ಸಮಯಕ್ಕೆ ಅನುಗುಣವಾಗಿ ಬದಲಾಗುವುದು ಮನುಷ್ಯನ ಸ್ವಾಭಾವಿಕ ಗುಣ. ಆದರೆ ಕೆಲವು ಬಾರಿ ಸಮಯದ ಅರಿವೇ ಇರುವುದಿಲ್ಲ. ಆದರೆ ವೃಶ್ಚಿಕ ರಾಶಿಯ ವ್ಯಕ್ತಿಗಳು ಹಾಗಲ್ಲ, ಯಾವಾಗಲೂ ಸೂಕ್ಷ್ಮತೆ ಬಲ್ಲವರಾಗಿರುತ್ತಾರೆ. ತಮ್ಮ ಸಮಯಕ್ಕಾಗಿ ಕಾಯವ ತಾಳ್ಮೆ ಅವರಿಗೆ ಹೆಚ್ಚು. ಆದರೂ ಅದನ್ನು ತೋರಿಸುವುದಿಲ್ಲ.

ಈ ರಾಶಿಯವರ ಮನಸ್ಸು ತಿಳಿಯುವುದು ಸುಲಭದ ಮಾತಲ್ಲ. ಇವರಿಗೆ ಭಾವುಕತೆಯೂ ಕಡಿಮೆ. ಹಾಗಾಗಿ ಈ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ಕಠಿಣ. ಯಾಕೆ ಹೀಗೆ? ಮೇಲ್ನೋಟಕ್ಕೆ ಈ ರಾಶಿಯವರು ಆಳವಾದ ಬಾವಿಯಂತೆ ಕಂಡರೂ, ಅದರ ಆಳ ಆರಿಯುವುದು ಅಸಾಧ್ಯ.

ಬೆಳಕು ನೀರಿನ ಆಳಕ್ಕೆ ತಲುಪಲು ಅಸಾಧ್ಯ. ಹಾಗಾಗಿ ಈ ರಾಶಿ ಹಾಗೂ ಅವರ ಸಾಮರ್ಥ್ಯ ನಿಗೂಢತೆಯಿಂದಲೇ ಕೂಡಿರುತ್ತದೆ. ಈ ರಾಶಿಯ ಅಧಿಪತಿ ಮಂಗಳ ಅಥವಾ ಕುಜನಾಗಿರುತ್ತಾರೆ. ಮೇಷ ರಾಶಿಯ ಮಂಗಳನಿಗೂ, ವೃಶ್ಚಿಕಾದ ಮಂಗಳನಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ಮಂಗಳನ ಶಕ್ತಿ ಅವ್ಯಕ್ತ. ಅಪಾರ ಶಕ್ತಿ ಇದ್ದು, ಅದು ಅನಿವಾರ್ಯವಿಲ್ಲದೆ ವ್ಯಕ್ತವಾಗುವುದಿಲ್ಲ. ಭೂಮಿಯ ಕಡೆ ಈ ರಾಶಿಯವರಿಗೆ ಸಹಜ ಆಸಕ್ತಿ. ಭೂಮಿ ಕುರಿತ ವಿಷಯಗಳನ್ನು ತಿಳಿಯಲು ಇವರು ಆಸಕ್ತರೂ ಕೂಡ ಆಗಿರುತ್ತಾರೆ.

ಇವರು ಉತ್ತಮ ಮತ್ತು ಪ್ರತಿಷ್ಠಿತ ಬಡವಣೆಗಳಲ್ಲಿ ತಮ್ಮ ನಿವೇಶನವನ್ನು ಆಯ್ಕೆ ಮಾಡಲು ಬಯಸುತ್ತಾರೆ. ಆದರೆ, ಅದು ಪ್ರಮುಖ ಬೀದಿಯಲ್ಲಿಇರುವುದಿಲ್ಲ. ಭೂಮಿಯ ಹಿಂದೆ ಅಥವಾ ಮೂಲೆಯಲ್ಲಿ ಆಯ್ಕೆ ಮಾಡುವರು. ಉತ್ತರ ದಿಕ್ಕು ಇವರಿಗೆ ಪ್ರಿಯ. ನೀರಿನ ಬಗ್ಗೆ ಹೆಚ್ಚು ಕಾಳಜಿ, ಹಾಗಾಗಿ ಭಾವಿ ಅಥವಾ ಕೆರೆಯ ಬಳಿ ನಿವೇಶನ ಆಯ್ಕೆ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ.

ಈ ರಾಶಿಯಯವರು ಆರ್ಕಿಟೆಕ್ಟ್ ಅನ್ನು ಹೇಗೆ ಸಂಪರ್ಕಿಸುತ್ತಾರೆ?

ಸಾಮಾನ್ಯವಾಗಿ Architect ಮತ್ತು ಅವರ ಕೆಲಸವನ್ನು ಬಹಳ ಸಮಯದಿಂದ ಸೂಕ್ಷ್ಮವಾಗಿ ಗಮನಿಸಿದ ಮೇಲೆಯೇ ಇವರು ಆರ್ಕಿಟೆಕ್ಟ್ ಅನ್ನು ಆಯ್ಕೆ ಮಾಡುತ್ತಾರೆ.

ಸುದೀರ್ಘವಾಗಿ ತಮ್ಮ ಆಗತ್ಯಗಳನ್ನು ತಿಳಿಸಿದರೂ, ತಮ್ಮ ಅಪೇಕ್ಷೆಗಳನ್ನು ಹೆಚ್ಚು ತಿಳಿಸುವುದಿಲ್ಲ. ಹಾಗಾಗಿ ಆರ್ಕಿಟೆಕ್ಟ್ಗೆ ಈ ರಾಶಿಯವರನ್ನು ತಿಳಿಯಲು ಸಮಯ ಮತ್ತು ತಾಳ್ಮೆ ಬೇಕು.

ಈ ರಾಶಿಯವರ ಮನೆ ಹೇಗಿರಬೇಕು ?

ಈ ರಾಶಿಯವರು ಎತ್ತರದ ಪ್ರದೇಶದಲ್ಲಿ ಮನೆ ನಿರ್ಮಿಸಲು ಬಯಸುತ್ತಾರೆ. ಉಬ್ಬು–ತಗ್ಗು ಇವರಿಗೆ ಇಷ್ಟ. ವಿನ್ಯಾಸದ ಬಗ್ಗೆ ಹೆಚ್ಚು ತಿಳುವಳಿಕೆ ಇರುವುದರಿಂದ, ಬಹಳ ಸೂಕ್ಷ್ಮವಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವರು. ಮನೆಯೊಳಗೆ ಹೆಚ್ಚಿನ ಗಾಳಿ ಬೆಳಕು ಬರುವುದನ್ನು ಬಯಸುವುದಿಲ್ಲ. ಆದ್ದರಿಂದ ಕೀಟಕಿಗಳು ಹೆಚ್ಚು ಬೇಡ. ಸಣ್ಣ ಕಿಟಕಿಗಳು ಇವರಿಗೆ ಹೆಚ್ಚು ಪ್ರಿಯ.

ಸಾಂಪ್ರದಾಯಿಕವಾದ ಅಯ್ಕೆಗಳನ್ನು ಇವರಲ್ಲಿ ಕಾಣಬಹುದು. ಇವರು ಕೋಣೆಗಳಲ್ಲಿ ಹೆಚ್ಚು ಗೌಪ್ಯತೆಯನ್ನು ಬಯಸುಬವರು, ತೆರೆದ ಅಡುಗೆ ಮನೆ ಇವರಿಗೆ ಬೇಡ. ಒಂದೇ ಜಾಗವನ್ನು ಅನೇಕ ರೀತಿಯಲ್ಲಿ ಉಪಯೋಗಿಸಲು ಇವರು ಬಯಸುತ್ತಾರೆ.

ಇವರಿಗೆ ಮನೆಯ ಬಾಹ್ಯ ಸೌಂದರ್ಯ ಅಷ್ಟು ಪ್ರಮುಖವಲ್ಲ. ಆದರೆ ಮನೆಯ ನೀರಿನ ವ್ಯವಸ್ಥೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೆಚ್ಚು ಪರಿಶ್ರಮ ಬೇಡ, ಹಾಗಾಗಿ ಆಧುನಿಕ ಕಾಲದ ಯಂತ್ರಗಳ ಅಳವಡಿಕೆಗೆ ಹೆಚ್ಚು ಒತ್ತು ನೀಡುತ್ತಾರೆ.

ಈ ರಾಶಿಯ ಯಜಮಾನ ಅಥವಾ ಯಜಮಾನಿಗೆ ಮನೆ ಪ್ರಮುಖವಾದ ಶಕ್ತಿ ಕೇಂದ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.