಏಕಕಾಲದಲ್ಲಿ ಹಲವು ಕೆಲಸಗಳನ್ನು ಗಮನಿಸಬೇಕಾದ ಅನಿವಾರ್ಯ ಎದುರಾಗುವುದು. ಹೊಸ ಮನೆಯ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಮನಸ್ಸಿಗೆ ನೆಮ್ಮದಿ ಸಿಗುವುದು. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ.
ಧನು
ನೀವು ಇರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ, ಕೂಡಲೇಬಗೆಹರಿಸಿಕೊಳ್ಳಿ. ಶಿಕ್ಷಣ ಕ್ಷೇತ್ರದಲ್ಲಿನ ನಿಮ್ಮ ಸೇವೆಗೆ ಸಂಘ –ಸಂಸ್ಥೆಗಳಿಂದ ಸನ್ಮಾನ ಸಿಗಲಿದೆ. ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ.
ಮಕರ
ಉದಾಸೀನತೆಯನ್ನು ದೂರ ಮಾಡುವುದರಿಂದ ಯಶಸ್ಸನ್ನು ಪಡೆಯಬಹುದು. ನಿಮ್ಮ ಸಹಾಯದ ಮನೋಭಾವದಿಂದ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳಲಿವೆ. ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ.
ಕುಂಭ
ಇಂದು ದೈನಂದಿನ ಚಟುವಟಿಕೆಗಳನ್ನು ಹೊರತುಪಡಿಸಿ ವಿಭಿನ್ನವಾದ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಿ. ಉದ್ಯೋಗದ ಹುಡುಕಾಟ ನಡೆಸುವವರಿಗೆ ಅಪರಿಚಿತ ವ್ಯಕ್ತಿಯಿಂದ ಸಹಾಯ ಆಗುವುದು.
ಮೀನ
ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿಮ್ಮೊಳಗಿನ ನಾಯಕನನ್ನು ಜಾಗೃತಗೊಳಿಸುವಿರಿ. ಇಂದು ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕಾಗುವುದು.
ADVERTISEMENT
ADVERTISEMENT