ಶನಿವಾರ, ಅಕ್ಟೋಬರ್ 19, 2019
22 °C

ಇವಿ ‘ಒಕಿನವಾ ಪ್ರೈಸ್‍ಪ್ರೊ’

Published:
Updated:
Prajavani

ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಒಕಿನವಾ, ಹೊಸ 'ಒಕಿನವಾ ಪ್ರೈಸ್‍ಪ್ರೊ' ಇ-ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಳಪಿನ ಕೆಂಪು-ಕಪ್ಪು (Glossy Red Black)) ಮತ್ತು ಪ್ರಕಾಶಮಾನ ಕಪ್ಪು (Glossy Sparkle Black) ವರ್ಣಗಳಲ್ಲಿ ಲಭ್ಯವಿರುವ ಇದರ ಎಕ್ಸ್‌ಷೋರೂಂ ಬೆಲೆ ₹ 71,990 ಇದೆ.

1000-ವಾಟ್ ಬಿಎಲ್‍ಡಿಸಿ ವಾಟರ್ ಪ್ರೂಫ್ ಮೋಟರ್ ಮತ್ತು ಬೇರ್ಪಡಿಸಬಹುದಾದ 2.0 ಕೆಡಬ್ಲ್ಯುಎಚ್ ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಇದರ ಅತಿಹೆಚ್ಚು ಸಾಮರ್ಥ್ಯ ಎಂದರೆ 2500 ವಾಟ್. ಕೇವಲ 2-3 ಗಂಟೆಯಲ್ಲಿ ಚಾರ್ಜ್ ಮಾಡಬಹುದಾದ ಪ್ರೈಸ್‍ಪ್ರೊ ಇಕೊ ಮೋಡ್‍ನಲ್ಲಿ 110 ಕಿಲೋಮೀಟರ್ ಮತ್ತು ಸ್ಪೋರ್ಟ್‌ ಮೋಡ್‍ನಲ್ಲಿ 90 ಕಿಲೋಮೀಟರ್ ಮೈಲೆಜ್ ನೀಡುತ್ತದೆ. ಡಿಜಿಟಲ್ ಸ್ಪಿಡೊ ಮೀಟರ್ 3 ಮೋಡ್‍ಗಳನ್ನು ಹೊಂದಿದೆ.

ಇಕಾನಮಿ ಮೋಡ್ 30-35 ಪ್ರತಿ ಗಂಟೆಗೆ ಚಲಿಸುತ್ತದೆ. ಸ್ಪೋರ್ಟ್‌ ಮೋಡ್‍ನಲ್ಲಿ 50-60 ಕಿಲೋಮೀಟರ್ ಪ್ರತಿ ಗಂಟೆ ಮತ್ತು ಟರ್ಬೊ ಮೋಡ್‍ನಲ್ಲಿ 65-70 ಪ್ರತಿ ಗಂಟೆಗೆ ಚಲಿಸುತ್ತದೆ. ಸೀಟಿನ ಕೆಳಗೆ 150 ಕೆಜಿಯಷ್ಟು ಭಾರ ಇಡಬಹುದು.

 ‘ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರ ಬೇಡಿಕೆ ತಕ್ಕಂತೆ ನಾವು ಪೆಟ್ರೋಲ್ ಸ್ಕೂಟರ್‍ಗೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಇ-ಸ್ಕೂಟರ್ ಬಿಡುಗಡೆ ಮಾಡಿದ್ದೇವೆ. ಎಲ್ಲಾ ವಿಧದಲ್ಲೂ ಕೈಗೆಟುಕುವ ಬೆಲೆಯಲ್ಲಿ ಇರುವ ಪ್ರೈಸ್‍ಪ್ರೊ ಇ-ಸ್ಕೂಟರ್ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ನೀಡಲಿದೆ’ ಎಂದು ಒಕಿನವಾ ಆಟೊಟೆಕ್‌ನ ಸ್ಥಾಪಕ ಜಿತೆಂದರ್ ಶರ್ಮಾ ಹೇಳುತ್ತಾರೆ.

ಬಳಕೆ ಸುಲಭ
* ಬೇರ್ಪಡಿಸಬಹುದಾದ ಸಿಂಗಲ್ ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಕೆ
ಮನೆಯಲ್ಲಿರುವ ಸಾಕೇಟ್‍ನಿಂದ ಸುಲಭ ಚಾರ್ಜ್ 
ಒಂದು ಸಲ ಚಾರ್ಜ್ ಮಾಡಿದರೆ ಇಕೊ ಮೋಡ್‍ನಲ್ಲಿ 110 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‍ನಲ್ಲಿ 90 ಕಿ. ಮೀ ಕ್ರಮಿಸುವ ಮೈಲೇಜ್ 
ಗ್ಲಾಸಿ ರೆಡ್‌ ಬ್ಲ್ಯಾಕ್‌ ಮತ್ತು ಗ್ಲಾಸಿ ಸ್ಪಾರ್ಕಲ್‌ ಬ್ಲ್ಯಾಕ್‌  ಬಣ್ಣಗಳಲ್ಲಿ ಲಭ್ಯ
ರೋಡ್‍ಸೈಡ್ ಅಸಿಸ್ಟೆಂಟ್ ಸೌಲಭ್ಯ

ವೈಶಿಷ್ಟ್ಯ
*
 ಸೆಂಟ್ರಲ್ ಲಾಕಿಂಗ್ ಮತ್ತು ಆ್ಯಂಟಿ-ಥೆಫ್ಟ್ ಅಲಾರಂ
* ಕೀಲೆಸ್ ಎಂಟ್ರಿ
* ನನ್ನ ಸ್ಕೂಟರ್ ಹುಡುಕು ಆಯ್ಕೆ
* ಮೊಬೈಲ್ ಚಾರ್ಜ್ ಮಾಡಲು ಯುಎಸ್‍ಬಿ ಪೋರ್ಟ್
* ರೋಡ್ ಸೈಡ್ ಅಸಿಸ್ಟೆಂಟ್ ಸೌಲಭ್ಯ

Post Comments (+)