ಗುರುವಾರ , ಅಕ್ಟೋಬರ್ 17, 2019
21 °C

ದಸರಾ ಗ್ರಾವೆಲ್ ಫೆಸ್ಟ್ ಆಟೊಕ್ರಾಸ್ ರೇಸ್ 13ಕ್ಕೆ

Published:
Updated:

ಮೈಸೂರು: ಆಟೊಮೋಟಿವ್ ಸ್ಫೋರ್ಟ್ಸ್‌ ಕ್ಲಬ್ ಆಫ್ ಮೈಸೂರು ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ದಸರಾ ಗ್ರಾವೆಲ್ ಫೆಸ್ಟ್ ಆಟೊಕ್ರಾಸ್ ರೇಸ್'ನ್ನು ಅ.13ರಂದು ನಗರದ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್‌ನ ನಿರ್ದೇಶಕ ಅರುಣ್ ಅರಸ್ ತಿಳಿಸಿದರು.

ನವದೆಹಲಿ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನುರಿತ ನೂರು ಮಂದಿ ಚಾಲಕರು ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಗರದ 16 ಮಂದಿ ಯುವಕರು, 10 ಮಂದಿ ಮಹಿಳೆಯರು ಸಹ ಇದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

9 ವಿಭಾಗಗಳಲ್ಲಿ ರೇಸ್ ನಡೆಯಲಿದ್ದು, 1100 ಸಿಸಿ, 1100-1400 ಸಿಸಿ, 1400-1650 ಸಿಸಿ, ಇಂಡಿಯನ್ ಓಪನ್ ಕ್ಲಾಸ್, ಅನ್‍ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್ ಮತ್ತು ಎಸ್‍ಯುವಿ ಕ್ಲಾಸ್‍ನಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಬಾರಿಗೆ ಅಪೆಕ್ಸ್ ಕ್ಲಾಸ್‍ನ್ನು ಪರಿಚಯಿಸುತ್ತಿದ್ದು, ಕಾರ್ ರೇಸ್‍ನಲ್ಲಿ ವೇಗವಾಗಿ ಕಾರು ಚಲಾಯಿಸುವ ಹತ್ತು ಮಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಬೆಳಿಗ್ಗೆ 8.30ರಿಂದ ಸಂಜೆ 4.30ರವರೆಗೆ ರೇಸ್ ನಡೆಯಲಿದೆ. ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ. ಪ್ರೇಕ್ಷಕರ ಅನುಕೂಲಕ್ಕಾಗಿ ತಂಪು ಪಾನೀಯ ಮಳಿಗೆಗಳು, ಕೆಮಿಕಲ್ ಶೌಚಾಲಯ, ದೊಡ್ಡ ಎಲ್‍ಇಡಿ ಸ್ಕ್ರೀನ್, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಪ್ಲಾಸ್ಟಿಕ್ ತಡೆಗಟ್ಟುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಹೇಳಿದರು.

ಕ್ಲಬ್‌ನ ನಿರ್ದೇಶಕರಾದ ಚರಣ್ ರಾಜ್, ಎನ್.ಲೋಕೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

Post Comments (+)