ಸೋಮವಾರ, ಡಿಸೆಂಬರ್ 6, 2021
23 °C

ಹೊಸ ಮರ್ಸಿಡಿಸ್‌ ಎಎಂಜಿ ಎ45 ಎಸ್‌ 4ಮ್ಯಾಟಿಕ್‌+ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಮರ್ಸಿಡಿಸ್‌ ಬೆಂಜ್‌ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ‘ಎಎಂಜಿ ಎ 45 ಎಸ್‌ 4ಮ್ಯಾಟಿಕ್‌+’ ಕಾರು ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 79.50 ಲಕ್ಷ.

ಇದು 2 ಲೀಟರ್‌ ಟರ್ಬೊ ಚಾರ್ಜ್ಡ್‌ ಎಂಜಿನ್‌ ಹೊಂದಿದ್ದು, 421 ಎಚ್‌ಪಿ ಶಕ್ತಿ ಉತ್ಪಾದಿಸಬಲ್ಲದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಕಾರನ್ನು ಬಿಡುಗಡೆ ಮಾಡುವ ಮೂಲಕ ಕಂಪನಿಯ ಎ–ಕ್ಲಾಸ್‌ ವಿಭಾಗವನ್ನು ಮತ್ತಷ್ಟು ಬಲಪಡಿಸಲಾಗಿದೆ. ದೇಶದಲ್ಲೇ ಅತಿ ವೇಗದಲ್ಲಿ ಚಲಿಸುವ ಹ್ಯಾಚ್‌ಬ್ಯಾಕ್‌ ಇದಾಗಿದೆ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್‌ ಶ್ವೆಂಕ್‌ ಹೇಳಿದ್ದಾರೆ.

ದೇಶದಾದ್ಯಂತ ಇರುವ ಮರ್ಸಿಡಿಸ್‌ ಬೆಂಜ್‌ ವಿತರಣಾ ಕೇಂದ್ರಗಳು ಮತ್ತು ಮರ್ಸಿಡಿಸ್‌ ಬೆಂಜ್‌ನ ಆನ್‌ಲೈನ್‌ ಮಳಿಗೆಯ ಮೂಲಕ ಈ ಕಾರು ಖರೀದಿಗೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು