ಬೆಂಗಳೂರು: ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಹೊಂಡಾ ಕಂಪನಿ ತನ್ನ ಮುಂಬರುವ ಕಾರ್‌ಗಳಲ್ಲಿ ಗೂಗಲ್‌ನ ‘ಆಂಡ್ರಾಯ್ಡ್ ಆಟೋಮೋಟಿವ್ ಆಪರೇಟಿಂಗ್ ಸಿಸ್ಟಮ್‘ ಅಳವಡಿಸಲು ನಿರ್ಧರಿಸಿದೆ.
‘2022 ರ ಮಧ್ಯಂತರದಲ್ಲಿ ಹೊಂಡಾದ ಎಲ್ಲ ಮಾದರಿಯ ಕಾರ್‌ಗಳಲ್ಲಿ ಈ ಆಂಡ್ರಾಯ್ಡ್ ಆಟೋಮೋಟಿವ್ ಆಪರೇಟಿಂಗ್ ಸಿಸ್ಟಮ್ ಇರಲಿದೆ‘ ಎಂದು ಕಂಪನಿ ತಿಳಿಸಿದೆ.
ಆಂಡ್ರಾಯ್ಡ್ ಆಟೋಮೋಟಿವ್‌ನಲ್ಲಿ ವಾಯ್ಸ್ ಆಕ್ಟಿವೇಟೆಡ್ ಅಸಿಸ್ಟಂಟ್, ಗೂಗಲ್ ಮ್ಯಾಪ್ಸ್ ಹಾಗೂ ಇತರೆ ಸ್ವಯಂಚಾಲಿತ ಆಂಡ್ರಾಯ್ಡ್ ಆ್ಯಪ್‌ಗಳು ಇರಲಿವೆ. ಸದ್ಯ ಬಹಳಷ್ಟು ಕಾರ್‌ಗಳ ಮಾದರಿಗಳಲ್ಲಿ ಬಳಸಲ್ಪಡುವ ‘ಆಂಡ್ರಾಯ್ಡ್ ಆಟೋ‘ಕ್ಕೂ ಹಾಗೂ ‘ಆಂಡ್ರಾಯ್ಡ್ ಆಟೋಮೋಟಿವ್‘ಗೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಹೊಂಡಾ ಕಂಪನಿ ತಿಳಿಸಿದೆ.
ಆಂಡ್ರಾಯ್ಡ್ ಆಟೋಮೋಟಿವ್ ಚಾಲನೆ ಹೊರತುಪಡಿಸಿ ವಾಹನಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿಭಾಯಿಸುತ್ತದೆ ಎನ್ನಲಾಗಿದೆ.
ಆಟೋಮೋಟಿವ್ ಓಎಸ್ ಹೊಂಡಾ ಅಲ್ಲದೇ ಪೋರ್ಡ್, ರಿನಾಲ್ಟ್, ಜನರಲ್ ಮೊಟಾರ್ಸ್ ಕಂಪನಿಗಳಿಗೂ ಸಿಗಲಿದೆ ಎಂದು ಗೂಗಲ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.