ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡೈ ವರ್ನಾ ಹೊಸ ಆವೃತ್ತಿ ಬಿಡುಗಡೆ

Last Updated 21 ಮಾರ್ಚ್ 2023, 14:02 IST
ಅಕ್ಷರ ಗಾತ್ರ

ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ತನ್ನ ಮಧ್ಯಮ ಗಾತ್ರದ ಸೆಡಾನ್ ‘ವರ್ನಾ’ದ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್‌ಷೋರೂಂ ಬೆಲೆಯು ₹ 10.89 ಲಕ್ಷದಿಂದ ₹ 17.37 ಲಕ್ಷದವರೆಗೆ ಇದೆ.

ಈ ಕಾರು ದೇಶಿ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಸ್ಕೋಡಾ ಸ್ಲ್ಯಾವಿಯಾ, ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡಲಿದೆ.

1.5 ಲೀಟರ್ ಎಂಜಿನ್ ಸಾಮರ್ಥ್ಯದ ಹೊಸ ವರ್ನಾ ಕಾರಿನ ಬೆಲೆಯು ₹ 10.89 ಲಕ್ಷದಿಂದ ₹ 16.19 ಲಕ್ಷದವರೆಗೆ ಇದೆ. 1.5 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿನ ಬೆಲೆಯು ₹ 14.83 ಲಕ್ಷದಿಂದ ₹ 17.37 ಲಕ್ಷದವರೆಗೆ ಇದೆ.

ಕಂಪನಿ ಹೇಳಿರುವ ಪ್ರಕಾರ ಈ ಮಾದರಿಯ ಕಾರುಗಳ ಇಂಧನ ದಕ್ಷತೆಯು ಲೀಟರಿಗೆ 18.6 ಕಿ.ಮೀ.ನಿಂದ 20.6 ಕಿ.ಮೀ.ವರೆಗೆ ಇರಲಿದೆ. ಈ ವರ್ಷ ಸರಿಸುಮಾರು 40 ಸಾವಿರ ವರ್ನಾ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT