ರಾಶಿಗೆ ಅನುಗುಣವಾಗಿ ವಾಸ್ತುಶಾಸ್ತ್ರ ಎಂಬ ಕಲ್ಪನೆ ಅಡಿಯಲ್ಲಿ ಕೆಲವು ವಾರಗಳಿಂದ ಯಾವ ರಾಶಿಯವರಿಗೆ ಯಾವ ರೀತಿಯ ಮನೆಗಳು ಸೂಕ್ತವಾಗುತ್ತವೆ. ಅವರ ನಿವೇಶನದ ಆಯ್ಕೆ ಹೇಗಿರಬೇಕು, ವಿನ್ಯಾಸ, ವಾಸ್ತುಶಿಲ್ಪ ಹಾಗೂ ವಾಸ್ತುಶಾಸ್ತ್ರದ ಕೆಲವು ಸೂತ್ರಗಳನ್ನು ತಿಳಿದುಕೊಂಡಿದ್ದೇವೆ.

ವಾಸ್ತುಶಾಸ್ತ್ರದ ಪ್ರಕಾರ ವಾಸ್ತು ವಿಷಯದಲ್ಲಿ ವಿವಿಧ ರಾಶಿಯವರ ಗುಣಗಳು ಹಾಗೂ ಅವರಿಗೆ ಯಾವ ತರಹದ ನಿವೇಶನಗಳು ಹೊಂದಿಕೆಯಾಗುತ್ತವೆ ಎಂಬ ಸಂಕ್ಷಿಪ್ತವಾದ ಕಿರು ನೋಟ ಇಲ್ಲಿದೆ.

ಮೇಷ ರಾಶಿ: ಶಕ್ತಿ ಮತ್ತು ಉತ್ಸಾಹದ ಭಂಡಾರ. ಸೂರ್ಯನ ಬೆಳಕು ಮತ್ತು ವೇಗದ ಕೆಲಸಕ್ಕೆ ಹೆಚ್ಚು ಗಮನ

ವೃಷಭ ರಾಶಿ: ಸ್ಥಿರತೆ ಮತ್ತು ಸೌಂದರ್ಯ. ಉತ್ತಮ ಸ್ಥಳದ ಆಯ್ಕೆ ಮತ್ತು ಮನೆಯ ಕಲಾತ್ಮಕ ರಚನೆಯಲ್ಲಿ ಆಸಕ್ತಿ

ಮಿಥುನ ರಾಶಿ: ಬುದ್ಧಿವಂತಿಕೆ ಮತ್ತು ವಾಕ್ ಶಕ್ತಿ. ಮನೆಯೊಳಗೆ ಉತ್ತಮ ಗಾಳಿ ಮತ್ತು ಖರ್ಚು ವೆಚ್ಚಗಳ ಮೇಲೆ ಹೆಚ್ಚು ಗಮನ

ಕಟಕ ರಾಶಿ: ಚಾಲನೆ ಮತ್ತು ಸುಖದ ಭಾವ. ನಿವೇಶನದ ಹೊಸ ಮಾದರಿಯ ವಿನ್ಯಾಸ ಮತ್ತು ಜಲ ತತ್ವಕ್ಕೆ ಹೆಚ್ಚು ಗಮನ

ಸಿಂಹ ರಾಶಿ: ತನ್ನತನ ಮತ್ತು ಅಧಿಕಾರ ಭಾವ. ಐಷಾರಾಮಿ ಮತ್ತು ಏಕಾಂತತೆಗೆ ಹೆಚ್ಚು ಗಮನ

ಕನ್ಯಾ ರಾಶಿ: ಮುಗ್ಧತೆ ಮತ್ತು ನಾವೀನ್ಯತೆ. ರಚನಾತ್ಮಕ ಮತ್ತು ವಿಶೇಷತೆಗಳನ್ನು ಮಾಡುವುದು

ತುಲಾ ರಾಶಿ: ಪರಿಶ್ರಮ ಮತ್ತು ಸಮತ್ವ ಶಕ್ತಿ. ಸರಳವಾದ ಚಿಕ್ಕದಾದ ಚೊಕ್ಕದಾದ ನಿವೇಶನ ಮೊದಲ ಆದ್ಯತೆ

ವೃಶ್ಚಿಕ ರಾಶಿ: ನಿಗೂಢ ಮತ್ತು ಸ್ಥಿರ ಶಕ್ತಿ. ಆಡಂಬರವಿಲ್ಲದ ಬಹುಮಹಡಿಯ ಕಟ್ಟಡ ನಿರ್ಮಾಣದ ಆಸೆ

ಧನು ರಾಶಿ: ಅಚಲ ಮತ್ತು ಅರ್ಥಪೂರ್ಣ. ನಿವೇಶನ ದೊಡ್ಡದಾಗಿರಬೇಕು

ಮಕರ ರಾಶಿ: ಸರಳ ಮತ್ತು ಪರಿಶ್ರಮಿ. ಸಾಧ್ಯವಾದಷ್ಟು ಮನೆಯು ಪರಿಸರ ಸ್ನೇಹಿಯಾಗಿರುವ ಆಸೆ ಇವರದ್ದು

ಕುಂಭ ರಾಶಿ: ಆಧುನಿಕ ಮತ್ತು ಸಾಹಸ ಭಾವ. ಆಧುನಿಕ ಶೈಲಿಯ ನಿವೇಶನಗಳು ಮತ್ತು ಐಷಾರಾಮಿ ಮನೆಗಳಿಗೆ ಆದ್ಯತೆ

ಮೀನ ರಾಶಿ: ವಿಶಾಲತೆ ಮತ್ತು ನೈಸರ್ಗಿಕತೆ. ಪರಿಸರ ಸ್ನೇಹಿ ಇವರ ಮೊದಲ ಆದ್ಯತೆಯಾಗಿದೆ.

ಇಲ್ಲಿಯವರೆಗೂ ತಿಳಿದ ಮಾಹಿತಿ ವಾಸ್ತುಶಾಸ್ತ್ರದ ಪ್ರಾಥಮಿಕ ಮಾಹಿತಿಯಾಗಿದೆ. ಮುಂದಿನ ಲೇಖನಗಳಲ್ಲಿ ಪಂಚಭೂತಗಳು, ತ್ರಿಗುಣಗಳ ಬಗ್ಗೆ ತಿಳಿಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.