ಪ್ರಸ್ತುತ ದಿನಗಳಲ್ಲಿ ಮಹಾನಗರದಲ್ಲಿರುವ ಕಟ್ಟಡಗಳು ಪರಿಸರ ಸೂಕ್ಷ್ಮತೆಯನ್ನು (Eco – Sensitive) ಒಳಗೊಂಡಂತೆ ನಿರ್ಮಾಣ ಮಾಡಲಾಗುತ್ತದೆ. ಈ ಮಾದರಿಯ ಕಟ್ಟಡಗಳು ಸುಂದರವಾಗಿರುತ್ತವೆ. ಈ ಕಟ್ಟಡಗಳು ಬೇಸಿಗೆಯಲ್ಲಿ ಆಂತರಿಕ ತಾಪಮಾನವನ್ನು ನಿಯಂತ್ರಿಸುವುದರ ಜೊತೆಗೆ ಕಡಿಮೆ ಖರ್ಚಿನಲ್ಲಿ ನಿರ್ಮಾಣ ಮಾಡಬಹುದು. ಪಾಲಿಕೆಯ ಮೇಲಿನ ನೀರು ಮತ್ತು ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಪರಿಸರ ಸೂಕ್ಷ್ಮ (Eco – Sensitive) ಕಟ್ಟಡ ಎಂದರೇನು ?

ವಿನ್ಯಾಸದ ದೃಷ್ಟಿಯಿಂದ ನೋಡುವುದಾದರೆ, ಒಂದು ನಿವೇಶನವನ್ನು ಅದರ ಮೂಲ ಅರಿತು ನಿರ್ಮಾಣ ಮಾಡುವುದೇ ಪರಿಸರ ಸೂಕ್ಷ್ಮ ಕಟ್ಟಡ. ಜೊತೆಗೆ ಹವಾಮಾನ ಮತ್ತು ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ವಿನ್ಯಾಸ ಮಾಡುವುದಾಗಿದೆ. ಇಂತಹ ಕಟ್ಟಡವನ್ನು ನಿರ್ಮಾಣ ಮಾಡಲು ಹವಾಮಾನ ಮತ್ತು ಪರಿಸರದ ಬಗ್ಗೆ ಅರಿವು ಬಹಳ ಮುಖ್ಯ. ಎಲ್ಲದಕ್ಕಿಂತ ಮುಖ್ಯವಾಗಿ ಆ ಸ್ಥಳದ ಪರಿಸರದ ಅನುಭೂತಿ ಬಹಳ ಮುಖ್ಯ.

ತಂತ್ರಜ್ಞಾನದ ಸಹಾಯದಿಂದ ಮನೆ ನಿರ್ಮಾಣ ಮಾಡಬೇಕಾಗಿರುವ ಸ್ಥಳದ ಹವಾಮಾನದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಜೊತೆಗೆ ಸ್ಥಳೀಯವಾಗಿ ವಾಸಿಸುತ್ತಿರುವ ಜನರ ಬಳಿ ಕೇಳಿಯೂ ಮಾಹಿತಿ ಕಲೆಹಾಕಬಹುದು. ಮಾಹಿತಿಯಲ್ಲಿ ಸ್ಥಳದ ತಾಪಮಾನ, ಮಳೆಯ ಅವಧಿ ಹಾಗೂ ಮಳೆಯ ಪ್ರಮಾಣ ಇತ್ಯಾದಿ ಅಂಶಗಳ ಅಗತ್ಯ. ಈ ಅಂಶಗಳು ಕಟ್ಟಡ ನಿರ್ಮಾಣದ ಶೈಲಿ ನಿರ್ಧರಿಸಲು ಸಹಕಾರಿಯಾಗಿವೆ.

ಉದಾಹರಣೆಗೆ ಒಂದು ಕಟ್ಟಡವನ್ನು ನಿರ್ಮಾಣ ಮಾಡಬೇಕು ಎಂದು ಕೊಳ್ಳಿ. ಅದರಂತೆ ಆ ಜಾಗದಲ್ಲಿ ಸರಾಸರಿ ತಾಪಮಾನ 38 ಡಿಗ್ರಿ ಇದೆ. ಅದರಂತೆ ಮಳೆಯ ಅವಧಿ 3 ರಿಂದ 4 ತಿಂಗಳು ಇರುತ್ತದೆ. ಆಗ ಮನೆಯ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಬೇಕು. ಮನೆಯಲ್ಲಿ ಮೊಗಸಾಲೆ, ಕಿಟಕಿಗೆ ಸಜ್ಜೆ ಇಡುವುದು, ತಾರಸಿನಲ್ಲಿ ನೀರು ನಿಲ್ಲದಂತಹ ವ್ಯವಸ್ಥೆ ಮಾಡಬೇಕು. ಇದು ಪರಿಸರ ಸೂಕ್ಷ್ಮ ಕಟ್ಟಡ ನಿರ್ಮಾಣದ ಮೊದಲ ಹಂತವಾಗಿದೆ.

ವಾಸ್ತುಶಾಸ್ತ್ರದ ಪ್ರಕಾರ, ನಿರ್ಮಾಣ ಸ್ಥಳ ಹಾಗೂ ಪಂಚಭೂತಗಳು ಹೊಂದಾಣಿಕೆಯಾದಾಗ ಮಾತ್ರ ಉತ್ತಮ ಕಟ್ಟಡ ನಿರ್ಮಾಣವಾಗುತ್ತದೆ. ಹೀಗಾಗಿ ನಿವೇಶನದ ನಿರ್ಮಾಣಕ್ಕೂ ಮುನ್ನ ಅದರ ಪರಿಸರ, ವಾತಾವಾರಣದ ಬಗ್ಗೆ ಗಮನವಹಿಸಬೇಕು. ಮುಂದಿನ ಲೇಖನದಲ್ಲಿ ಪಂಚಭೂತಗಳನ್ನು ಹೇಗೆ ಸ್ಥಳದೊಂದಿಗೆ ಹೊಂದಾಣಿಕೆ ಮಾಡುವುದು ಎಂಬುದನ್ನು ತಿಳಿಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.