ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿ ಮೋಟರ್‌: ಪ್ರೀಮಿಯಂ ಎಸ್‌ಯುವಿ ಗ್ಲೋಸ್ಟರ್‌ ಅನಾವರಣ

Last Updated 24 ಸೆಪ್ಟೆಂಬರ್ 2020, 15:56 IST
ಅಕ್ಷರ ಗಾತ್ರ

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಎಸ್‌ಯುವಿ ಗ್ಲೋಸ್ಟರ್‌ ಅನಾವರಣಗೊಳಿಸಿದೆ. ಈ ಎಸ್‌ಯುವಿ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದ್ದು, ಮುಂಗಡ ಬುಕಿಂಗ್‌ ಆರಂಭವಾಗಿದೆ. ₹ 1 ಲಕ್ಷ ಪಾವತಿಸಿ ಆನ್‌ಲೈನ್‌ ಅಥವಾ ಡೀಲರ್‌ಮೂಲಕ ಬುಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

‘ಕನೆಕ್ಟೆಡ್‌ ಆಟೊನಮಸ್‌, ಷೇರ್ಡ್‌ ಆ್ಯಂಡ್‌ ಎಲೆಕ್ಟ್ರಿಕ್‌ (ಸಿಎಎಸ್‌ಇ) ವಿಭಾಗದಲ್ಲಿ ಈಗಾಗಲೇ ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ. ಕನೆಕ್ಟೆಡ್ ಎಸ್‌ಯುವಿ ಹೆಕ್ಟರ್‌, ಎಲೆಕ್ಟ್ರಿಕ್‌ ವೆಹಿಕಲ್‌ ಜೆಡ್‌ಎಸ್‌ ಇವಿ ಮತ್ತು ಇದೀಗ ಆಟೊನಮಸ್‌ ಡ್ರೈವಿಂಗ್‌ನ ಗ್ಲೋಸ್ಟರ್ ಎಸ್‌ಯುವಿ ನೀಡಿದ್ದೇವೆ’ ಎಂದು ಕಂಪನಿಯ ಭಾರತದ ಅಧ್ಯಕ್ಷ ರಾಜೀವ್‌ ಛಬ್ಬಾ ತಿಳಿಸಿದ್ದಾರೆ.

ತಿಂಗಳಿಗೆ 500 ಕಾರುಗಳನ್ನು ಮಾರಾಟ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಗ್ಲೋಸ್ಟರ್‌ ಕಾರು 2 ಲೀಟರ್‌ ಟರ್ಬೊ ಡೀಸೆಲ್ ಎಂಜಿನ್‌ ಹೊಂದಿದ್ದು, 218 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು. ಸುಧಾರಿತ ಡ್ರೈವರ್‌ ಅಸಿಸ್ಟನ್ಸ್‌ ಸಿಸ್ಟಂ, ಫ್ರಂಟ್‌ ಕೊಲಿಷನ್‌ ವಾರ್ನಿಂಗ್‌, ಆಟೊಮೆಟಿಕ್‌ ಎಮರ್ಜನ್ಸಿ ಬ್ರೇಕಿಂಗ್‌, ಲೇನ್‌ ಡಿಪಾರ್ಚ್‌ ವಾರ್ನಿಂಗ್‌ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT