ಸೋಮವಾರ, ಸೆಪ್ಟೆಂಬರ್ 20, 2021
20 °C

ಡುಕಾಟಿ ಸ್ಕ್ರ್ಯಾಂಬ್ಲರ್‌ನ ಎರಡು ಹೊಸ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಪರ್‌ಬೈಕ್‌ ತಯಾರಿಸುವ ಇಟಲಿಯ ಡುಕಾಟಿ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಸ್ಕ್ರ್ಯಾಂಬ್ಲರ್‌ 1100 ಪ್ರೊ ಮತ್ತು 1100 ಸ್ಪೋರ್ಟ್ಸ್‌ ಪ್ರೊ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 11.95 ಲಕ್ಷ ಮತ್ತು ₹ 13.74 ಲಕ್ಷ ಇದೆ.

ಈ ಬೈಕ್‌ಗಳು 1100 ಸಿಸಿಎ ಎಂಜಿನ್ ಹೊಂದಿದ್ದು, 6 ಸ್ಪೀಡ್‌ ಗಿಯರ್‌ಬಾಕ್ಸ್‌, 15 ಲೀಟರಿನ ಸ್ಟೀಲ್‌ ಟ್ಯಾಂಕ್‌ ಒಳಗೊಂಡಿವೆ. 7,500 ಆರ್‌ಪಿಎಂನಲ್ಲಿ ಗರಿಷ್ಠ 86 ಎಚ್‌ಪಿ ಶಕ್ತಿ ಉತ್ಪಾದಿಸಬಲ್ಲದು. ನಗರದಾಚೆಗೆ ಹಿಂಬದಿ ಸವಾರರೊಂದಿಗೆ ಮೋಟರ್‌ಸೈಕಲ್‌ ರೈಡ್‌ ಮಾಡಲು ಬಯಸುವವರಿಗಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಬೆಂಗಳೂರು, ಹೈದರಾಬಾದ್‌, ಪುಣೆ, ದೆಹಲಿ ರಾಜಧಾನಿ ಪ್ರದೇಶ, ಕೋಲ್ಕತ್ತ, ಕೊಚ್ಚಿ ಮತ್ತು ಚೆನ್ನೈನ ಕಂಪನಿಯ ಎಲ್ಲಾ ವಿತರಣಾ ಕೇಂದ್ರಗಳಲ್ಲಿ ಬುಕಿಂಗ್‌ ಆರಂಭವಾಗಿದೆ. ಆಕ್ಟಿವ್, ಜರ್ನಿ ಮತ್ತು ಸಿಟಿ ಎಂದು ಮೂರು ಸ್ಟ್ಯಾಂಡರ್ಡ್‌ ರೈಡಿಂಗ್‌ ಮೋಡ್‌ಗಳಿವೆ.  

‘1100 ಪ್ರೊ ಶ್ರೇಣಿಯು ಆಕರ್ಷಕ ವಿನ್ಯಾಸ, ಆರಾಮದಾಯಕ ಮತ್ತು ಕಾರ್ಯಕ್ಷಮತೆಯ ಮಿಶ್ರಣವಾಗಿದ್ದು ಪ್ರತಿಯೊಬ್ಬರ ವೈಯಕ್ತಿಕ ಮತ್ತು ಬೇಡಿಕೆಯ ರೈಡಿಂಗ್ ಸ್ಟೈಲ್‍ಗೆ ಅನುಗುಣವಾಗಿ ಬದಲಿಸಿಕೊಳ್ಳಬಹುದು’ ಎಂದು ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು