ಗುರುವಾರ, 11 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 17 ಮೇ 2026 ಭಾನುವಾರ– ಖರ್ಚಿನ ಮೇಲೆ ನಿಯಂತ್ರಣವಿರಲಿ
Published 16 ಮೇ 2026, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ಹೊಸದಾಗಿ ಕೈಗೊಂಡ ಕೆಲಸ ಸುಗಮವಾಗಿ ಸಾಗಲು ದೇವತಾ ಕಾರ್ಯ ಕೈಗೊಳ್ಳುವುದು ಉತ್ತಮ. ಸಂಬಂಧಿಕರೊಂದಿಗಿದ್ದ ವ್ಯವಹಾರಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಯುವ ಕಲಾವಿದರಿಗೆ ಪ್ರೋತ್ಸಾಹ ಸಿಗುವುದು.
ವೃಷಭ
ನಿಮಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಬುದ್ದಿವಂತಿಕೆಯಿಂದ ಎದುರಿಸಿ, ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರಿ. ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಅಧಿಕ ವ್ಯಾಪಾರ ಮತ್ತು ಲಾಭ ಸಿಗಲಿದೆ.
ಮಿಥುನ
ಮನದಲ್ಲಿ ಸಲ್ಲದ ವಿಚಾರಗಳನ್ನು ತುಂಬಿಕೊಳ್ಳದೇ, ಸಂತೋಷವಾಗಿ ಇರಲು ಯತ್ನಿಸಿ. ಹೊಸ ಮನೆಯೊಂದನ್ನು ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯಲಿದೆ. ಅವಶ್ಯಕತೆಗಿಂತ ಹೆಚ್ಚಾಗಿ ಹಣ ಸಂಗ್ರಹವಾಗುವುದು.
ಕರ್ಕಾಟಕ
ಧವಸ-ಧಾನ್ಯಗಳ ವ್ಯಾಪಾರಸ್ಥರು ಅವುಗಳನ್ನು ಶೇಖರಣೆ ಮಾಡಿದ್ದಲ್ಲಿ ಅಧಿಕ ಲಾಭ ಉಂಟಾಗುವ ಸಂಭವ ಇದೆ. ಇನ್ನೊಬ್ಬರಿಂದ ಹೇಳಿಸಿಕೊಂಡ ವಿಚಾರವನ್ನು ಅಗೌರವವೆಂದು ಭಾವಿಸಬೇಡಿ.
ಸಿಂಹ
ಒಂದು ಬಾರಿ ನಿರ್ಧರಿಸಿದ ನಿಲುವಿನಿಂದ ಹಿಂದೆ ಸರಿಯುವ ಯೋಚನೆಯನ್ನು ಮಾಡಬೇಡಿ. ಛಾಯಾಗ್ರಾಹಕರಿಗೆ ಪ್ರಶಸ್ತಿ ಪಡೆಯುವ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ಖರ್ಚಿನ ಮೇಲೆ ನಿಯಂತ್ರಣವಿರಲಿ.
ಕನ್ಯಾ
ಮರಕೆಲಸ ಮಾಡುವವರಿಗೆ ಹೆಚ್ಚಿನ ಅವಕಾಶಗಳು ಬಂದರೂ ಕೆಲಸಕ್ಕೆ ಸೋಮಾರಿತನ ಅಡ್ಡಬರುವುದು. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡ ಬೇಕಾಗಬಹುದು. ಕುಟುಂಬ ವರ್ಗದಲ್ಲಿ ಆರೋಗ್ಯ ಉತ್ತಮವಾಗಿ ಇರುವುದು.
ತುಲಾ
ನಿಮ್ಮ ಹೋರಾಟದ ಬದುಕಿನಲ್ಲಿ ಇಂದು ಹೊಸ ಜವಾಬ್ದಾರಿ ವಹಿಸಿಕೊಳ್ಳಬೇಕಾಗುವುದು. ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವಸನ್ನಿವೇಶಗಳು ನಡೆಯುವುವು. ಮೃದುಭಾಷಿಗಳು ಎನಿಸಿಕೊಳ್ಳುವಿರಿ.
ವೃಶ್ಚಿಕ
ಸಂಗೀತಗಾರರಿಗೆ ಮತ್ತು ಕ್ರೀಡಾಪಟುಗಳಿಗೆ ಸಾಧನೆಗೆ ಅವಕಾಶ ಸಿಗುವುದು. ಬಹಳ ಪ್ರಯತ್ನದಿಂದ ಗುತ್ತಿಗೆ ಕೆಲಸದ ಬಾಕಿ ಹಣ ಸಂದಾಯಆಗುವುದು. ಉಸಿರಾಟದ ಸಮಸ್ಯೆ ಎದುರಾಗಬಹುದು, ನಿರ್ಲಕ್ಷಬೇಡ.
ಧನು
ನಿಮ್ಮ ಕೆಲಸಗಳಿಂದ ಬೇರೆಯವರಿಗೆ ನಿಮ್ಮ ಮೇಲಿನ ಅಭಿಪ್ರಾಯಗಳು ಬದಲಾಗುವುವು. ನಿಮ್ಮ ಪ್ರಾಮಾಣಿಕತೆಯನ್ನು ಈ ದಿನ ದುರುಪಯೋಗಪಡಿಸಿಕೊಳ್ಳುವರು ಜಾಗ್ರತೆ. ಎಲ್ಲರನ್ನೂ ಗೌರವಯುತವಾಗಿ ನೋಡಿ.
ಮಕರ
ಗೊಂದಲದಲ್ಲಿ ಯಾವ ಹಾದಿಯನ್ನು ಆಯ್ದುಕೊಳ್ಳಬೇಕೆಂದು ಖಚಿತಇಲ್ಲದಿದ್ದರೂ ಮತ್ತೊಂದು ಅವಕಾಶವನ್ನು ಪರ್ಯಾಯವಾಗಿಟ್ಟುಕೊಳ್ಳುವಜಾಣ್ಮೆ ಪ್ರದರ್ಶಿಸಿ. ನಿಮ್ಮ ಸ್ಥಿತಿಯು ಬೆಕ್ಕಿನ ಬಾಯಿಗೆ ಸಿಕ್ಕ ಇಲಿಯಂತಿರುವುದು.
ಕುಂಭ
ರಾಜಕಾರಣಿಗಳಿಗೆ ನಿಕಟವರ್ತಿಗಳ ಪ್ರೋತ್ಸಾಹದಿಂದ ಸಾಮಾಜಿಕ ಬದುಕು ಸುಗಮವಾಗಲಿದೆ. ಸ್ನೇಹಿತರೊಂದಿಗೆ ಪ್ರವಾಸ ಮುಂದೂಡುವುದು ಉತ್ತಮ. ಮೇಧಾವಿಗಳ ಮೂಲಕ ಧನ ಸಂಪಾದನೆ ಹೊಂದುವಿರಿ.
ಮೀನ
ಅನಾರೋಗ್ಯದಿಂದ ಹೊರಬರಲು ಚಿಕಿತ್ಸೆಯ ಜೊತೆಯಲ್ಲಿ ಧಾರ್ಮಿಕ ಮಾರ್ಗವನ್ನೂ ಆಚರಿಸುವುದು ಶುಭಫಲಕ್ಕೆ ದಾರಿಯಾಗಲಿದೆ. ಆಪ್ತರ ಕಷ್ಟಗಳ ಕಡೆಗೆ ಗಮನ ಹರಿಸುವುದು ಸಾಧ್ಯವಾಗುತ್ತದೆ.
ADVERTISEMENT
ADVERTISEMENT