ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಎಸ್‌ಯುವಿ ಮಾರುತಿ ಎಸ್‌–ಪ್ರೆಸೊ ಬಿಡುಗಡೆ

Last Updated 30 ಸೆಪ್ಟೆಂಬರ್ 2019, 12:30 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ಸಣ್ಣ ಗಾತ್ರದ ಎಸ್‌ಯುವಿ ಎಸ್‌–ಪ್ರೆಸೊ ಬಿಡುಗಡೆ ಮಾಡಿದೆ. ಎಕ್ಸ್ ಷೋ ರೂಂ ಬೆಲೆ ₹ 3.69 ಲಕ್ಷದಿಂದ ₹ 4.91 ಲಕ್ಷದವರೆಗಿದೆ.

ಐದನೇ ಪೀಳಿಗೆಯ ಹಾರ್ಟ್‌ಟೆಕ್‌ ಆಧಾರದ ಮೇಲೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಮ್ಯಾನ್ಯುಯಲ್‌ ಮತ್ತು ಆಟೊ ಗಿಯರ್ ಶಿಫ್ಟ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಸ್‌–6, 1 ಲೀಟರ್‌ ಪೆಟ್ರೋಲ್‌ ಎಂಜಿನ್‌ ಒಳಗೊಂಡಿದ್ದು, ಪ್ರತಿ ಲೀಟರಿಗೆ 21.7 ಕಿ.ಮೀ ಇಂಧನ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

‘ಯುವಪೀಳಿಗೆಯ ಆಶಯಗಳಿಗೆ ಅನುಗುಣವಾಗಿ ಇದನ್ನು ರೂಪಿಸಲಾಗಿದೆ.ಮೂರರಿಂದ ಆರು ತಿಂಗಳ ಒಳಗಾಗಿ ಜಾಗತಿಕ ಮಾರುಕಟ್ಟೆಗೂ ರಫ್ತು ಮಾಡಲಾಗುವುದು’ ಎಂದು ಕಂಪನಿಯ ಸಿಇಒ ಕೆನೆಚಿ ಅಯುಕವಾ ತಿಳಿಸಿದ್ದಾರೆ

‘ಈ ಮಾದರಿ ಶೇ 98ರಷ್ಟು ಸ್ಥಳೀಯವಾಗಿದ್ದು, ಇದನ್ನು ಅಭಿವೃದ್ಧಿಪಡಿಸಲು ₹ 640 ಕೋಟಿ ಹೂಡಿಕೆ ಮಾಡಿರುವುದಾಗಿ’ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ವಿ. ರಾಮನ್‌ ತಿಳಿಸಿದ್ದಾರೆ.

ಡ್ಯುಯಲ್‌ ಏರ್‌ಬ್ಯಾಗ್, ಎಬಿಎಸ್‌, ಇಬಿಡಿ, ರಿಯರ್‌ ಪಾರ್ಕಿಂಗ್‌ ಅಸಿಸ್ಟ್‌ ಸಿಸ್ಟಂ, ಹೈ ಸ್ಪೀಡ್‌ ವಾರ್ನಿಂಗ್‌ ಅಲರ್ಟ್‌, ರಿವರ್ಸ್‌ ಪಾರ್ಕಿಂಗ್‌ ಸೆನ್ಸರ್‌ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT