ಸೋಮವಾರ, ಆಗಸ್ಟ್ 2, 2021
28 °C

ಔಡಿ: ಹೊಸ ಆರ್‌ಎಸ್‌7 ಸ್ಪೋರ್ಟ್‌ಬ್ಯಾಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಔಡಿ ಕಂಪನಿಯು ಹೊಸ ಆರ್‌ಎಸ್‌7 ಸ್ಪೋರ್ಟ್‌ಬ್ಯಾಕ್‌ ಕಾರ್‌ ಬಿಡುಗಡೆ ಮಾಡಿದೆ. ₹ 1.94 ಕೋಟಿಯಿಂದ ಬೆಲೆ ಆರಂಭವಾಗಲಿದೆ.

ಎರಡನೇ ಪೀಳಿಗೆಯ ಆರ್‌ಎಸ್‌7 ಸ್ಪೋರ್ಟ್‌ಬ್ಯಾಕ್‌ಗೆ ಜೂನ್‌ 23ರಿಂದ ಮುಂಗಡ ಬುಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆಗಸ್ಟ್‌ನಲ್ಲಿ ಗ್ರಾಹಕರಿಗೆ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಶಕ್ತಿಶಾಲಿ ಮತ್ತು ಹೊಸ ತಂತ್ರಜ್ಞಾನ ಒಳಗೊಂಡ ಕಾರ್‌ ಬಿಡುಗಡೆ ಮಾಡಲು ಸಂತಸವಾಗುತ್ತಿದೆ. ವಿ8 ಟ್ವಿನ್‌ ಟರ್ಬೊ 4 ಲೀಟರ್‌ ಟಿಎಫ್‌ಎಸ್‌ಐ ಪೆಟ್ರೋಲ್‌ ಎಂಜಿನ್‌ 100 ಕಿ.ಮೀ. ವೇಗವನ್ನು ಕೇವಲ 3.6 ಸೆಕೆಂಡ್‌ಗಳಲ್ಲಿ ಮುಟ್ಟುತ್ತದೆ’ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಮಾಹಿತಿ ನೀಡಿದ್ದಾರೆ.

ಹೊಸ ಆರ್‌ಎಸ್‌ ಸ್ಪೋರ್ಟ್‌ಬ್ಯಾಕ್‌ ಕಾರು ಮರ್ಸಿಡಿಸ್‌ ಬೆಂಜ್‌–ಎಎಂಜಿ ಇ63ಎಸ್‌ ಮತ್ತು ಬಿಎಂಡಬ್ಲ್ಯು ಎಂ5ಗೆ ಪೈಪೋಟಿ ನೀಡುವ ನಿರೀಕ್ಷೆ ಮಾಡಲಾಗಿದೆ.

ವೈಶಿಷ್ಟ್ಯ

5 ಸೀಟ್‌

4 ಲೀಟರ್‌ ಟ್ವಿನ್‌ ಟರ್ಬೊ ಟಿಎಫ್‌ಎಸ್‌ಐ ಪೆಟ್ರೋಲ್‌ ಎಂಜಿನ್‌ 441 ಕಿ.ವಾ ಶಕ್ತಿ ಉತ್ಪಾದಿಸಬಲ್ಲದು

0–100 ಕಿ.ಮೀ ವೇಗವನ್ನು ಮುಟ್ಟಲು ತೆಗೆದುಕೊಳ್ಳುವ ಸಮಯ 3.6 ಸೆಕೆಂಡ್‌

ಗರಿಷ್ಠ ವೇಗ ಮಿತಿ ಪ್ರತಿ ಗಂಟೆಗೆ 250 ಕಿ.ಮೀ

8 ಸ್ಪೀಡ್‌ ಟಿಪ್ಟ್ರಾನಿಕ್‌ ಟ್ರಾನ್ಸ್‌ಮಿಷನ್‌ ವಿತ್ ಆಪ್ಟಿಮೈಸ್ಡ್‌ ಟೈಮ್ಸ್‌

ಬೆಲೆ ₹ 1.94 ಕೋಟಿಯಿಂದ ಆರಂಭ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು