ವಾರ ಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುವ ಸಾಧ್ಯತೆ
Published 24 ಮೇ 2026, 0:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮಲ್ಲಿ ಹೊಸ ಶಕ್ತಿ, ಹೊಸ ಹುಮ್ಮಸ್ಸು ತುಂಬಿರುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಕೃಷಿ ಮಧ್ಯವರ್ತಿಗಳಿಗೆ ಸಾಕಷ್ಟು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ. ಬಾಯಿ ಅಥವಾ ಹಲ್ಲಿನ ತೊಂದರೆಗಳು ಕಾಣಿಸಬಹುದು. ಕೃಷಿಯಿಂದ ಅನಿರೀಕ್ಷಿತ ಆದಾಯ ಬರುವ ಸಾಧ್ಯತೆಗಳಿವೆ. ತಂದೆಯಿಂದ ನಿಮಗೆ ಆರ್ಥಿಕ ಸಹಾಯ ಸಿಗಬಹುದು.
ವೃಷಭ
ನಿಮ್ಮಲ್ಲಿ ಅತಿಯಾದ ಆತ್ಮವಿಶ್ವಾಸ ಇರುತ್ತದೆ. ಆದಾಯವು ನಿರೀಕ್ಷೆಗೆ ಮೀರಿ ಇರುತ್ತದೆ. ತಾಯಿಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಈಗ ಹೆಚ್ಚಿನ ಯಶಸ್ಸು ಪಡೆಯುವ ಯೋಗವಿದೆ. ಸಂಗಾತಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಹಿರಿಯರ ಆಸ್ತಿಯಲ್ಲಿ ಪಾಲು ದೊರೆಯುವ ಸಂದರ್ಭವಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಹೆಚ್ಚು ಅನುಕೂಲವಿರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ.
ಮಿಥುನ
ಅತಿಯಾದ ಶ್ರೀಮಂತರಂತೆ ವರ್ತಿಸುವಿರಿ. ಆದಾಯವು ಕಡಿಮೆ ಇರುತ್ತದೆ. ತಾಯಿಯಿಂದ ಅತಿ ಹೆಚ್ಚು ಸಹಕಾರ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ಸಾಕಷ್ಟು ಎಚ್ಚರವಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ಶಸ್ತ್ರಚಿಕಿತ್ಸಕರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಸಂಗಾತಿಯಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಈಗ ವೃತ್ತಿಯಲ್ಲಿದ್ದ ತೊಂದರೆಗಳು ಸ್ವಲ್ಪ ಕಡಿಮೆಯಾಗುತ್ತವೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಕೃಷಿ ಸಂಬಂಧಿತ ಉಪಕರಣಗಳನ್ನು ಮಾರುವವರಿಗೆ ಲಾಭವಿದೆ.
ಕರ್ಕಾಟಕ
ವಾರದ ಆರಂಭದಲ್ಲೇ ಹಣ ಗಳಿಸುವ ಯೋಚನೆ ಮಾಡುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಸಂಪಾದನೆ ಹೆಚ್ಚು ಮಾಡಿಕೊಳ್ಳಬಹುದು. ಆಸ್ತಿ ವಹಿವಾಟು ನಡೆಸುವವರಿಗೆ ಹೆಚ್ಚಿನ ಲಾಭವಿದೆ. ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅಭಿವೃದ್ಧಿ ಇದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಬಹುದು. ನಿಮ್ಮ ಸಂಗಾತಿಗೆ ಹಿರಿಯರ ಆಸ್ತಿ ದೊರೆಯುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ವಿದೇಶಿ ವ್ಯವಹಾರದಲ್ಲಿ ಹೆಚ್ಚು ಲಾಭ ಬರುತ್ತದೆ. ವೃತ್ತಿಯಲ್ಲಿ ಹೊಸ ಉತ್ಸಾಹದಿಂದ ಕೆಲಸ ಮಾಡುವಿರಿ.
ಸಿಂಹ
ವಾರದ ಆರಂಭದಲ್ಲಿ ಮನಸ್ಸಿನಲ್ಲಿ ಬಹಳ ಸಂತೋಷವಿರುತ್ತದೆ. ಸರ್ಕಾರಿ ಸಂಬಂಧಿತ ಕೆಲಸಗಳಲ್ಲಿ ಹೆಚ್ಚು ಆದಾಯವಿರುತ್ತದೆ. ನಿಮ್ಮ ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ. ಮಲಬದ್ಧತೆ ಕೆಲವರನ್ನು ಕಾಡಬಹುದು. ವಿದೇಶದಲ್ಲಿರುವವರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆಗಳಿವೆ. ಮೂಳೆ ಸಂಬಂಧಿತ ನೋವು ಕಾಣಿಸಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆ ಇರುತ್ತದೆ.
ಕನ್ಯಾ
ಬುದ್ದಿವಂತಿಕೆಯನ್ನು ಬಳಸಿಕೊಂಡು ಎಲ್ಲರ ಬಳಿ ನಿಮ್ಮ ಕೆಲಸ ಮಾಡಿಸುವಿರಿ. ಈಗ ಆದಾಯವು ಕಡಿಮೆ ಇರುತ್ತದೆ. ಸಂಗಾತಿ ಕಡೆಯವರಿಂದ ನಿಮಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಸಾಧಾರಣ ಫಲಿತಾಂಶ ಇರುತ್ತದೆ. ಕೀಲು ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯಿಂದ ನಿರೀಕ್ಷಿತ ಸಹಾಯ ದೊರೆಯುವುದಿಲ್ಲ. ಕೃಷಿಯಿಂದ ಆದಾಯ ಕಡಿಮೆಯಾಗುವ ಸಾಧ್ಯತೆಗಳಿವೆ.
ತುಲಾ
ವಾರದ ಆರಂಭದಲ್ಲಿ ಅತಿ ಆಲಸಿತನ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಆದಾಯವಿರುತ್ತದೆ. ನಿಮ್ಮ ಹಿರಿಯರ ಸಹಕಾರದಿಂದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು. ಕೃಷಿ ಸಂಬಂಧಿತ ಉಪಕರಣಗಳನ್ನು ತಯಾರಿಸುವವರಿಗೆ ಲಾಭವಿದೆ. ವಿದೇಶದಲ್ಲಿ ಓದಬೇಕೆಂದು ಆಶಿಸುತ್ತಿದ್ದವರಿಗೆ ಈಗ ಉತ್ತಮ ಅವಕಾಶ ದೊರೆಯುತ್ತದೆ. ಮೂಳೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ.
ವೃಶ್ಚಿಕ
ವ್ಯವಹಾರ ಜ್ಞಾನ ಬಹಳ ಹೆಚ್ಚಾಗಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಶತ್ರುಗಳನ್ನು ಮಟ್ಟ ಹಾಕುವ ವಿದ್ಯೆ ಈಗ ಸಿದ್ಧಿಸುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಕಲಿಯುತ್ತಿರುವವರಿಗೆ ಅಭಿವೃದ್ಧಿ ಇದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ. ಬೆಂಕಿಯೊಡನೆ ಕೆಲಸ ಮಾಡುವವರು ಬಹಳ ಎಚ್ಚರದಿಂದಿರಿ. ಆಭರಣ ತಯಾರಕರಿಗೆ ಅನಿರೀಕ್ಷಿತ ಲಾಭ ಇರುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭವಿರುತ್ತದೆ.
ಧನು
ನಿಮ್ಮ ಮೇಲೆ ನಿಮಗೆ ನಂಬಿಕೆ ಸಂಪೂರ್ಣವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ಬಂಧುಗಳ ವಿರೋಧವಿರುತ್ತದೆ. ಕೃಷಿಭೂಮಿಯನ್ನು ಕೊಳ್ಳುವ ಯೋಗವಿದೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ಕಣ್ಣಿನ ತೊಂದರೆ ಕೆಲವರನ್ನು ಕಾಡಬಹುದು. ಸಂಗಾತಿಯು ನಿಮ್ಮ ಅಪೇಕ್ಷೆಗೆ ಮೊದಲೇ ಆರ್ಥಿಕ ಸಹಾಯ ಮಾಡುವರು. ವೃತ್ತಿಯಲ್ಲಿ ಸ್ವಲ್ಪ ಏರುಪೇರು ಇರುತ್ತದೆ. ರೇಷ್ಮೆ ಬಟ್ಟೆ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ.
ಮಕರ
ಬಹಳ ಚುರುಕಾಗಿ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಿರಿ. ಆದಾಯ ಕಡಿಮೆ ಇದ್ದರೂ, ನಿಭಾಯಿಸುವಿರಿ. ಮಾತನಾಡುವಾಗ ಎಚ್ಚರವಿರಲಿ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಶತ್ರುಗಳನ್ನು ಹುಡುಕಿ ಮಟ್ಟ ಹಾಕುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇದೆ. ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಉತ್ತಮ ಅಭಿವೃದ್ಧಿ ಇದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ತಾಯಿಯಿಂದ ಕಠಿಣ ಮಾತುಗಳನ್ನು ಕೇಳಬೇಕಾಗಬಹುದು.
ಕುಂಭ
ಯುವಕರಲ್ಲಿ ಕೋಪ ಹೆಚ್ಚಾಗಬಹುದು.ಆದಾಯವು ಕಡಿಮೆ ಇರುತ್ತದೆ. ಹಿರಿಯರಿಗೆ ಸಮಾಜದಿಂದ ಉತ್ತಮ ಸಹಕಾರ ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯುವ ಯೋಗವಿದೆ. ಪ್ರೀತಿ, ಪ್ರೇಮಗಳು ವಿಫಲವಾಗಬಹುದು. ಸಂಗಾತಿಯಿಂದ ನಿರೀಕ್ಷಿಸಿದ ಸಹಾಯ ದೊರೆಯುತ್ತದೆ. ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ.
ಮೀನ
ನಿಮಗೆ ಶ್ರಮಪಟ್ಟು ಕೆಲಸ ಮಾಡುವುದು ಬೇಡವೆನಿಸಬಹುದು. ಕೃಷಿಯಿಂದ ಆದಾಯ ಬರುತ್ತದೆ. ನೀವಾಡುವ ಕೊಂಕುಮಾತು ನಿಮಗೆ ಮುಳುವಾಗಬಹುದು. ಬಂಧುಗಳಿಂದ ನಿರೀಕ್ಷಿಸಿದ ಸಹಕಾರ ದೊರೆಯುವುದಿಲ್ಲ. ಆಸ್ತಿ ಕೊಳ್ಳಲು ಬೇಕಾದ ಹಣಕಾಸಿನ ನೆರವು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಅವಕಾಶ ದೊರೆಯುತ್ತದೆ. ವೃತ್ತಿಯಲ್ಲಿ ಏಳಿಗೆಯಿದೆ.