ವಕೀಲ, ಕಕ್ಷಿದಾರನಿಗೆ ಥಳಿತ

ಭಾನುವಾರ, ಜೂನ್ 16, 2019
29 °C
ನ್ಯಾಯಾಲಯದ ಆವರಣದಲ್ಲೇ ಎಎಸ್‌ಐ ಕುಟುಂಬದಿಂದ ಹಲ್ಲೆ

ವಕೀಲ, ಕಕ್ಷಿದಾರನಿಗೆ ಥಳಿತ

Published:
Updated:
Prajavani

ಅರಸೀಕೆರೆ: ನಗರದ ನ್ಯಾಯಾಲಯದ ಆವರಣದಲ್ಲೇ ವಕೀಲ ಮತ್ತು ಕಕ್ಷಿದಾರನ ಮೇಲೆ ಪೊಲೀಸ್ ಇಲಾಖೆಯ ಎಎಸ್‌ಐ ಕುಟುಂಬ ವರ್ಗ ಗುರುವಾರ ಹಲ್ಲೆ ನಡೆಸಿದೆ.

ಬೆಂಗಳೂರಿನ ವಕೀಲ ಪ್ರಸಾದ್ ಹಾಗೂ ಮೈಸೂರಿನ ಕಬಿನಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಪುರುಷೋತ್ತಮ್ ಹಲ್ಲೆಗೊಳಗಾದವರು.

ತಾಲ್ಲೂಕಿನ ಬಾಣವಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ (ಎಎಸ್‌ಐ) ದೇವರಾಜೇಗೌಡ ಪುತ್ರಿ ಬಿಂದುಶ್ರೀ, ಪುತ್ರ ಪ್ರಶಾಂತ್‌ ಸಂಗಡಿಗರು ವಕೀಲ, ತಮ್ಮ ಎದುರು ವಾದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ಘಟನೆ ವಿವರ: ಎಎಸ್‌ಐ ದೇವರಾಜೇಗೌಡರ ಪುತ್ರಿ ಬಿಂದುಶ್ರೀಯನ್ನು ಪುರುಷೋತ್ತಮ್ ವಿವಾಹವಾಗಿದ್ದರು. ದಾಂಪತ್ಯ ಜೀವನ ಹೊಂದಾಣಿಕೆಯಾಗದಿದ್ದರಿಂದ ಇಬ್ಬರೂ ವಿಚ್ಛೇದನಕ್ಕೆ ಮೊರೆ ಹೋಗಿದ್ದರು.

ನ್ಯಾಯಾಲಯದ ಕಲಾಪಕ್ಕೆ ಭಾಗಿಯಾಗಿದ್ದ ಪುರುಷೋತ್ತಮ್‌ ಕೋರ್ಟ್‌ನಿಂದ ಹೊರ ಬರುತ್ತಿದ್ದಂತೆ, ದೇವರಾಜೇಗೌಡರ ಪುತ್ರಿ ಬಿಂದುಶ್ರೀ, ಪುತ್ರ ಪ್ರಶಾಂತ್ ಸೇರಿದಂತೆ, ಅರಸೀಕೆರೆಯ ವಿನೋದ, ಚಂದ್ರು, ಬೆಂಗಳೂರಿನ ಶಕುಂತಲಾ, ಸುಧಾ, ಅಭಿಷೇಕ, ನೊಣವಿನಕೆರೆಯ ಸ್ವಾಮಿ, ಭದ್ರಾವತಿಯ ಕೋಟಿ ಇನ್ನಿತರರು ಸೇರಿ, ಹಲ್ಲೆ ನಡೆಸಿ, ಪುರುಷೋತ್ತಮ್‌ನನ್ನು ಕಾರಿನಲ್ಲಿ ಅಪಹರಿಸಲು ಮುಂದಾಗಿದ್ದಾರೆ. ತನ್ನ ಕಕ್ಷಿದಾರರನ್ನು ಕಾಪಾಡಲು ಬಂದ ವಕೀಲ ಪ್ರಸಾದ್ ಮೇಲೂ ಇದೇ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣ ಖಂಡಿಸಿ ಅರಸೀಕೆರೆ ವಕೀಲರ ಸಂಘ ಜೂನ್‌ 14ರ ಶುಕ್ರವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !