ಅಸಾಂಜ್‌ಗೆ ಮರಣದಂಡನೆ ವಿಧಿಸಬಾರದು: ಆಸ್ಟ್ರೇಲಿಯಾ

ಶನಿವಾರ, ಏಪ್ರಿಲ್ 20, 2019
28 °C

ಅಸಾಂಜ್‌ಗೆ ಮರಣದಂಡನೆ ವಿಧಿಸಬಾರದು: ಆಸ್ಟ್ರೇಲಿಯಾ

Published:
Updated:

ಲಂಡನ್‌: ವಿಕಿಲೀಕ್ಸ್‌ ಸಹ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಅವರಿಗೆ ಮರಣದಂಡನೆ ವಿಧಿಸಬಾರದು ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮರಿಸೆ ಪೈನೆ ಹೇಳಿದ್ದಾರೆ.

‘ಅಸಾಂಜ್‌ ಅವರಿಗೆ ಮರಣದಂಡನೆ ವಿಧಿಸುವುದಿಲ್ಲ ಎಂದು ಭರವಸೆ ನೀಡುವಂತೆ ಅಮೆರಿಕಕ್ಕೆ ಕೋರಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರಜೆ ಜೂಲಿಯನ್‌ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಿದರೆ ಅಲ್ಲಿ ಅವರಿಗೆ ಮರಣದಂಡನೆ ವಿಧಿಸುವ ಸಾಧ್ಯತೆ ಇದೆ ಎಂದು ಅವರ ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಲಂಡನ್‌ನ ಜೈಲಿನಲ್ಲಿರುವ ಜೂಲಿಯನ್‌ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಏಳು ವರ್ಷಗಳಿಂದ ಈಕ್ವೆಡಾರ್‌ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಜೂಲಿಯನ್‌ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದರು. 

ಅಮೆರಿಕಕ್ಕೆ ಸಂಬಂಧಿಸಿದ ಅನೇಕ ರಹಸ್ಯ ವಿಷಯಗಳನ್ನು ಸೋರಿಕೆ ಮಾಡಿರುವ ಆರೋಪ ಸದ್ಯಕ್ಕೆ ಇವರ ಮೇಲಿದೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೂ ಮರಣದಂಡನೆ ವಿಧಿಸುವ ಸಾಧ್ಯತೆ ಇಲ್ಲ. ಆದರೆ ಅಸಾಂಜ್‌ ವಿರುದ್ಧ  ಇನ್ನೂ ಹಲವು ಗಂಭೀರ ಆರೋಪಗಳನ್ನು ಹೊರಿಸುವ ಸಾಧ್ಯತೆ ಇದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.

ಅಮೆರಿಕಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಕಾನೂನು ಹೋರಾಟ ಮಾಡಲು ಅಸಾಂಜ್‌ ಚಿಂತನೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂಬ ಸೂಚನೆಯನ್ನು ಆಸ್ಟ್ರೇಲಿಯಾದ ನಾಯಕರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !