ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಲೇಸು
Published 26 ಸೆಪ್ಟೆಂಬರ್ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ವಿದ್ಯಾರ್ಥಿಗಳು ಓದಿನ ವಿಷಯದ ಬಗ್ಗೆ ಸ್ನೇಹಿತರೊಡನೆ ಚರ್ಚೆ ನಡೆಸುವುದರಿಂದ ವಿಚಾರ ಸಂಪೂರ್ಣವಾಗಿ ಅರ್ಥವಾಗಲಿದೆ. ಪರಿಚಿತರಿಂದ ಹೊಸ ಸ್ಥಳದಲ್ಲಿ ಸಕಾಲಕ್ಕೆ ಸರಿಯಾಗಿ ನೆರವು ದೊರೆಯುವುದು.
ವೃಷಭ
ಪರಿಸ್ಥಿತಿಗೆ ಅನುಗುಣವಾಗಿ ಭಾವನೆಗಳನ್ನು ವ್ಯಕ್ತ ಪಡಿಸಿ, ಇಲ್ಲವಾದಲ್ಲಿ ಮುಜುಗರದ ಸಂದರ್ಭ ಎದುರಿಸಬೇಕಾಗಬಹುದು. ಕಾರ್ಯಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕಂತೆ ದಿನದಿಂದ ದಿನಕ್ಕೆ ಅಭಿವೃದ್ದಿಯಾಗಲಿದೆ.
ಮಿಥುನ
ಹರಿತವಾದ ವಸ್ತುಗಳ ಬಳಕೆಯಲ್ಲಿ ಅಥವಾ ಯಂತ್ರೋಪಕರಣಗಳ ಬಳಕೆಯಲ್ಲಿ ಅವಘಡ ಸಂಭವಿಸಬಹುದು, ಎಚ್ಚರದಿಂದಿರಿ. ಅನಿರೀಕ್ಷಿತವಾಗಿ ನಡೆದ ದುರ್ಘಟನೆಗಳಿಂದ ವಿಚಲಿತರಾಗದೆ ಕಾರ್ಯ ನಿರ್ವಹಿಸಿ.
ಕರ್ಕಾಟಕ
ಅಪ್ಪ ಮಗನ ಮಧ್ಯದಲ್ಲಿ  ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ನೆಮ್ಮದಿ ಮೂಡುವುದು. ಒಂದು ಬಾರಿ ನಿರ್ಧರಿಸಿದ ನಿಲುವಿನಿಂದ ಹಿಂದೆ ಸರಿಯಬೇಡಿ. ಮಕ್ಕಳ ಆರೋಗ್ಯದಲ್ಲಿ ಗಮನವಿರಲಿ.
ಸಿಂಹ
ಪಶುಸಂಗೋಪನೆ ಮಾಡುವವರಿಗೆ ಅಥವಾ ಸಾಕು ಪ್ರಾಣಿಗಳಿಂದಲೇ ಸಣ್ಣ ಪುಟ್ಟ ಹಾನಿ ಉಂಟಾಗಬಹುದು; ಜಾಗ್ರತೆ ಇರಲಿ. ದೈವಾನುಗ್ರಹದಿಂದ ಕೆಲಸಗಳೆಲ್ಲವೂ ನಿರಾಳವಾಗಿ ನೆರವೇರುವುದು.
ಕನ್ಯಾ
ವ್ಯಾಪಾರದ ವಿಚಾರದಲ್ಲಿ ಕೈಗೊಂಡಿರುವ ಕಾರ್ಯಗಳನ್ನು ದೇವರ ಪ್ರಾರ್ಥನೆಯ ಮೂಲಕ ಮುಂದುವರಿಸಿರಿ. ಹಿರಿಯರು ಮತ್ತು ಹಿತೈಷಿಗಳಿಂದ ಆಶೀರ್ವಾದ ಪಡೆಯುವುದು ಶುಭ ಸಮಾರಂಭಗಳಿಗೆ ನಾಂದಿಯಾಗುತ್ತದೆ.
ತುಲಾ
ವಿದ್ಯಾರ್ಥಿಗಳಿಗೆ ಆಲಸ್ಯದ ಪರ್ವತ ಎದುರಾಗುವುದರಿಂದ ವಿದ್ಯಾರ್ಜನೆಯಲ್ಲಿ ಹಿನ್ನಡೆ. ದಾಂಪತ್ಯದಲ್ಲಿ ಮುಖಾಮುಖಿಯಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವುದು ಸಮಸ್ಯೆ ಬಾರದಂತೆ ಕಾಪಾಡುತ್ತದೆ.
ವೃಶ್ಚಿಕ
ಅಪರಾಧಿ ಸ್ಥಾನದಲ್ಲಿರುವ ನಿಮಗೆ ಇಂದು ನಿರಪರಾಧಿ ಎನ್ನುವುದು ಸಾಬೀತಾಗಿ ನ್ಯಾಯಾಲಯದಲ್ಲಿ ಜಯ ಸಿಗುವುದು. ರಾಜಕಾರಣದಲ್ಲಿ ಮೇಲುಗೈ ಸಾಧಿಸಲು ಅಕ್ಕ ಪಕ್ಕದ ವಾತಾವರಣವು ಪೂರಕವಾಗುತ್ತದೆ.
ಧನು
ನೂತನವಾಗಿ ಪರಿಚಯವಾದ ರಾಜಕೀಯ ವ್ಯಕ್ತಿಯೊಂದಿಗೆ ಸಂಬಂಧ ಉತ್ತಮಗೊಳ್ಳುವುದು. ಜವಾಬ್ದಾರಿಯ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಬರಲಿದೆ. ಅಪೇಕ್ಷಿತರಿಗೆ ಬ್ಯಾಂಕ್‌ನಿಂದ ಸೌಲಭ್ಯ ಸಿಗಲಿದೆ.
ಮಕರ
ವ್ಯವಹಾರಗಳನ್ನು ನೇರ ನಡೆ ನುಡಿ ಹೊಂದಿದವರೊಂದಿಗೆ ಮಾತ್ರ ಮುಂದುವರಿಸಿಕೊಂಡು ಹೋಗುವ ತೀರ್ಮಾನ ಒಳ್ಳೆಯದು. ಮೇಲಧಿಕಾರಿಗಳೊಂದಿಗಿನ ಮಾತುಕತೆ ಹೆಚ್ಚಿನ ಫಲ ನೀಡಲಿದೆ.
ಕುಂಭ
ಮಕ್ಕಳ ಆರೋಗ್ಯದ ವಿಚಾರದಲ್ಲಿ ಬೆಳವಣಿಗೆಗೆ ಬೇಕಾದ ಪೌಷ್ಠಿಕಾಂಶ ಆಹಾರದ ಕೊರತೆ ಕಾಣುತ್ತದೆ. ಪದವೀಧರರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಂಭವವಿದೆ. ಉಮಾಮಹೇಶ್ವರನ ಆರಾಧನೆಯಿಂದ ಶುಭ.
ಮೀನ
ನಿವೇಶನದ ಅಥವಾ ಜಮೀನಿನ ಖರೀದಿ ವಿಷಯದಲ್ಲಿ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಲೇಸು. ಈ ದಿನದ ಹೆಚ್ಚು ಕಾಲ ವ್ಯಾಪಾರ ವ್ಯವಹಾರದಿಂದ ದೂರ ಉಳಿಯುವುದು ಉತ್ತಮ.
ADVERTISEMENT
ADVERTISEMENT