ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಕೆಲವೊಮ್ಮೆ ಪ್ರತಿರೋಧ ಕಾಣಬಹುದು
Published 16 ಮೇ 2026, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಕೆಲಸಗಳಿಗೆ ತಕ್ಕ ಸಿದ್ಧತೆ ಮಾಡಿಕೊಳ್ಳುವಿರಿ. ಆದಾಯವು ಈಗ ಮಧ್ಯಮಗತಿಯಲ್ಲಿರುತ್ತದೆ. ಹಿರಿಯರ ಸಹಕಾರ ಪಡೆಯಲು ಸಾಕಷ್ಟು ವಶೀಲಿ ಮಾಡುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭವಿದೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಈಗ ಸಾಕಷ್ಟು ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ಮಂದಗತಿಯ ಪ್ರಗತಿ ಇರುತ್ತದೆ.
ವೃಷಭ
ವ್ಯವಹಾರ ಚತುರರಾಗಿರುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಎಲ್ಲರನ್ನೂ ಒಳಗೊಂಡು ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಗಣಿತ ವಿದ್ಯಾರ್ಥಿಗಳಿಗೆ ಈಗ ನಿರೀಕ್ಷೆಗೆ ಮೀರಿದ ಯಶಸ್ಸು ಇರುತ್ತದೆ. ಕೆಲವರಿಗೆ ನರಸಂಬಂಧಿ ದೋಷಗಳು ಕಾಣಿಸಬಹುದು.
ಮಿಥುನ
ಅಧ್ಯಾಪಕರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಭೂಮಿ ವ್ಯವಹಾರಗಳಲ್ಲಿ ನಷ್ಟವಾಗುವ ಸಂದರ್ಭವಿದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ಸಂಗಾತಿಯಿಂದ ನಿಮ್ಮ ನಿರೀಕ್ಷೆಗೆ ಮೀರಿ ಆರ್ಥಿಕ ಸಹಾಯ ಸಿಗುತ್ತದೆ. ವೃತ್ತಿ ಸ್ಥಳದಲ್ಲಿ ಒತ್ತಡಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಹಿರಿಯರಿಗೆ ದೂರ ಪ್ರಯಾಣ ಮಾಡುವ ಯೋಗವಿದೆ. ಕೃಷಿಯಿಂದ ಅತಿ ಹೆಚ್ಚು ಲಾಭ ದೊರೆಯುತ್ತದೆ.
ಕರ್ಕಾಟಕ
ಏನೋ ಸಾಧಿಸಿದ ಹುಮ್ಮಸ್ಸು ಮನಸಿನಲ್ಲಿರುತ್ತದೆ. ಆದಾಯವು ಬಹಳ ಕಡಿಮೆ ಇರುತ್ತದೆ. ನಿಮ್ಮ ಮಾತು ಕಟುವಾಗದಿರಲಿ. ಬಂಧುಗಳ ನೆರವಿನಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಮಹಿಳಾ ಉದ್ಯೋಗಿಗಳಿಗೆ ಈಗ ಹೆಚ್ಚು ಪ್ರಗತಿ ಇರುತ್ತದೆ. ಉದ್ಯೋಗದಲ್ಲಿ ಹೆಚ್ಚು ಚುರುಕುತನ ತೋರುವಿರಿ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚು ಲಾಭವಿದೆ.
ಸಿಂಹ
ವಾರದ ಆರಂಭದಲ್ಲಿ ಅತಿಯಾದ ಸೋಮಾರಿತನ ಇರುತ್ತದೆ. ನಿಮ್ಮ ಜಾಣ್ಮೆಯಿಂದ ಆದಾಯ ಹೆಚ್ಚು ಮಾಡಿಕೊಳ್ಳಬಹುದು. ಆಸ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ಆಸ್ತಿ ಹೊಂದುವ ಯೋಗವಿದೆ. ಈಗ ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ದೊರೆಯುತ್ತದೆ. ಕೆಲವರಿಗೆ ವಿದೇಶದಲ್ಲಿರುವ ಸಂಗಾತಿಯನ್ನು ಹೋಗಿ ಸೇರಿಕೊಳ್ಳುವ ಅವಕಾಶವಿರುತ್ತದೆ. ವಾಹನ ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ.
ಕನ್ಯಾ
ಕೆಲಸ ಮಾಡಲು ಹೆಚ್ಚು ಉತ್ಸಾಹ ಇರುವುದಿಲ್ಲ. ಹಿರಿಯರಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಬಂಧುಗಳಿಂದ ಹೆಚ್ಚಿನ ಸಹಕಾರ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ಕೀಲು ನೋವು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಈಗ ಸಹಕಾರ ಕಡಿಮೆಯಾಗುತ್ತದೆ.
ತುಲಾ
ದೇಹ ಗಟ್ಟಿಮಾಡಿಕೊಳ್ಳುವ ಕಡೆಗೆ ಹೆಚ್ಚು ಗಮನಹರಿಸುವಿರಿ. ಆದಾಯವು ಈಗ ಕಡಿಮೆ ಇದ್ದರೂ, ಸಂಗಾತಿಯ ಜತೆಗೂಡಿ ಅದನ್ನು ಹೆಚ್ಚು ಮಾಡಿಕೊಳ್ಳಬಹುದು. ಹಿರಿಯರ ಸಲಹೆ ನಿಮಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಹಳೆಯ ತಳಿಗಳನ್ನು ಸಂರಕ್ಷಿಸಿಕೊಂಡು ಬರುತ್ತಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ಮೂಳೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯಿಂದ ಕೆಲವೊಮ್ಮೆ ಪ್ರತಿರೋಧ ಕಾಣಬಹುದು.
ವೃಶ್ಚಿಕ
ಆದಾಯವು ಈಗ ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳಿಂದ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ದೊರೆಯಬಹುದು. ವಿದೇಶದಲ್ಲಿರುವವರಿಗೆ ಆಸ್ತಿ ಮಾಡಿಕೊಳ್ಳುವ ಯೋಗವಿದೆ. ಲೋಹಶಾಸ್ತ್ರ ಓದುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ನಿಮ್ಮ ಸಂಗಾತಿಯ ನೆರವಿನಿಂದ ಸರ್ಕಾರಿ ಕೆಲಸಗಳು ಬೇಗ ಆಗುತ್ತವೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಕಾನೂನಿನ ತೊಡಕುಗಳು ಬರಬಹುದು.
ಧನು
ಎಲ್ಲರಿಗೂ ತಿಳಿ ಹೇಳುವ ಪ್ರಯತ್ನ ಮಾಡುವಿರಿ. ಆದಾಯವು ಕಡಿಮೆ ಇದ್ದು, ಅದರಲ್ಲೇ ಅನುಸರಿಸುವಿರಿ. ಬಂಧುಗಳ ನಡುವಿನ ವೈಶಮ್ಯ ಹೆಚ್ಚಾಗಬಹುದು. ಕೃಷಿಭೂಮಿಯನ್ನು ಅಭಿವೃದ್ಧಿಪಡಿಸಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಮೂತ್ರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಬಟ್ಟೆಯ ಮೇಲೆ ಕಸೂತಿ ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು.
ಮಕರ
ಎಲ್ಲರೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳುವಿರಿ. ಆದಾಯವು ಸಾಮಾನ್ಯವಾಗಿರುತ್ತದೆ. ವಿದೇಶಿ ವ್ಯಾಪಾರ ಮಾಡುವವರ ಆದಾಯ ಹೆಚ್ಚುತ್ತದೆ. ಕೃಷಿಯಿಂದ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ದೊರೆಯುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು. ದೈವಕಾರ್ಯ ಮಾಡುವವರಿಗೆ ಅನಿರೀಕ್ಷಿತ ಪ್ರಗತಿ ಇರುತ್ತದೆ. ವೃತ್ತಿಯಲ್ಲಿ ಪ್ರಗತಿ ಇರುತ್ತದೆ.
ಕುಂಭ
ಆದಾಯವು ಕಡಿಮೆ ಇರುತ್ತದೆ. ಕೃಷಿಯಿಂದ ಆದಾಯ ಬರುತ್ತದೆ. ಬಂಧುಗಳಿಂದ ಸ್ವಲ್ಪಮಟ್ಟಿನ ಸಹಕಾರ ದೊರೆಯುತ್ತದೆ. ದಲ್ಲಾಳಿಗಳಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶ ಪಡೆಯುವ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮ ಸಂಗಾತಿ ಮಾಡುವ ಧಾರ್ಮಿಕ ಕಾರ್ಯಗಳಿಂದ ನಿಮಗೆ ಅನುಕೂಲವಾಗುತ್ತದೆ. ಹಿರಿಯರಿಗೆ ಸಮಾಜದಿಂದ ಗೌರವ ದೊರೆಯುತ್ತದೆ.
ಮೀನ
ಎಲ್ಲ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತವೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ನಿಮ್ಮ ನಿರೀಕ್ಷೆಯಂತೆ ಬಂಧುಗಳ ಸಹಕಾರ ದೊರೆಯುವ ಸಾಧ್ಯತೆ ಇದೆ. ಇಚ್ಛೆಪಟ್ಟ ಆಸ್ತಿಯನ್ನು ಕೊಳ್ಳುವ ಪ್ರಯತ್ನ ಮಾಡಬಹುದು. ವಿದ್ಯಾರ್ಥಿಗಳಿಗೆ ಮಧ್ಯಮಗತಿಯ ಫಲಿತಾಂಶವಿರುತ್ತದೆ. ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.