ಡ್ಯುಯೆಲ್ ಟೋನ್ ಲಿವಾ

7

ಡ್ಯುಯೆಲ್ ಟೋನ್ ಲಿವಾ

Published:
Updated:
Deccan Herald

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇತ್ತೀಚೆಗೆ ಡ್ಯುಯೆಲ್ ಟೋನ್ ಲಿವಾದ ಲಿಮಿಟೆಡ್ ಎಡಿಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯುವ ಸಮೂಹದ ಅಭಿರುಚಿಗೆ ತಕ್ಕಂತೆ ಕಂಪನಿ ಈ ಎಡಿಷನ್‌ಗೆ ಹೆಚ್ಚಿನ ಸ್ಪೋರ್ಟಿ ಲುಕ್‌ ನೀಡಿದೆ.

ಡ್ಯುಯೆಲ್ ಟೋನ್ ಲಿವಾದ  ಹೊರಾಂಗಣ ಬಣ್ಣ ಸೂಪರ್ ವೈಟ್‌ನಲ್ಲಿದ್ದು, ಗ್ರಿಲ್‌ ನ ಬಣ್ಣ ರೆಡ್ ಅಂಡ್ ಬ್ಲ್ಯಾಕ್ ಡ್ಯುಯೆಲ್ ಟೋನ್ ಇದೆ. ವಿಶೇಷ ವಿನ್ಯಾಸ ಮತ್ತು ವೈವಿಧ್ಯ ಬಣ್ಣಗಳಿಂದ ಕೂಡಿದೆ. ಪ್ರೀಮಿಯಮ್ ಬ್ಲ್ಯಾಕ್ ಇಂಟಿರಿಯರ್ಸ್ ಜೊತೆಗೆ ರೆಡ್ ಆಕ್ಸೆಂಟ್ಸ್‌ಗಳು, ಆಧುನಿಕ ಹವಾನಿಯಂತ್ರಿತ ವ್ಯವಸ್ಥೆ ಇದೆ. 6.8 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಅಂಡ್ ರಿವರ್ಸ್ ಕ್ಯಾಮರ್‌ಗಳಂತಹ ವಿಶೇಷ ವ್ಯವಸ್ಥೆಗಳನ್ನು ಹೊಂದಿದೆ.

ಹೊರಾಂಗಣ ವಿನ್ಯಾಸವನ್ನು ಸುಧಾರಣೆ ಮಾಡಲಾಗಿದೆ. ಒಳಾಂಗಣ ಆಕರ್ಷಕವಾಗಿದೆ. ಮುಂಭಾಗದಲ್ಲಿ ಸುರಕ್ಷತೆಗಾಗಿ ಡ್ಯುಯೆಲ್ ಫ್ರಂಟ್ ಎಸ್‌ಆರ್‌ಎಸ್ ಏರ್‌ಬ್ಯಾಗ್‌, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್(ಇಬಿಡಿ)ಗಳಿವೆ. ಈ ಕಾರಿನ ಎಲ್ಲ ಆವೃತ್ತಿಗಳಲ್ಲಿ ಮಾಡೆಲ್ ಫ್ರಂಟ್ ಸೀಟ್ ಬೆಲ್ಟ್, ಪ್ರಿ ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್, ಐಸೋಫಿಕ್ಸ್ ಚೈಲ್ಡ್ ಸೀಟ್ ಲಾಕ್‌ಗಳು ಲಭ್ಯ.

'ಬದಲಾಗುತ್ತಿರುವ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ನಮ್ಮ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು ಶ್ರಮಿಸುತ್ತಿದ್ದೇವೆ. ಗ್ರಾಹಕರಿಗೆ ವೈಶಿಷ್ಟ್ಯಗಳನ್ನು ಸಾದರಪಡಿಸುತ್ತಿದ್ದೇವೆ. ಎಟಿಯೋಸ್ ಲಿವಾ ಡ್ಯುಯೆಲ್ ಟೋನ್ ನಿಯಮಿತ ಆವೃತ್ತಿ ಆಧುನಿಕ ಶೈಲಿ ಮತ್ತು ವಸ್ತುಗಳನ್ನು ಹೊಂದಿದೆ. ಕಾರು ಪ್ರೇಮಿಗಳ ಆಸಕ್ತಿಗೆ ತಕ್ಕಂತೆ ಈ ಬದಲಾವಣೆ ಮಾಡಿದ್ದೇವೆ' ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಾ ಹೇಳಿದ್ದಾರೆ.
ನೂತನ ಡ್ಯುಯೆಲ್ ಟೋನ್ ಲಿವಾ ನಿಯಮಿತ ಆವೃತ್ತಿಯಲ್ಲಿರುವ ವಿಶೇಷಗಳು..

ಲಿವಾ ಡ್ಯುಯೆಲ್ ಟೋನ್ ನಿಯಮಿತ ಆವೃತ್ತಿ
ಪೆಟ್ರೋಲ್ - ವಿಎಕ್ಸ್
ಡೀಸೆಲ್- ವಿಎಕ್ಸ್‌ಡಿ
ಬೆಲೆ ಪೆಟ್ರೋಲ್ ಆವೃತ್ತಿಗೆ ರೂ 6,50,700 ಮತ್ತು ಡೀಸೆಲ್ ಆವೃತ್ತಿಗೆ ರೂ 7,65,700(ದೆಹಲಿಯ ಎಕ್ಸ್ ಶೋ ರೂಮ್ ಬೆಲೆ)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !