ಕುಂಭರಾಶಿಯವರ ಜೀವನದಲ್ಲಿ ಅನಿಶ್ಚಿತತೆ ಸಾಮಾನ್ಯ. ಅದರಂತೆ ಅನಿಶ್ಚಿತತೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಸಾಹಸ ಇವರದ್ದು. ಇವರು ಎಲ್ಲವನ್ನು ಧೈರ್ಯ ಮತ್ತು ಸಾಹಸದೊಂದಿಗೆ ಎದುರಿಸಿ ಮುನ್ನುಗ್ಗುವ ಸ್ವಭಾವದವರಾಗಿರುತ್ತಾರೆ. ಹೋರಾಟವೇ ಈ ರಾಶಿಯ ಪ್ರಮುಖ ಚಿಹ್ನೆ. ಹಾಗಾಗಿ ಈ ರಾಶಿಯವರು ಮನೆ ನಿರ್ಮಾಣದಲ್ಲಿ ಹೆಚ್ಚು ಪ್ರಯೋಗ ಮಾಡುವ ಸಾಮರ್ಥ್ಯ ಮತ್ತು ಆಸಕ್ತಿ ಹೊಂದಿರುತ್ತಾರೆ.

ಆಧುನಿಕ ಚಿಂತನೆ ಮತ್ತು ಹೊಸತನದ ಕಡೆಗೆ ಸಾಗುವುದು ಇವರ ಹುಟ್ಟು ಗುಣವಾಗಿರುತ್ತದೆ. ಹಾಗಾಗಿ ಗೃಹ ವಿನ್ಯಾಸದಲ್ಲೂ ಹೊಸ ಆಯಾಮಗಳನ್ನು ಹುಡುಕುತ್ತಾರೆ. ಇವರ ಬಳಿಕ ಹೆಚ್ಚು ಸಂಪನ್ಮೂಲ ಹಾಗೂ ಕನಸುಗಳಿರುತ್ತವೆ. ಸ್ಥಿರ, ಸುಂದರವಾದ, ಆಧುನಿಕ ಶೈಲಿಯ ಮನೆ ನಿರ್ಮಾಣ ಇವರ ಕನಸಾಗಿರುತ್ತದೆ.

ನೀರಿನ ಮೂಲವಿರುವ ಬಳಿ ನಿವೇಶನವನ್ನು ಈ ರಾಶಿಯ ಯಜಮಾನ ಅಥವಾ ಯಜಮಾನಿ ಹುಡುಕುತ್ತಾರೆ. ಇವರಿಗೆ ದೊಡ್ಡ ನಿವೇಶನ ಕಟ್ಟುವ ಆಸೆಗಳಿದ್ದರೂ, ಸಂಪನ್ಮೂಲಗಳ ಅನಾನುಕೂಲದಿಂದ, ಮಧ್ಯಮ ನಿವೇಶನವನ್ನು ಆಯ್ಕೆ ಮಾಡುತ್ತಾರೆ. ಪಶ್ಚಿಮ ದಿಕ್ಕು ಮತ್ತು ಹೆಚ್ಚು ಗಾಳಿಯ ಬಿಸುವ ಪ್ರದೇಶ ಇವರನ್ನು ಆಕರ್ಷಿಸುತ್ತದೆ.

ಈ ರಾಶಿಯವರಿಗೆ ಮನೆಗೆ ಸಂಬಂಧಿಸಿದಂತೆ ಆಯ್ಕೆಗಳು ಏನು?

ಆಧುನಿಕ ವಿನ್ಯಾಸ ಇವರ ಇಚ್ಛೆಯಾಗಿರುತ್ತದೆ. ದೊಡ್ಡದಾದ ಕೋಣೆಗಳು, ಸಮತಟ್ಟಾದ ನೆಲ, ಹೆಚ್ಚು ಮಹಡಿಗಳು ಬೇಡ. ಬೆಳಕು ಮತ್ತು
ಗಾಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೆಚ್ಚು ಮಹಡಿ ಇದ್ದರೆ, ಇವರಿಗೆ ಬಾಲ್ಕನಿ ಬೇಕು.

ವಾಸ್ತುಶಿಲ್ಪಿ ಅಥವಾ ವಿನ್ಯಾಸಗಾರರು, ಈ ರಾಶಿಯವರಿಗೆ ಹೊಸ ಆಲೋಚನೆಗಳನ್ನು ಪರಿಚಯಿಸಬಹುದು. ಕಲಾತ್ಮಕ ರಚನೆ, ಶೈಲಿಗಳಿಗೆ ಅವಕಾಶವಿದೆ. ದೊಡ್ಡ ಕಿಟಕಿ, ಬಾಗಿಲು, ವಿಶಾಲವಾದ ಕೋಣೆ ಈ ರಾಶಿಯವರಿಗೆ ಸೂಕ್ತ. ಹೆಚ್ಚು ವಿದ್ಯುತ್ ದೀಪಗಳನ್ನು ರಾತ್ರಿಯಲ್ಲಿಯೂ ಬಯಸುವರು. ಇವರು ತಮ್ಮ ಮನೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಬಯಸುತ್ತಾರೆ.

ಈ ರಾಶಿಯ ಯಜಮಾನ ಅಥವಾ ಯಜಮಾನಿಗೆ ದುಬಾರಿ ಮನೆ ಬೇಡ. ಆದರೆ ಇವರಿಗೆ ಅನುಕೂಲಕರವಾದ ಮನೆ ಬೇಕು. ಹೀಗೆ ವಾಸ್ತುಶಾಸ್ತ್ರವು ಯಜಮಾನನ ಗುಣಕ್ಕೆ ತಕ್ಕಂತೆ ಮನೆಯ ವಿನ್ಯಾಸವನ್ನು ಸೂಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.