ಬೇಸಿಗೆಯ ಬಿಸಿಲಿನ ತಾಪಕ್ಕೆ ಮನೆಯ ಗೋಡೆ, ಮೇಲ್ಛಾವಣಿಗಳು ಬಿಸಿಯಾಗುತ್ತವೆ. ಇದರಿಂದ ಶಾಖ ನೇರವಾಗಿ ಮನೆಯೊಳಗೆ ಬರುತ್ತದೆ. ಮನೆಯಲ್ಲಿ ಫ್ಯಾನ್, ಎಸಿ ಇದ್ದರೂ ಕೆಲವು ಸಂದರ್ಭದಲ್ಲಿ ಕೆಲಸಕ್ಕೆ ಬರುವುದಿಲ್ಲ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಮನೆ ನಿರ್ಮಾಣ ಮಾಡುವಾಗ ಅನುಸರಿಸುವ ಕ್ರಮಗಳು ಹಾಗೂ ಅದರ ಶೈಲಿ ಇದಕ್ಕೆ ನೇರ ಕಾರಣವಾಗುತ್ತದೆ.

ಮನೆ ನಿರ್ಮಾಣ ಮಾಡುವಾಗ ವೈಜ್ಞಾನಿಕವಾಗಿ ಹಾಗೂ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಹಾಗಾದರೆ ಬಿಸಿಲಿನಲ್ಲಿ ಮನೆಯೊಳಗೆ ಬರುವ ಶಾಖವನ್ನು ತಡೆಗಟ್ಟಲು ಯಾವ ರೀತಿಯಲ್ಲಿ ಮನೆ ನಿರ್ಮಾಣ ಮಾಡಬೇಕು ಎಂಬ ಸಲಹೆಗಳು ಇಲ್ಲಿವೆ.

ಸೂರ್ಯ ಮತ್ತು ಗಾಳಿ ಬೀಸುವ ದಿಕ್ಕಿಗೆ ಅನುಗುಣವಾಗಿ ಕೋಣೆಗಳನ್ನು ನಿರ್ಮಾಣ ಮಾಡುವುದು ಸೂಕ್ತ.

ನೆಲದಿಂದ ಮನೆಯ ತಾರಸಿನ ಅಂತರ ಕನಿಷ್ಠ 10 ಅಡಿ ಇರಬೇಕು. ಅದಕ್ಕೂ ಹೆಚ್ಚಿದ್ದರೂ ಉತ್ತಮ.

ಮನೆಯಲ್ಲಿ ಚಿಕ್ಕ ಕಿಟಕಿಗಳನ್ನು ಇಡುವುದರಿಂದ ಬಿಸಿಗಾಳಿ ಕೋಣೆಯಿಂದ ಹೊರಗೆ ಹೋಗುತ್ತದೆ. ಇಂತಹ ಮಾದರಿಯ ಮನೆಗಳು ಮಲೆನಾಡು ಹಾಗೂ ಕೇರಳ ಭಾಗಗಳಲ್ಲಿ ಕಾಣಬಹುದಾಗಿದೆ.

ಒಂದು ಕೋಣೆಯಲ್ಲಿ ಕನಿಷ್ಠ ಎರಡು ಕಿಟಕಿ ಇರಬೇಕು. ಒಂದು ದೊಡ್ಡ ಕಿಟಕಿ ಮತ್ತೊಂದು ಚಿಕ್ಕ ಕಿಟಕಿ ಇದ್ದರೂ ಸರಿಯೇ. ಇದರಿಂದ ಗಾಳಿಯ ಒಳಹರಿವು ಹಾಗೂ ಹೊರಹರಿವು ಎರಡಕ್ಕೂ ಸರಾಗವಾಗುತ್ತದೆ.

ಕಿಟಕಿಗಳ ಮೇಲೆ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಒಂದಾದ ಚಜ್ಜಾ ಇಡುವುದು ಉತ್ತಮ. ಇದರಿಂದ ಶಾಖ ಕಡಿಮೆಯಾಗುತ್ತದೆ.

ಬಾಗಿಲಿನ ಮೇಲೆ ಸಣ್ಣ ಕಿಟಕಿಗಳನ್ನು ಅಳವಡಿಸುವುದರಿಂದ ಬಿಸಿ ಗಾಳಿ ಹೊರಹೋಗುತ್ತದೆ.

ಮಣ್ಣಿನಿಂದ ಮಾಡಿದ ಇಟ್ಟಿಗೆ ಬಳಸಿ ಕಟ್ಟಡ ನಿರ್ಮಿಸಿದರೆ, ಇತರೆ ಕಟ್ಟಡಗಳಿಗೆ ಹೋಲಿಸಿದರೆ ಬಿಸಿ ಕಡಿಮೆ ಇರುತ್ತದೆ.

ಮನೆಯ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಗೋಡೆಗಳು ಇತರೆ ದಿಕ್ಕಿನ ಗೋಡೆಗಳಿಗಿಂತ ದಪ್ಪ ಇದ್ದರೆ ಉತ್ತಮ.

ಕಟ್ಟದ ಸುತ್ತಲೂ ಗಿಡ ಮರಗಳನ್ನು ಬೆಳೆಸುವುದರಿಂದ ಮನೆಯ ಸುತ್ತ ತಂಪಾದ ವಾತಾವರಣ ನಿರ್ಮಾಣವಾಗುತ್ತದೆ.

ಸಿಮೆಂಟ್, ಪಿಓಪಿ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ನೈಸರ್ಗಿಕ ವಸ್ತುಗಳಾದ ಮಣ್ಣಿನ ಇಟ್ಟಿಗೆ ಹಾಗೂ ಮರಗಳು ಶಾಖವನ್ನು ತ್ವರಿತವಾಗಿ ಕಡಿಮೆ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.