ಬುಧವಾರ, ಡಿಸೆಂಬರ್ 2, 2020
25 °C

ಹುಂಡೈ ಐ20 ಹೊಸ ಆವೃತ್ತಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ‘ಹುಂಡೈ ಐ20’ಯ ಹೊಸ ಆವೃತ್ತಿಯನ್ನು ಗುರುವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 6.79 ಲಕ್ಷದಿಂದ ₹ 11.17 ಲಕ್ಷದವರೆಗೆ ಇದೆ.

ನಾಲ್ಕನೇ ಪೀಳಿಗೆಯ ‘ಹುಂಡೈ ಐ20’ ಪೆಟ್ರೋಲ್‌ ಮತ್ತು ಡಿಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಬಲೆನೊ, ಟಾಟಾ ಮೋಟರ್ಸ್‌ನ ಆಲ್ಟ್ರೋಜ್‌ ಮತ್ತು ಟೊಯೋಟಾ ಗ್ಲಾನ್ಜಾದೊಂದಿಗೆ ಇದು ಪೈಪೋಟಿಗೆ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ.

1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ನ ಮ್ಯಾನ್ಯುಯಲ್‌ ಆವೃತ್ತಿ ಬೆಲೆ ₹ 6.79 ಲಕ್ಷದಿಂದ ₹ 9.19 ಲಕ್ಷದವರೆಗಿದ್ದರೆ, ಆಟೊಮ್ಯಾಟಿಕ್‌ ಟ್ರಿಮ್‌ ಬೆಲೆ ₹ 8.59 ಲಕ್ಷದಿಂದ ₹ 9.69 ಲಕ್ಷದವರೆಗಿದೆ.

ಅಂತೆಯೇ ಟಿಎಂಟಿ ತಂತ್ರಜ್ಞಾನ ಇರುವ 1 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಆವೃತ್ತಿಯ ಬೆಲೆ ₹ 8.79 ಲಕ್ಷದಿಂದ ₹ 9.89 ಲಕ್ಷ ಇದೆ. ಡಿಸಿಟಿ ಟ್ರಿಮ್‌ ಬೆಲೆ ₹ 10.66 ಲಕ್ಷದಿಂದ ₹ 11.17 ಲಕ್ಷ ಇದೆ.

1.5 ಲೀಟರ್‌ ಡೀಸೆಲ್‌ ಎಂಜಿನ್‌ ಆವೃತ್ತಿಯ ಬೆಲೆ ₹ 8.19 ಲಕ್ಷದಿಂದ ₹ 10.59 ಲಕ್ಷ ಇದೆ. ಎಲ್ಲವೂ ಪರಿಚಯಾತ್ಮಕ ಬೆಲೆ ಆಗಿರುವುದರಿಂದ, ಡಿಸೆಂಬರ್‌ ಅಂತ್ಯದವರೆಗೆ ಮಾತ್ರವೇ ಈ ಬೆಲೆಗೆ ಕಾರು ಸಿಗಲಿದೆ ಎಂದು ಕಂಪನಿ ತಿಳಿಸಿದೆ.

ಈ ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಹೊಸ ‘ಐ20’ಯು ಗ್ರಾಹಕರಲ್ಲಿ ಹೊಸ ಆಸಕ್ತಿ ಹುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹುಂಡೈ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌. ಕಿಮ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲವು ವೈಶಿಷ್ಟ್ಯಗಳು

* ಹಿಲ್‌ ಅಸಿಸ್ಟ್‌ ಕಂಟ್ರೋಲ್‌
* ಮಲ್ಟಿ–ಫೋನ್‌ ಬ್ಲುಟೂತ್ ಕನೆಕ್ಟಿವಿಟಿ
* ಗಾಳಿ ಶುದ್ಧ ಮಾಡುವ ಯಂತ್ರ
* ಟೈರ್‌ ಪ್ರೆಷರ್‌ ಮೇಲೆ ಗಮನ ಇಡುವ ವ್ಯವಸ್ಥೆ
* ಎಲೆಕ್ಟ್ರಿಕ್‌ ಸನ್‌ರೂಫ್‌
* 6 ಏರ್‌ಬ್ಯಾಗ್‌
* ರಿಯರ್ ಪಾರ್ಕಿಂಗ್ ಸೆನ್ಸರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು