ಕನ್ಯಾ ರಾಶಿಯವರು ಮುಗ್ದತೆಯುಳ್ಳವರಾಗಿರುತ್ತಾರೆ. ಇವರು ತಾವು ಮಾಡುವ ಕೆಲಸ ಕಾರ್ಯಗಳಲ್ಲಿ ನೈಪುಣ್ಯತೆ ಹೊಂದಿರುತ್ತಾರೆ. ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಮತ್ತು ಸದಾ ಚೈತನ್ಯದಿಂದ ಇರುತ್ತಾರೆ.

ಈ ರಾಶಿಯ ಯಜಮಾನ ಅಥವಾ ಯಜಮಾನಿ ಸದಾ ಹಸನ್ಮುಖಿಯಾಗಿರುತ್ತಾರೆ. ಇವರು ಸಂದರ್ಭಕ್ಕೆ ತಕ್ಕಂತೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಸಹಜವಾಗಿತೇ ಸೌಂದರ್ಯಕ್ಕೆ ಮಾರುಹೋಗುವ ಗುಣ ಹೊಂದಿರುತ್ತಾರೆ. ಬುಧನು ಕನ್ಯಾ ರಾಶಿಯ ಅಧಿಪತಿಯಾಗಿರುತ್ತಾನೆ. ಹಾಗಾಗಿ. ಸಹಜವಾಗಿ ಇವರು ಉತ್ತಮ ಮಾತುಗಾರರಾಗಿರುತ್ತಾರೆ.

ಇವರ ಮಾತಿನಲ್ಲಿ ತಾಳ್ಮೆ ಹಾಗೂ ಜಾಣ್ಮೆ ಎರಡೂ ಇರುತ್ತದೆ. ಇವರಿಗೆ ತೋರಿಕೆಯ ಜೀವನ ಒಪ್ಪುವುದಿಲ್ಲ. ತಮ್ಮ ಜಾಣ್ಮೆಯಿಂದ ಎಲ್ಲವನ್ನೂ ಸುಂದರಗೊಳಿಸುತ್ತಾರೆ. ಸದಾ ಕುತೂಹಲದಿಂದ ಕೂಡಿದ ಇವರು ಸದಾ ಅನ್ವೇಷಣಾ ಮನೋಭಾವ ಹೊಂದಿರುತ್ತಾರೆ.

ಈ ರಾಶಿಯ ನಿವೇಶನ ಹೇಗಿರಬೇಕು?

ಚಂದದ ಬಡಾವಣೆ, ಮಾಧ್ಯಮ ವರ್ಗದಿಂದ ಕೂಡಿದ ನೆರೆಹೊರೆಯವರು, ಎತ್ತರದ ಪ್ರದೇಶ, ಅಗ್ಗದ ಬೆಲೆಯಾಗಿರಬೇಕು. ದಕ್ಷಿಣ ದಿಕ್ಕು ಇವರ ಆಯ್ಕೆಯಾಯ ಸ್ಥಳವಾಗಿರುತ್ತದೆ. ಅಂಗಡಿ, ಮಾರುಕಟ್ಟೆಗಳು ಮನೆಗ ಹತ್ತಿರವಿರುವಂತೆ ಆಯ್ಕೆ ಮಾಡಿಕೊಳ್ಳಬೇಕು. ಸದಾ ಜನಸಂದಣಿ ಇವರಿಗೆ ಹಿತ ಕೊಡುವುದು. ವಾಯು ತತ್ವ ಪ್ರಧಾನವಾದ ಈ ರಾಶಿಗೆ, ಇಂಪಾದ ಗಾಳಿ ಬಹುಮುಖ್ಯ.

ರಸ್ತೆಗಳು ಅನುಕೂಲ ಮತ್ತು ಅಡೆತಡೆ ಇರದಂತೆ ಇರುವುದು ಇವರ ಆಯ್ಕೆಯಾಗಿರುತ್ತದೆ. ನಿವೇಶನದ ಗಾತ್ರ ಸಾಮಾನ್ಯವಿದ್ದರೂ ಪರವಾಗಿಲ್ಲ ಆದರೆ ಬಡಾವಣೆ ಅನುಕೂಲವಾಗಿರಬೇಕು.

ಈಗ ವಿನ್ಯಾಸ ಹೇಗಿರಬೇಕು ?

ಈ ರಾಶಿಯ ಯಜಮಾನ ಅಥವಾ ಯಜಮಾನಿ ಸಾಮಾನ್ಯವಾಗಿ ಮನೆ ಕಟ್ಟುವ ಮುನ್ನ ತಮ್ಮ ಮನದಲ್ಲಿ ಒಂದು ಚಿತ್ರವಿರುತ್ತದೆ. ತಮ್ಮ ಬಯಕೆಗೆ ಅನುಗುಣವಾಗಿ ಮನೆಯನ್ನು ಸಿದ್ದಮಾಡಿಕೊಳ್ಳುತ್ತಾರೆ. ವಾಸ್ತುಶಿಲ್ಪಿಯನ್ನು ಭೇಟಿಯಾದಾಗ ತಮ್ಮ ಮನೆಯ ಚಿತ್ರವನ್ನು ತೋರುವರು ಮತ್ತು ತಮ್ಮ ಚಿಂತನೆಗಳನ್ನು ಬಹಳ ವಿಸ್ತಾರವಾಗಿ ತಿಳಿಸುತ್ತಾರೆ.

ತುಂಬಾ ಆಳವಾಗಿ ಎಲ್ಲವನ್ನು ಅಪೇಕ್ಷಿಸುತ್ತಾರೆ. ವಿನ್ಯಾಸದಲ್ಲಿ ಅನೇಕ ಸಂದರ್ಭಗಳಲ್ಲಿ ಬದಲಾವಣೆ ಮಾಡುವರು. ಪ್ರತಿ ವಸ್ತುವನ್ನು ತಾವೇ ಕೂಲಂಕುಷವಾಗಿ ಪರೀಕ್ಷಿಸಿ, ನಂತರ ಒಪ್ಪುತ್ತಾರೆ. ಸದಾ ಗಮನ ವಸ್ತುವಿನ ಮೌಲ್ಯದ ಮೇಲಿರುತ್ತದೆ.

ವೃಷಭ ಆಯ ಇವರಿಗೆ ಒಪ್ಪಿತ. ದಕ್ಷಿಣದಲ್ಲಿ ಜಾಗ, ಸೂರ್ಯನ ಮುಳುಗುವುದನ್ನು ವೀಕ್ಷಿಸುವುದು ಇವರಿಗೆ ಪ್ರಿಯ. ತಗ್ಗು ಉಬ್ಬು ಮನೆಯಲ್ಲಿ ಇರಲು ಬಯಸುವರು ತಂಗಾಳಿಗಾಗಿ ಬೃಹತ್ ಕಿಟಕಿಗಳನ್ನು ಬಳಸುತ್ತಾರೆ. ಅನುಕೂಲಗಳಿಗೆ ಬಹಳ ಪ್ರಾಧಾನ್ಯತೆ ನೀಡುತ್ತಾರೆ.

ಇವರಿಗೆ ಅನುಕೂಲ ಬಹಳ ಮುಖ್ಯ. ಅಡುಗೆ ಮನೆಯ ಕಟ್ಟೆ, ಅದರ ಅಗಲ, ಅದರ ಬಣ್ಣ, ಹೀಗೆ ಒಂದೊಂದು ವಸ್ತುವಿನಲ್ಲೂ ತಮ್ಮ ಆಲೋಚನೆಯಂತೆ ತರುವ ಸಾಮರ್ಥ್ಯ ಈ ರಾಶಿಗಿದೆ.

ವಾಸ್ತುಶಾಸ್ತ್ರದಲ್ಲಿ ಈ ಕಾಲಮಾನದಲ್ಲಿಯೂ, ಎಲ್ಲರ ಅಗತ್ಯ ಮತ್ತು ಆಸೆಗಳಿಗೆ ಉತ್ತರವಿದೆ. ಹುಡುಕುವ ತಾಳ್ಮೆ ಮತ್ತು ಮನಸ್ಸು ನಿಮಗಿದ್ದರೇ ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.