ಯೂಟ್ಯೂಬ್‌ನಲ್ಲಿಯೂ ಬಂತು ಇನ್ ಕೋಗ್ನಿಟೊ ಮೋಡ್

7
ತಂತ್ರೋಪನಿಷತ್ತು

ಯೂಟ್ಯೂಬ್‌ನಲ್ಲಿಯೂ ಬಂತು ಇನ್ ಕೋಗ್ನಿಟೊ ಮೋಡ್

Published:
Updated:

ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿ, ವಿಡಿಯೊ ವೀಕ್ಷಿಸುವಾಗ ನಾವು ನೋಡಿದ, ನಾವು ಹುಡುಕಿದ ಎಲ್ಲ ವಿಷಯಗಳು ಅಲ್ಲಿ ಸೇವ್ ಆಗಿರುತ್ತವೆ. ಮುಂದಿನ ಬಾರಿ ನಾವು ವಿಡಿಯೊ ವೀಕ್ಷಿಸುವಾಗ ನಾವು ಈವರೆಗೆ ನೋಡಿದ ಅಥವಾ ಹುಡುಕಿದ ವಿಷಯಗಳಿಗೆ ಸಂಬಂಧಿಸಿ ವಿಡಿಯೊಗಳು ಅಲ್ಲಿ suggested videos ಆಗಿ ಕಾಣಿಸುತ್ತವೆ. ಯುಟ್ಯೂಬ್‌ನಲ್ಲಿ ನಾವು ಏನು ನೋಡುತ್ತೇವೆ ಎಂಬುದು ನಮ್ಮ ಖಾಸಗಿ ವಿಷಯ ಆಗಿದ್ದರೂ ವಿಡಿಯೊ ವೀಕ್ಷಿಸಿದರ ನಂತರ clear watch History, Clear Search History ಎಲ್ಲವನ್ನೂ ಕ್ಲಿಯರ್ ಮಾಡಿ ನಿರಾಳವಾಗುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಕ್ಲಿಯರ್ ಮಾಡಬೇಕಾದ ಅಗತ್ಯ ಇಲ್ಲ. ಯುಟ್ಯೂಬ್ ಅಂಡ್ರಾಯ್ಡ್ ಅಪ್ಲಿಕೇಷನ್‌ನಲ್ಲಿ ಇನ್ ಕೋಗ್ನಿಟೊ ಮೋಡ್ (Incognito Mode) ಸೌಲಭ್ಯ ಒದಗಿಸಿದ್ದು, ಇಲ್ಲಿ ನಮ್ಮ ಯಾವುದೇ activity ಸೇವ್ ಆಗುವುದಿಲ್ಲ.

Enable ಮಾಡುವುದು ಹೇಗೆ?: ಯೂಟ್ಯೂಬ್ ಅಪ್ಲಿಕೇಷನ್ ಓಪನ್ ಮಾಡಿ. ಬಲಭಾಗದಲ್ಲಿ ಮೇಲ್ಭಾಗದಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ಅಕೌಂಟ್‌ಗೆ ಹೋಗಿ. ಅಲ್ಲಿ My channel, Paid Memberships, Switch account ಎಂಬ ಆಪ್ಶನ್ ಕೆಳಗೆ Turn on Incognito ಎಂಬ ಆಪ್ಶನ್ ಕಾಣಿಸುತ್ತದೆ. ಅದು ಕ್ಲಿಕ್ ಮಾಡಿದ ಕೂಡಲೇ ನೀವು Incognito mode ಬಳಸುತ್ತಿದ್ದೀರಿ ಎಂಬ ಸಂದೇಶ ಡಿಸ್ ಪ್ಲೇ ಆಗುತ್ತದೆ. ನೀವು ಈ mode Enable ಮಾಡಿದ ಕೂಡಲೇ App ನ ಬಲಭಾಗದಲ್ಲಿ ಮೇಲೆ ನಿಮ್ಮ ಪ್ರೊಫೈಲ್ ಚಿತ್ರದ ಬದಲು Incognito modeನ ಸ್ಪೈ ಐಕಾನ್ ಕಾಣಿಸುತ್ತದೆ. You are Incognito ಎಂಬ ಲೇಬಲ್ ನಿಮ್ಮ app ವಿಂಡೊದ ಕೆಳಗೆ ಕಾಣಿಸುತ್ತದೆ.

Incognito mode Enable ಮಾಡಿದ ನಂತರ ನೀವು ಯೂಟ್ಯೂಬ್‌ನಲ್ಲಿ ಏನೇ ಸರ್ಚ್ ಮಾಡಿದರೂ, ಯಾವುದೇ ವಿಡಿಯೊ ನೋಡಿದರೂ ನೀವು ನೋಡಿದ ವಿಷಯಗಳು ಯಾವುದೂ ಸೇವ್ ಆಗಿರುವುದಿಲ್ಲ. ಹಾಗಾಗಿ ವಿಡಿಯೊ ನೋಡಿದ ನಂತರ clear watch history ಮಾಡಬೇಕಾದ ಅಗತ್ಯವಿರುವುದಿಲ್ಲ. ಈ ಮೋಡ್‌ನಲ್ಲಿ ನೀವು ಸಬ್‌ಸ್ಕ್ರೈಬ್‌ ಮಾಡಿದ ವಿಡಿಯೊಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.

ಸದ್ಯ ಆ್ಯಂಡ್ರಾಯಿಡ್‌ನಲ್ಲಿ ಮಾತ್ರ ಇದು ಲಭ್ಯವಾಗಿದ್ದು, iOS ನಲ್ಲಿ ಈ ಸೌಲಭ್ಯ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಕಂಪನಿ ತಿಳಿಸಿಲ್ಲ.

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !