ಸೋಮವಾರ, ನವೆಂಬರ್ 29, 2021
20 °C

ಹುಂಡೈ ಐ20 ಎನ್‌ ಲೈನ್‌ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಮಂಗಳವಾರ ‘ಐ20 ಎನ್‌ ಲೈನ್‌’ ಕಾರನ್ನು ಅನಾವರಣಗೊಳಿಸಿದೆ. ಎನ್‌ ಲೈನ್‌ ಉತ್ಪನ್ನ ಶ್ರೇಣಿಯಲ್ಲಿ ದೇಶದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಮಾದರಿ ಇದಾಗಿದ್ದು, ಈ ಮೂಲಕ ಸ್ಪೋರ್ಟ್‌ ಕಾರು ಬಯಸುವ ಗ್ರಾಹಕರನ್ನು ಸೆಳೆಯಲು ಕಂಪನಿ ಮುಂದಾಗಿದೆ.

ಸ್ಪೋರ್ಟಿ ಲುಕ್‌ ನೀಡಲು ಮೋಟಾರ್‌ಸ್ಪೋರ್ಟ್ಸ್‌ನಿಂದ ಸ್ಪೂರ್ತಿ ಪಡೆದು ಕಾರಿನ ಹೊರಾಂಗಣ ಮತ್ತು ಒಳಾಂಗಣದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಐ20 ಎನ್‌ ಲೈನ್‌ ಕಾರು 1 ಲೀಟರ್‌ ಪೆಟ್ರೋಲ್‌ ಟರ್ಬೊ ಜಿಐಡಿ ಎಂಜಿನ್‌ ಹೊಂದಿದ್ದು, 6 ಸ್ಪೀಡ್‌ ಇಂಟಲಿಜೆಂಟ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ (ಐಎಂಟಿ) ಮತ್ತು 7 ಸ್ಪೀಡ್‌ ಡಿಸಿಟಿ ಟ್ರಾನ್ಸ್‌ಮಿಷನ್‌ ಆಯ್ಕೆಗಳನ್ನು ಒಳಗೊಂಡಿದೆ. ಆನ್‌ಲೈನ್‌ನಲ್ಲಿ ‘ಹುಂಡೈ ಕ್ಲಿಕ್‌ ಟು ಬೈ’ ಮೂಲಕ ಅಥವಾ ಹುಂಡೈ ಸಿಗ್ನೆಚರ್ ಡೀಲರ್‌ಶಿಪ್‌ಗಳ ಮೂಲಕ ₹ 25 ಸಾವಿರಕ್ಕೆ ಬುಕಿಂಗ್‌ ಮಾಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು