ಮಂಗಳವಾರ, ಜನವರಿ 21, 2020
21 °C

5.9 ಸೆಕೆಂಡ್‌ಗೆ 100 ಕಿ.ಮೀ ವೇಗ: ಬಹುನಿರೀಕ್ಷಿತ ಔಡಿ ಕ್ಯು8 ಭಾರತದಲ್ಲಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮುಂಬೈ:  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಭಾರತದ ಮಾರುಕಟ್ಟೆಗೆ ಹೊಸ ಔಡಿ ಕ್ಯು8 ಎಸ್‌ಯುವಿ ಅನ್ನು ಬುಧವಾರ ಬಿಡುಗಡೆ ಮಾಡಿದರು.

3 ಲೀಟರ್‌ ಟ್ರಬೊಚಾರ್ಜ್ಡ್ ಪೆಟ್ರೋಲ್‌ ಎಂಜಿನ್‌ ಹೊಂಡಿರುವ ಕ್ಯು8 0–100 ಕಿ.ಮೀ ವೇಗ ಮುಟ್ಟಲು ಕೇವಲ 5.9 ಸೆಕೆಂಡ್‌ ತೆಗೆದುಕೊಳ್ಳುತ್ತದೆ.

ಕಂಪೆನಿಯ ಬಹು ನಿರೀಕ್ಷಿತ, ಅತ್ಯಾಧುನಿಕ ಹಾಗೂ ದುಬಾರಿ ಎಸ್‌ಯುವಿ ಇದಾಗಿದ್ದು, ಇದರ ಎಕ್ಸ್ ಷೋರೂಂ ಬೆಲೆ ₹1.34 ಕೋಟಿ. ಸದ್ಯ 200 ಎಸ್‌ಯುವಿಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ.  

‘ಐಷಾರಾಮಿ ಕಾರುಗಳ ಮೇಲೆ ಆಮದು ತೆರಿಗೆ ಮತ್ತು ಜಿಎಸ್‌ಟಿ ಹೆಚ್ಚಿರುವುದರಿಂದ ಬೆಲೆ ದುಬಾರಿಯಾಗಿದೆ. ಸರ್ಕಾರವು ಜಿಎಸ್‌ಟಿಯನ್ನು ಇಳಿಸಿದರೆ, ಮಾರುಕಟ್ಟೆ ಸುಧಾರಿಸಬಹುದು’ ಎಂದು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು