ಶನಿವಾರ, 13 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
10/05/2026 - 16/05/2026
ವಾರ ಭವಿಷ್ಯ | 10-05-2026ರಿಂದ 16-05-2026 ರವರೆಗೆ: ಶುಭ ವಾರ್ತೆ ಕೇಳುವಿರಿ
Published 10 ಮೇ 2026, 0:05 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಗುರುಹಿರಿಯರ ಸಹಾಯವನ್ನು ಪಡೆಯಲು ಸಾಕಷ್ಟು ಪ್ರಯತ್ನಪಡುವಿರಿ. ಆಸ್ತಿ ವ್ಯವಹಾರದಲ್ಲಿ ಸ್ವಲ್ಪ ಲಾಭವಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಕ್ಕಾಗಿ ಶ್ರಮಪಡಬೇಕು. ನರ ದೌರ್ಬಲ್ಯ ಇರುವವರು ಹೆಚ್ಚು ಎಚ್ಚರವಹಿಸಿರಿ. ಸಂಗಾತಿ ಇಷ್ಟದಂತೆ ಹೆಚ್ಚು ಹಣ ಖರ್ಚು ಮಾಡುವಿರಿ. ಕೃಷಿಯಲ್ಲಿ ಸಾಂಪ್ರದಾಯಿಕ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ. ತಂದೆಯ ವ್ಯವಹಾರಗಳಲ್ಲಿ ಪಾಲು ದೊರೆಯುತ್ತದೆ.
ವೃಷಭ
ಶ್ರೀಮಂತರಂತೆ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯವು ನಿಮ್ಮ ನಿರೀಕ್ಷೆ ತಲುಪುತ್ತದೆ. ನಿಮ್ಮ ಕೆಲಸಗಳಿಗೆ ಹಿರಿಯರ ಸಹಕಾರ ದೊರೆಯುತ್ತವೆ. ಕೃಷಿ ಭೂಮಿಯನ್ನು ಅಭಿವೃದ್ಧಿ ಮಾಡುವವರಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಸಂಗಾತಿಯೊಂದಿಗೆ ಮಾಡಿದ ಕೃಷಿ ವ್ಯವಹಾರಗಳು ಲಾಭ ತರುತ್ತವೆ. ಕೆಲವರಿಗೆ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ.
ಮಿಥುನ
ಎಲ್ಲರೆದುರಿಗೆ ಗಂಭೀರವಾದ ನಡವಳಿಕೆ ತೋರುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟು ಇರುವುದಿಲ್ಲ. ಗಣಿಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ. ಗಣಿತದ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಲಭಿಸುತ್ತದೆ. ಮಕ್ಕಳ ಪ್ರಗತಿ ನಿರೀಕ್ಷೆಗಿಂತ ಕಡಿಮೆ ಇರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರವಿರಲಿ. ಸಂಗಾತಿಯಿಂದ ಆರ್ಥಿಕ ಸಹಕಾರ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಪ್ರಗತಿ ಇರುವುದಿಲ್ಲ.
ಕರ್ಕಾಟಕ
ವಾರದ ಆರಂಭದಲ್ಲಿ ಸಂತೋಷವಾದ ವಾರ್ತೆಗಳನ್ನು ಕೇಳುವಿರಿ. ಆದಾಯವು ಕಡಿಮೆ ಇರುತ್ತದೆ. ಅಧ್ಯಾಪಕರಿಗೆ ಬೇಡಿಕೆಯ ಹೆಚ್ಚುತ್ತದೆ. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಪಾಲು ದೊರೆಯುತ್ತದೆ. ಆಭರಣಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಸಾಮಾನ್ಯ ಪ್ರಗತಿ ಇರುತ್ತದೆ. ನೀರಿನಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಪ್ರೇಮಿಗಳಿಗೆ ಈಗ ವಿವಾಹವಾಗುವ ಯೋಗವಿದೆ. ವಿದೇಶಿ ವ್ಯವಹಾರ ಮಾಡುವವರಿಗೆ ನಷ್ಟವಿರುವುದಿಲ್ಲ.
ಸಿಂಹ
ವಾರದ ಆರಂಭದಲ್ಲಿ ಧರ್ಮದ ಬಗ್ಗೆ ಮನಸ್ಸು ಕೇಂದ್ರೀಕೃತವಾಗಿರುತ್ತದೆ. ಆದಾಯವು ಸಾಮಾನ್ಯವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಂದ ವೃತ್ತಿಯಲ್ಲಿ ಅಭಿವೃದ್ಧಿ ಹೊಂದುವಿರಿ. ಆಸ್ತಿ ವಿಚಾರದಲ್ಲಿ ಸಾಕಷ್ಟು ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ ಅವರ ಅಪೇಕ್ಷಿತ ವಿಷಯಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಕೆಲವರಿಗೆ ನೇತ್ರ ಸಂಬಂಧಿ ದೋಷಗಳು ಕಾಣಿಸಬಹುದು. ಸಂಗಾತಿಯೊಂದಿಗೆ ಕಾವೇರಿದ ವಾತಾವರಣ ಇರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರವಾಗಿರಿ.
ಕನ್ಯಾ
ನಿಮ್ಮ ವಿಪರೀತ ಬುದ್ಧಿವಂತಿಕೆ ನಿಮಗೆ ಕೈಕೊಡುತ್ತದೆ. ಆದಾಯವು ಈಗ ಸಾಮಾನ್ಯಗತಿಯಲ್ಲಿ ಇರುತ್ತದೆ. ನಿಮ್ಮ ಕೆಲಸಗಳಿಗೆ ಸಂಗಾತಿ ಕಡೆಯವರು ಅಡ್ಡಿ ಮಾಡಬಹುದು. ಆಸ್ತಿ ಖರೀದಿಗೆ ಹಣ ಒಟ್ಟುಮಾಡುವ ಕೆಲಸ ಪ್ರಾರಂಭಿಸುವಿರಿ. ನೇತ್ರ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ವಿದೇಶದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಸಂಗಾತಿಯಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ವೃತ್ತಿಯಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಬಹುದು.
ತುಲಾ
ವಾರದ ಆರಂಭದಲ್ಲಿ ಸೋಮಾರಿತನ ಇರುತ್ತದೆ. ಆದಾಯವು ಸಾಮಾನ್ಯವಾಗಿರುತ್ತದೆ. ಬಂಧುಗಳ ಸಹಕಾರ ದೊರೆಯುತ್ತದೆ. ಕೃಷಿ ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಕೀಲು ನೋವು ಕೆಲವರಿಗೆ ಕಾಡಬಹುದು. ಸಂಗಾತಿ ಸಹಕಾರದಿಂದ ಸರ್ಕಾರಿ ವ್ಯವಹಾರಗಳಲ್ಲಿ ಅವಕಾಶ ದೊರೆಯುತ್ತದೆ. ಆಭರಣ ತಯಾರಕರಿಗೆ ನಿರೀಕ್ಷಿತ ವ್ಯಾಪಾರವಿರುವುದಿಲ್ಲ. ವೃತ್ತಿಯಲ್ಲಿ ಹೊಸ ಅವಕಾಶಗಳು ಈಗ ತೆರೆದುಕೊಳ್ಳುತ್ತವೆ.
ವೃಶ್ಚಿಕ
ಮುನ್ನುಗ್ಗುವ ಉತ್ಸಾಹ ಕಡಿಮೆಯಾದಂತೆ ಅನಿಸುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಸಹೋದರಿಯರ ದೊರೆಯುತ್ತವೆ. ಆಸ್ತಿ ಖರೀದಿ ವಿಚಾರದಲ್ಲಿ ಅತಿಯಾದ ಆತುರ ಬೇಡ. ನರದೌರ್ಬಲ್ಯ ಇರುವವರು ಎತ್ತರದ ಸ್ಥಳಗಳನ್ನು ಏರಲು ಹೋಗಬೇಡಿ. ಸಂಗಾತಿಯಿಂದ ಆರ್ಥಿಕ ಸಹಕಾರ ನಿರೀಕ್ಷೆ ಮಾಡಬಹುದು. ಹಿರಿಯರ ಕೋಪಕ್ಕೆ ಗುರಿಯಾಗುವ ಸಂದರ್ಭವಿದೆ. ಅಧ್ಯಾಪಕರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು.
ಧನು
ಸ್ವಲ್ಪ ಸೋತಿದ್ದ ಮನಸ್ಸು ಈಗ ಗೆಲುವಿನತ್ತ ಧಾವಿಸುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಭಾಷಣಕಾರರು ಮತ್ತು ಸಂಗೀತಗಾರರ ಆದಾಯ ಹೆಚ್ಚುತ್ತದೆ. ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ವಿರೋಧ ಬರಬಹುದು. ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸುವವರಿಗೆ ಉತ್ತಮ ಲಾಭವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ಹೆಚ್ಚು ಅಭಿವೃದ್ಧಿ ಇದೆ.
ಮಕರ
ಮನಸಿನಲ್ಲಿ ಬಹಳ ಶಾಂತತೆ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ವಿದೇಶಿ ಭಾಷಾ ಬೋಧಕರಿಗೆ ಆದಾಯ ಹೆಚ್ಚುತ್ತದೆ. ಬಂಧುಗಳ ನಡುವೆ ವಿರೋಧ ಹೆಚ್ಚುತ್ತದೆ. ಫ್ಯಾಷನ್‌ ಡಿಸೈನಿಂಗ್‌ ಓದುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯವಾಗಬಹುದು. ತಾಯಿಯಿಂದ ನಿಮಗೆ ಆರ್ಥಿಕ ಸಹಕಾರ ಸಿಗುತ್ತದೆ. ಹಿರಿಯರ ಆಸ್ತಿ ದೊರೆಯುವ ಸಂದರ್ಭವಿದೆ. ವೃತ್ತಿಯಲ್ಲಿ ನಿರೀಕ್ಷಿಸಿದ್ದ ಪ್ರಗತಿ ಇರುತ್ತದೆ.
ಕುಂಭ
ಆದಾಯ ಕಡಿಮೆ ಇರುತ್ತದೆ. ನಿಮ್ಮದೇ ಆದ ರೀತಿಯಿಂದ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗ ಸಿಗುತ್ತದೆ. ಹಿರಿಯರಿಗೆ ಈಗ ಸಮಾಜದ ಸಹಕಾರ ದೊರೆಯುತ್ತದೆ. ರೇಷ್ಮೆ ಬಟ್ಟೆ ತಯಾರಕರಿಗೆ ಹೆಚ್ಚಿನ ಲಾಭವಿದೆ. ವಿದ್ಯಾರ್ಥಿಗಳಿಗೆ ಅಪೇಕ್ಷಿಸಿದ ಫಲಿತಾಂಶ ಪಡೆಯುವ ಯೋಗವಿದೆ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಸಂಗಾತಿಯ ಸಲಹೆಯು ನಿಮಗೆ ಬಹಳ ಅಮೂಲ್ಯವಾಗಿರುತ್ತದೆ.
ಮೀನ
ಬಹಳ ಉಗ್ರತೆ ನಿಮ್ಮಲ್ಲಿ ಇರುತ್ತದೆ. ತೋರಿಕೆಯ ಮಾತಿನಿಂದ ಜನರನ್ನು ಗೆಲ್ಲುವುದು ಕಷ್ಟ. ಆದಾಯವು ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಸ್ತ್ರೀಯರ ಸಹಕಾರದಿಂದ ನಿಮ್ಮ ಕೆಲಸಗಳು ಕೈಗೂಡುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳಿವೆ. ಚರ್ಮರೋಗ ಕಾಡಬಹುದು. ಸಂಗಾತಿಯಿಂದ ಅಪೇಕ್ಷಿಸಿದ್ದ ಆರ್ಥಿಕ ಸಹಕಾರ ದೊರೆಯುತ್ತದೆ. ಕೆಲವರಿಗೆ ಹಿರಿಯರ ಒಡವೆಗಳು ಉಡುಗೊರೆಯಾಗಿ ದೊರೆಯಬಹುದು. ವೃತ್ತಿಯಲ್ಲಿ ನಿರೀಕ್ಷಿತ ಅನುಕೂಲವಿದೆ.
ADVERTISEMENT
ADVERTISEMENT