ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿ: ಹೊಸ ಎರ್ಟಿಗಾ ಬೆಲೆ ₹ 8.35 ಲಕ್ಷದಿಂದ ಆರಂಭ

Last Updated 15 ಏಪ್ರಿಲ್ 2022, 11:27 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ಶುಕ್ರವಾರ ಹೊಸ ಎರ್ಟಿಗಾ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 8.35 ಲಕ್ಷದಿಂದ ₹ 12.79 ಲಕ್ಷದವರೆಗೆ ಇದೆ.

ಈ ಮಾದರಿಯು 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, ಮ್ಯಾನುಯಲ್‌ ಮತ್ತು ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ಒಳಗೊಂಡಿದೆ.

ಪೆಟ್ರೋಲ್‌ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಇದು ಲಭ್ಯವಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ಗೆ 20.51 ಕಿಲೋ ಮೀಟರ್‌ ಮತ್ತು ಪ್ರತಿ ಕೆ.ಜಿ. ಸಿಎನ್‌ಜಿಗೆ 26.11 ಕಿಲೋ ಮೀಟರ್‌ ಮೈಲೇಜ್‌ ನೀಡಲಿದೆ ಎಂದು ಕಂಪನಿ ಹೇಳಿದೆ.

ಹೈಬ್ರಿಡ್‌ ತಂತ್ರಜ್ಞಾನ ಹೊಂದಿದ್ದು, ಪೆಡಲರ್ ಶಿಫ್ಟರ್‌ನೊಂದಿಗೆ ಸುಧಾರಿತ 6 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಹೊಂದಿದೆ.

‘ಮುಂದಿನ ಪೀಳಿಗೆಯ ಎರ್ಟಿಗಾ ಅನ್ನು ನಮ್ಮ ಗ್ರಾಹಕರು ಹೆಚ್ಚು ಇಷ್ಟಪಡುವ ವಿಶ್ವಾಸವಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಿಸಾಚಿ ಟೆಕುಚಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT