ಶನಿವಾರ, ಆಗಸ್ಟ್ 24, 2019
21 °C

ಎಟಿಎಂ ಘಟಕದಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ವಂಚನೆ

Published:
Updated:

ಬೆಂಗಳೂರು: ಎಟಿಎಂ ಘಟಕದಲ್ಲಿ ಸಹಾಯ ಮಾಡುವ ನೆಪದಲ್ಲಿ ಅಪರಿಚಿತನೊಬ್ಬ, ಕೆಎಸ್ಆರ್‌ಪಿ ಸಿಬ್ಬಂದಿ ಖಾತೆಯಿಂದ ₹ 62,548 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಆ ಸಂಬಂಧ ಪರಸಪ್ಪ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದಾರೆ.

‘ದೂರುದಾರರು ಜುಲೈ 28ರಂದು ಅವೆನ್ಯೂ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಎಟಿಎಂ ಘಟಕಕ್ಕೆ ಹೋಗಿದ್ದರು. ಹಣ ಡ್ರಾ ಮಾಡಿಕೊಳ್ಳಲು ಗೊಂದಲ ಉಂಟಾಗಿತ್ತು. ಹಿಂದೆಯೇ ಇದ್ದ ಯುವಕನೊಬ್ಬ, ದೂರುದಾರರ ಎಟಿಎಂ ಕಾರ್ಡ್ ಪಡೆದು ಪರೀಕ್ಷಿಸಿದ್ದ. ತಾಂತ್ರಿಕ ತೊಂದರೆ ಇದ್ದು, ಆ ಮೇಲೆ ಪ್ರಯತ್ನಿಸುವಂತೆ ಹೇಳಿ ವಾಪಸ್ ಕಳುಹಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಅದಾಗಿ ಕೆಲ ನಿಮಿಷಗಳ ನಂತರ, ಖಾತೆಯಿಂದ ₹62,548 ಡ್ರಾ ಆಗಿರುವ ಸಂದೇಶ ದೂರುದಾರರ ಮೊಬೈಲ್‌ಗೆ ಬಂದಿತ್ತು. ನಂತರವೇ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ವಿವರಿಸಿದರು. 

Post Comments (+)