ಕ್ಯಾಲಿಫೋರ್ನಿಯಾದ ಬಾರ್‌ನಲ್ಲಿ ಗುಂಡಿನ ದಾಳಿ; 12 ಮಂದಿ ಸಾವು

7

ಕ್ಯಾಲಿಫೋರ್ನಿಯಾದ ಬಾರ್‌ನಲ್ಲಿ ಗುಂಡಿನ ದಾಳಿ; 12 ಮಂದಿ ಸಾವು

Published:
Updated:

ಕ್ಯಾಲಿಫೋರ್ನಿಯಾ: ಲಾಸ್ ಎಂಜಲೀಸ್‌ಗೆ ಸಮೀಪದ ನೈಟ್‌ಕ್ಲಬ್‌ವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಪೊಲೀಸ್‌ ಅಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ. 

ಕಾಲೇಜು ವಿದ್ಯಾರ್ಥಿಗಳಿಗಾಗಿ ಇಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಯಾಗಿತ್ತು. ನೂರಾರು ಮಂದಿ ಯುವಕ–ಯುವತಿಯರು ಒಳಗೆ ಸಿಲುಕಿರಬಹುದು ಎಂದು ಸ್ಥಳೀಯ ತನಿಖಾ ಸಂಸ್ಥೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವವ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ದಾಳಿ ನಡೆಸಿರುವ ಶಸ್ತ್ರಧಾರಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಥೌಸಂಡ್ ಓಕ್ಸ್‌ ಪಟ್ಟಣದ ಬಾರ್ಡರ್‌ಲೈನ್ ಬಾರ್‌ ಆ್ಯಂಡ್‌ ಗ್ರಿಲ್‌ನಲ್ಲಿ ಈ ಘಟನೆ ನಡೆದಿದೆ. 

ಲಾಸ್‌ ಎಂಜಲೀಸ್‌ ಟೈಮ್ಸ್‌ ಪ್ರಕಾರ, ಶಸ್ತ್ರಧಾರಿ ಕನಿಷ್ಠ 30 ಸುತ್ತ ಗುಂಡಿನ ದಾಳಿ ನಡೆಸಿದ್ದಾನೆ. ರಾತ್ರಿ 11:30ರ ಸುಮಾರಿಗೆ ಬಾರ್‌ಗೆ ನುಗ್ಗಿದ ಕಪ್ಪು ಬಣ್ಣದ ಪಿಸ್ತೂಲ್‌ ಹಿಡಿದಿದ್ದ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !