ವಾರ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಸಂಬಳ ಹೆಚ್ಚುವ ಸಾಧ್ಯತೆಗಳಿವೆ
Published 30 ಮೇ 2026, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಮನಸ್ಸಿನಲ್ಲಿ ವಿಚಿತ್ರ ರೀತಿಯ ಕೋಪವಿರುತ್ತದೆ. ಆದಾಯವು ಸ್ವಲ್ಪ ಉತ್ತಮವಾಗಿರುತ್ತದೆ. ನಿಮ್ಮ ಮತ್ತು ಬಂಧುಗಳ ನಡುವೆ ಜಿಜ್ಞಾಸೆ ಬೆಳೆಯುತ್ತದೆ. ಆಸ್ತಿ ಮಾರಾಟಗಾರರಿಗೆ ನಿರೀಕ್ಷಿತ ಲಾಭವಿರುವುದಿಲ್ಲ. ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಹೆಚ್ಚು ಕಷ್ಟಪಡಬೇಕು. ಸಂಗಾತಿಯ ಪ್ರಭಾವ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ಅನಿರೀಕ್ಷಿತ ಖರ್ಚುಗಳು ಬರಬಹುದು. ವಿದೇಶದಲ್ಲಿ ಕೆಲಸವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ.
ವೃಷಭ
ಸ್ವಂತ ಗೌರವಕ್ಕೆ ಹೆಚ್ಚಿನ ಆದ್ಯತೆ ಕೊಡುವಿರಿ. ಆದಾಯವು ನಿಮ್ಮ ಅಗತ್ಯವನ್ನು ಮೀರಿ ಇರುತ್ತದೆ. ಕೃಷಿಭೂಮಿ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಕೆಲವರಿಗೆ ಮೂತ್ರ ಸಂಬಂಧಿ ದೋಷಗಳು ಕಾಣಿಸಬಹುದು. ಪ್ರೀತಿಪ್ರೇಮದಲ್ಲಿ ಇರುವವರಿಗೆ ಯಶಸ್ಸು ದೊರೆಯುತ್ತದೆ. ಈಗ ಯಾವುದೋ ಹೂಡಿಕೆಯಿಂದ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ.
ಮಿಥುನ
ನಿಮ್ಮ ವ್ಯಕ್ತಿತ್ವದ ಚಹರೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುವಿರಿ. ಆದಾಯ ಕಡಿಮೆ ಇರುತ್ತದೆ. ನಿಮ್ಮ ಧಾರ್ಮಿಕ ಕೆಲಸಗಳಿಗೆ ಬಂಧುಗಳ ಬೆಂಬಲ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ಕೃಷಿಯಿಂದ ಹೆಚ್ಚು ಲಾಭವನ್ನು ನಿರೀಕ್ಷೆ ಮಾಡಬಹುದು.
ಕರ್ಕಾಟಕ
ಆನಂದ ಹೆಚ್ಚಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಬಂಧುಗಳು ನಿಮಗೆ ವ್ಯವಹಾರದಲ್ಲಿ ಮೋಸ ಮಾಡಬಹುದು. ಆಸ್ತಿ ವ್ಯವಹಾರದಲ್ಲಿ ನಷ್ಟವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ರಕ್ತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಕಡೆಯವರಿಂದ ನಿಮಗೆ ಅನುಕೂಲಗಳಿವೆ. ವಿದೇಶಿ ವ್ಯವಹಾರದಲ್ಲಿ ಸ್ವಲ್ಪ ಏರುಪೇರಾಗಬಹುದು. ಪಿತ್ರಾರ್ಜಿತ ಆಸ್ತಿಗಳಲ್ಲಿ ಪಾಲು ದೊರೆಯುತ್ತದೆ.
ಸಿಂಹ
ಧಾರ್ಮಿಕ ಮುಖಂಡರುಗಳಿಗೆ ಉತ್ತಮ ಮನ್ನಣೆ ಸಿಗುತ್ತದೆ. ಆದಾಯವು ಸ್ವಲ್ಪ ಉತ್ತಮಗೊಳ್ಳುತ್ತದೆ. ಬಂಧುಗಳೊಡನೆ ಒಳ್ಳೆಯ ಸಂಬಂಧ ಇರುವುದಿಲ್ಲ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಂಗಾತಿಯೊಡನೆ ವಾಗ್ವಾದಗಳಾಗುವ ಸಾಧ್ಯತೆಯಿದೆ.ಕೃಷಿಯಿಂದ ಲಾಭವಿರುತ್ತದೆ.
ಕನ್ಯಾ
ವಾರದ ಆರಂಭದಲ್ಲಿ ಎಲ್ಲದರಲ್ಲೂ ಮಂದಗತಿ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ಆಸ್ತಿ ಖರೀದಿ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಕೆಲವರಿಗೆ ಶ್ವಾಸಕೋಶದ ತೊಂದರೆಗಳು ಕಾಣಿಸಬಹುದು. ಕೃಷಿಯಿಂದ ಹೆಚ್ಚು ಆದಾಯ ಇರುವುದಿಲ್ಲ. ಉದ್ಯೋಗದಲ್ಲಿ ಅನುಕೂಲಗಳು ಹೆಚ್ಚುತ್ತವೆ. ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಸುವ ಮಧ್ಯವರ್ತಿಗಳಿಗೆ ಆದಾಯ ಹೆಚ್ಚುತ್ತದೆ.
ತುಲಾ
ಆರಂಭದಲ್ಲಿ ಬಹಳ ದ್ವಂದ್ವ ನಿಲುವುಗಳಿರುತ್ತವೆ. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ನಿರೀಕ್ಷಿತ ಲಾಭವಿರುತ್ತದೆ. ವಿದೇಶಿ ವಿದ್ಯಾಭ್ಯಾಸದ ಪ್ರಚಾರ ಮಾಡುವ ಏಜೆನ್ಸಿಗಳಿಗೆ ಹೆಚ್ಚು ಲಾಭ ಇರುತ್ತದೆ. ಮೂಳೆ ತಜ್ಞರಿಗೆ ಬೇಡಿಕೆ ಮತ್ತು ಆದಾಯವು ಹೆಚ್ಚುತ್ತದೆ. ನಿಮ್ಮ ಸಂಗಾತಿಯಿಂದ ಹೆಚ್ಚು ಪ್ರತಿರೋಧವನ್ನು ಕಾಣಬಹುದು.
ವೃಶ್ಚಿಕ
ವಾರದ ಆರಂಭದಲ್ಲಿ ಬಹಳ ಆನಂದವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳು ನಿಮ್ಮ ಬಗ್ಗೆ ಸಹಾನುಭೂತಿ ತೋರುವವರು. ವಿದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇದೆ. ಕೃಷಿಯಿಂದ ಆದಾಯವು ಕಡಿಮೆಯಾಗಬಹುದು. ಪತ್ರಿಕೆ ಮತ್ತು ಸಿನಿಮಾ ಕ್ಷೇತ್ರದ ಕೆಲವರಿಗೆ ಹಿನ್ನಡೆಯಾಗಬಹುದು. ಹಿರಿಯರ ಆಸ್ತಿಯಲ್ಲಿ ಪಾಲು ದೊರೆಯುತ್ತದೆ.
ಧನು
ಸಾಮಾಜಿಕ ಕಾರ್ಯಗಳನ್ನು ಮಾಡುವುದರಲ್ಲಿ ಆಸಕ್ತಿ ತೋರುವಿರಿ. ಆದಾಯವು ಕಡಿಮೆ ಇದ್ದರೂ, ತೊಂದರೆ ಇರುವುದಿಲ್ಲ. ಬಂಧುಗಳ ಕುರಿತು ಸ್ವಲ್ಪ ಎಚ್ಚರವಾಗಿರಿ. ಕೃಷಿಭೂಮಿಯಿಂದ ಆದಾಯ ಹೆಚ್ಚುತ್ತದೆ. ಸೈನ್ಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ಬಡ್ತಿ ದೊರೆಯುವ ಸಂದರ್ಭವಿದೆ. ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯುತ್ತದೆ. ಮುನಿಸಿಕೊಂಡಿದ್ದ ತಾಯಿ ಈಗ ನಿಮ್ಮ ಮೇಲೆ ಪ್ರೀತಿ ತೋರುವರು.
ಮಕರ
ನಿಮ್ಮ ವೃತ್ತಿಪರತೆ ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ. ಆದಾಯ ಬಹಳ ಹೆಚ್ಚುತ್ತದೆ. ವಿದೇಶಿ ವ್ಯವಹಾರ ಮಾಡುವವರ ಆದಾಯವು ಕೂಡ ಹೆಚ್ಚುತ್ತದೆ. ಶತ್ರುಗಳಿಗೆ ನಿಮ್ಮನ್ನು ಕಂಡರೆ ಭಯ ಹುಟ್ಟುತ್ತದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಹೃದಯ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಪ್ರೀತಿ ಪ್ರೇಮದಲ್ಲಿರುವವರಿಗೆ ಯಶಸ್ಸು ದೊರೆಯುತ್ತದೆ.
ಕುಂಭ
ವ್ಯಾಯಾಮ ಶಾಲೆ ನಡೆಸುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಹಾಗೂ ಆದಾಯ ಇರುತ್ತದೆ. ನಿಮ್ಮ ನಿಯಮಿತ ಆದಾಯ ಕಡಿಮೆ ಇರುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ.ರಾಜಕಾರಣಿಗಳಿಗೆ ಆರ್ಥಿಕ ಮೋಸವಾಗಬಹುದು. ಸರ್ಕಾರಿ ಮಧ್ಯವರ್ತಿಗಳ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಈಗ ಎಲ್ಲ ವಿಷಯಗಳಲ್ಲೂ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಶೀತಬಾಧೆ ಇರುವವರು ಎಚ್ಚರ ವಹಿಸಿರಿ.
ಮೀನ
ಶ್ರಮಪಟ್ಟು ದುಡಿಯಲೇ ಬೇಕಾದ ಸಂದರ್ಭವಿದೆ. ಕೃಷಿಯಿಂದ ಆದಾಯ ಹೆಚ್ಚುತ್ತದೆ. ನಿಮ್ಮ ಒರಟು ಮಾತುಗಳು ನಿಮಗೆ ಮುಳುವಾಗಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ಕೆಲವರಿಗೆ ಶಸ್ತ್ರ ಚಿಕಿತ್ಸೆಯಾಗಬಹುದು. ಸಂಗಾತಿಯ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ಅನಿರೀಕ್ಷಿತ ಖರ್ಚು ಬರುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಸಂಬಳ ಹೆಚ್ಚುವ ಸಾಧ್ಯತೆಗಳಿವೆ.