ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣ ಕದ್ದ

7

ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣ ಕದ್ದ

Published:
Updated:

ಬೆಂಗಳೂರು: ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣವನ್ನು ಕಾರಿನ ಚಾಲಕ ಅಬ್ದುಲ್‌ ಸಾಹಿದ್‌ ಎಂಬಾತ ₹ 75 ಲಕ್ಷ ಎಗರಿಸಿ ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ 11.30ರಲ್ಲಿ ನಡೆದಿದೆ.

ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ರೈಟರ್‌ ಸೇಫ್‌ಗಾರ್ಡ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎಟಿಎಂಗಳಿಗೆ ಹಣ ತುಂಬಲು ಈ ಕಂಪನಿ ಗುತ್ತಿಗೆ ಪಡೆದಿದೆ.

‘ಚಾಲಕ ಸಾಹಿದ್‌ನ ಜೊತೆಗೆ ಶ್ರೀಶೈಲ, ಹರೀಶ್ ಮತ್ತು ಗನ್‌ಮ್ಯಾನ್‌ ಅಮಿತ್ ಸಿಂಗ್ ನಾಗವಾರ ಮುಖ್ಯರಸ್ತೆಯಲ್ಲಿರುವ ಎಟಿಎಂ ಕಿಯೋಸ್ಕ್‌ಗೆ ಹಣ ತುಂಬಲೆಂದು ಬಂದಿದ್ದರು. ₹ 1.25 ಕೋಟಿ ಕಾರಿನಲ್ಲಿತ್ತು. ₹ 75 ಲಕ್ಷ ಮತ್ತು ಸಾಹಿದ್‌ನನ್ನು ಬಿಟ್ಟು ಉಳಿದ ಹಣವನ್ನು ಎಟಿಎಂ ಯಂತ್ರಕ್ಕೆ ತುಂಬಲು ಗನ್‌ಮ್ಯಾನ್‌ನೊಂದಿಗೆ ಅವರು ಹೋಗಿದ್ದರು. ಇದೇ ಸಮಯ ನೋಡಿ ಆರೋಪಿ ಹಣದೊಂದಿಗೆ ಪರಾರಿಯಾಗಿದ್ದಾನೆ’ ಎಂದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಡಿಸಿಪಿ ರಾಹುಲ್ ಕುಮಾರ್ ಪರಿಶೀಲನೆ ನಡೆಸಿದರು. ‘ಹಣ ಕದ್ದು ಪರಾರಿಯಾಗಿರುವ ಆರೋಪಿ ವಿವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಸಿಸಿ ಟಿ.ವಿ ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !