ಭಾನುವಾರ, ಆಗಸ್ಟ್ 1, 2021
23 °C

ಬಿಎಂಡಬ್ಲ್ಯು ಎಂ1000 ಆರ್‌ಆರ್‌ ಮೋಟರ್‌ಸೈಕಲ್‌ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜರ್ಮನಿಯ ಬಿಎಂಡಬ್ಲ್ಯು ಸಮೂಹವು ಪ್ರೀಮಿಯಂ ಕಾರ್ಯಕ್ಷಮತೆಯ ದ್ವಿಚಕ್ರ ವಾಹನ ‘ಬಿಎಂಡಬ್ಲ್ಯು ಎಂ1000 ಆರ್‌ಆರ್‌’ ಮಾದರಿಯನ್ನು ಬಿಡುಗಡೆ ಮಾಡಿದೆ. ಎಕ್ಸ್‌ಷೋರೂಂ ಬೆಲೆ ₹ 42 ಲಕ್ಷದಿಂದ ಆರಂಭವಾಗಲಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಮೋಟಾರ್ಸ್‌ನ ಮೊದಲ ‘ಎಂ’ ಮಾದರಿ ವಾಹನ ಇದಾಗಿದ್ದು, ಕಂಪನಿಯ ವಿತರಣಾ ಕೇಂದ್ರಗಳ ಮೂಲಕ ಗುರುವಾರದಿಂದಲೇ ಬುಕಿಂಗ್ ಮಾಡಬಹುದಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ದ್ವಿಚಕ್ರ ವಾಹನವು ‘ಎಂ1000 ಆರ್‌ಆರ್‌’ ಮತ್ತು ಬಿಎಂಡಬ್ಲ್ಯು ‘ಎಂ1000 ಆರ್‌ಆರ್‌ ಕಾಂಪಿಟಿಷನ್‌’ ಎನ್ನುವ ಎರಡು ಅವೃತ್ತಿಗಳಲ್ಲಿ ಲಭ್ಯವಿದೆ ಎಂದೂ ಹೇಳಿದೆ.

ಶಕ್ತಿಶಾಲಿ ಎಂಜಿನ್‌, ಆಕರ್ಷಕ ವಿನ್ಯಾಸ ಮತ್ತು ವಿಶೇಷ ಉಪಕರಣಗಳ ಈ ಸೂಪರ್‌ಬೈಕ್‌ ರೇಸ್‌ಟ್ರ್ಯಾಕ್‌ನಲ್ಲಿ ಮತ್ತು ನಿತ್ಯದ ಬಳಕೆಗೆ ಸೂಕ್ತವಾಗಿದೆ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವ್ಹಾ ತಿಳಿಸಿದ್ದಾರೆ.

999 ಸಿಸಿ 4 ಸಿಲಿಂಡರ್ ಇನ್‌–ಲೈನ್‌ ಎಂಜಿನ್‌ 212 ಎಚ್‌ಪಿ ಶಕ್ತಿ ಉತ್ಪಾದಿಸಬಲ್ಲದು. ರೇನ್‌, ರೋಡ್‌, ಡೈನಮಿಕ್ ಮತ್ತು ರೇಸ್‌ ಎಂಬ ನಾಲ್ಕು ರೈಡಿಂಗ್‌ ಮೋಡ್‌ಗಳಲ್ಲಿ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು