ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್ ಹೊಸ ಪಲ್ಸರ್ 250 ಬಿಡುಗಡೆ: ಏನೇನು ವೈಶಿಷ್ಟ್ಯ?

Last Updated 28 ಅಕ್ಟೋಬರ್ 2021, 12:32 IST
ಅಕ್ಷರ ಗಾತ್ರ

ಪುಣೆ: ಭಾರತದ ಸ್ಪೋರ್ಟ್ಸ್ ಮೋಟರ್ ಸೈಕಲ್ ಮಾರುಕಟ್ಟೆಯಲ್ಲಿ 20ನೇ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಬಜಾಜ್ ಆಟೊ ಕಂಪನಿಯು ತನ್ನ ‘ಐಕಾನಿಕ್ ಬ್ರ್ಯಾಂಡ್’ ಪಲ್ಸರ್‌ಅನ್ನು ಸಂಪೂರ್ಣ ಹೊಸ ರೂಪದಲ್ಲಿ ಪರಿಚಯಿಸಿದೆ. ಪಲ್ಸರ್ ಎಫ್ 250 ಮತ್ತು ಎನ್ 250 ಎಂಬ ಎರಡು ಹೊಸ ಮಾದರಿಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಬೆಲೆಯು ಕ್ರಮವಾಗಿ ₹ 1.40 ಲಕ್ಷ ಮತ್ತು ₹ 1.38 ಲಕ್ಷ ಇದೆ (ದೆಹಲಿ ಎಕ್ಸ್ ಷೋ ರೂಂ).

ಕ್ವಾರ್ಟರ್ ಲೀಟರ್ ಸ್ಪೋರ್ಟ್ಸ್‌ (quarter litre sports) ವಿಭಾಗಕ್ಕೆ ಮುಂದಿನ ಪೀಳಿಗೆಯ ಶಕ್ತಿ, ಕಾರ್ಯಕ್ಷಮತೆ ಮತ್ತು ಶೈಲಿಯನ್ನು ಇದು ತಂದುಕೊಟ್ಟಿದೆ. ಸ್ಪೋರ್ಟ್ಸ್‌ ಬೈಕಿಂಗ್ ಲೋಕವನ್ನು ಬದಲಾಯಿಸಲು ಈ ಬೈಕ್ ಸಿದ್ಧವಾಗಿದೆ ಎಂದು ಕಂಪನಿ ಹೇಳಿದೆ.

ಎಲ್‌ಇಡಿ ಪ್ರೊಜೆಕ್ಟರ್‌ ಯುನಿಪಾಡ್‌ ಹೆಡ್‌ಲ್ಯಾಂಪ್‌, ಮೊನೊ-ಶಾಕ್ ಸಸ್ಪೆನ್ಷನ್, ಯುಎಸ್‌ಬಿ ಮೊಬೈಲ್ ಚಾರ್ಜಿಂಗ್, ಅಶೂರ್ಡ್‌ ಬ್ರೇಕಿಂಗ್ - 300ಎಂಎಂ ಮುಂಭಾಗ ಮತ್ತು 230 ಎಂಎಂ ಹಿಂಭಾಗ - ಡಿಸ್ಕ್ ಬ್ರೇಕ್ ಮತ್ತು ಸುಧಾರಿತ ಎಬಿಎಸ್ ತಂತ್ರಜ್ಞಾನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಇವು ಹೊಂದಿವೆ.

‘ಬಜಾಜ್ ಪಲ್ಸರ್ ಭಾರತದಲ್ಲಿ ಬಿಡುಗಡೆ ಆಗಿ ಗುರುವಾರಕ್ಕೆ ಇಪತ್ತು ವರ್ಷಗಳು ಸಂದಿವೆ. ಈ ಹಾದಿ ಬಹಳಷ್ಟು ಸವಾಲಿನಿಂದ ಕೂಡಿತ್ತು. ಕಂಪನಿಗೆ ಹೊಸ ರೂಪ ನೀಡುವಲ್ಲಿ, ಜಾಗತಿಕ‌ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಪಲ್ಸರ್‌ನ ಪಾತ್ರ ಮಹತ್ವದ್ದು’ ಎಂದು ಬಜಾಜ್ ಆಟೊ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಜಾಜ್ ಅವರು ಪಲ್ಸರ್ ರೂಪುಗೊಂಡ ಕತೆಯನ್ನು ನೆನಪಿಸಿಕೊಂಡರು.

2001ರ ಅಕ್ಟೋಬರ್‌ 28ರಂದು ಬಜಾಜ್‌ ಆಟೊ, ಭಾರತದಲ್ಲಿ ಮೊದಲ ಪಲ್ಸರ್‌ ಬಿಡುಗಡೆ ಮಾಡಿತ್ತು. ಇದುವರೆಗೆ ಪಲ್ಸರ್‌ನ ವಿವಿಧ ಮಾದರಿಗಳು ದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಇವು ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಮಾನದಂಡ ಸೃಷ್ಟಿಸಿವೆ. 50 ದೇಶಗಳಲ್ಲಿ ಬಹು ಜನಪ್ರಿಯ ಬ್ರ್ಯಾಂಡ್‌ಗಳ ಪೈಕಿ ಪಲ್ಸರ್‌ ಕೂಡ ಮನ್ನಣೆ ಪಡೆದಿದೆ. ಈಗ ಸಂಪೂರ್ಣ ಹೊಸದಾದ ಪಲ್ಸರ್‌ 250 ಮೂಲಕ ಬ್ರ್ಯಾಂಡ್‌ನ ಮಾನದಂಡವನ್ನು ಹೊಸ ಎತ್ತರಕ್ಕೆ ಏರಿಸಲಾಗಿದೆ ಎಂದು ಬಜಾಜ್ ಆಟೊದ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದರು‌.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಪುಣೆಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT