ಭಾನುವಾರ, ಫೆಬ್ರವರಿ 23, 2020
19 °C
ಮಾರುತಿ ಸುಜುಕಿ ಕಂಪನಿಯ ಕಾಂಪ್ಯಾಕ್ಟ್‌ ಎಸ್‌ಯುವಿ

ವಿಟಾರಾ ಬ್ರೆಜಾ ಪೆಟ್ರೋಲ್‌ ಅವತರಣಿಕೆ ಅನಾವರಣ

ಕೇಶವ ಜಿ.ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ (ಎಂಎಸ್‌ಐಎಲ್‌) ತನ್ನ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ವಿಟಾರಾ ಬ್ರೆಜಾದ ಸಂಪೂರ್ಣ ಹೊಸ ಅವತರಣಿಕೆಯನ್ನು ಗುರುವಾರ ಇಲ್ಲಿ ಅನಾವರಣಗೊಳಿಸಿತು.

ವಾಹನ ಮೇಳದ ಎರಡನೇ ದಿನ ನಡೆದ ಸಮಾರಂಭದಲ್ಲಿ, ಶಕ್ತಿಯುತ 1.5 ಲೀಟರ್‌ ಕೆ–ಸಿರೀಸ್‌ನ ಬಿಎಸ್‌6 ಪೆಟ್ರೋಲ್‌ ಎಂಜಿನ್‌ ಒಳಗೊಂಡಿರುವ ಹೊಸ ಮಾದರಿಯ ವಿಟಾರಾ ಬ್ರೆಜಾ ಪರಿಚಯಿಸಿತು.

 2016ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದ ವಿಟಾರಾ ಬ್ರೆಜಾ, ಕಾಂಪ್ಯಾಕ್ಟ್‌ ಎಸ್‌ಯುವಿಗಳ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ನಾಲ್ಕು ವರ್ಷಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಯುಟಿಲಿಟಿ ವೆಹಿಕಲ್‌ ವಿಭಾಗದಲ್ಲಿ ಮಾರುತಿ ಮುಂಚೂಣಿಯಲ್ಲಿ ಇರುವುದನ್ನೂ ಇದು ದೃಢಪಡಿಸಿದೆ.

ಈಗ ವೃದ್ಧಿಸಿದ ಎಂಜಿನ್‌ ಸಾಮರ್ಥ್ಯ, ಹೆಚ್ಚಿನ ಅನುಕೂಲತೆ, ಆರಾಮ ಮತ್ತು ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಸ ನೋಟದೊಂದಿಗೆ ಪರಿಚಯಿಸಲಾಗಿದೆ. ತನ್ನ ಆಕರ್ಷಕ ವಿನ್ಯಾಸದಿಂದಾಗಿ ಕಾಂಪ್ಯಾಕ್ಟ್‌ ಎಸ್‌ಯುವಿ ವಲಯದ ವ್ಯಾಖ್ಯಾನವನ್ನೇ ಬದಲಿಸಲಿದೆ.

‘ಸಂಪೂರ್ಣ ಹೊಸದಾದ ವಿಟಾರಾ ಬ್ರೆಜಾ ಕೂಡ ಗ್ರಾಹಕರಿಗೆ ತುಂಬ ಮೆಚ್ಚುಗೆಯಾಗಲಿದೆ. ಹಿಂದಿನಂತೆ ಈ ಬಾರಿಯೂ ಉತ್ತೇಜಕರ ಪ್ರತಿಕ್ರಿಯೆ ಕಂಡುಬರುವ  ಬಗ್ಗೆ ನಮಗೆ ದೃಢ ವಿಶ್ವಾಸ ಇದೆ’ ಎಂದು ಕಂಪನಿಯ ಸಿಇಒ ಕೆನಿಚಿ ಆಯುಕಾವಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು