ಮುಂಬೈ: ವಿದ್ಯುತ್ಚಾಲಿತ ವಾಹನಗಳ (ಇ.ವಿ) ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಕಂಪನಿಯು ಎಸ್ಯುವಿ ವಿಭಾಗದ ‘ಮಾಡೆಲ್ ವೈಎಲ್’ ಕಾರನ್ನು ಇಲ್ಲಿನ ‘ದ ಬಲ್ಲಾರ್ಡ್ ಪಿಯರ್ ಡೌನ್ಟೌನ್ ಎಕ್ಸ್ಪೀರಿಯನ್ಸ್ ಸೆಂಟರ್’ನಲ್ಲಿ ಬುಧವಾರ ಅನಾವರಣಗೊಳಿಸಿತು.

ಆರು ಆಸನಗಳ ಈ ಕಾರಿನ ಆರಂಭಿಕ ಬೆಲೆ ₹61.99 ಲಕ್ಷವಾಗಿದ್ದು, ಮಾಸಿಕ ಕಂತು (ಇಎಂಐ) ₹49,000 ದಿಂದ ಪ್ರಾರಂಭವಾಗುತ್ತದೆ. ದೇಶದಾದ್ಯಂತ ಆನ್ಲೈನ್ ಮೂಲಕ ಬುಕ್ಕಿಂಗ್ ಶುರುವಾಗಿದೆ ಎಂದು ಟೆಸ್ಲಾ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಶರದ್ ಅಗರ್ವಾಲ್ ಅವರು ತಿಳಿಸಿದರು.

ಕಳೆದ ವರ್ಷ ‘ಮಾಡೆಲ್ ವೈ’ ಕಾರನ್ನು ಇಲ್ಲಿನ ಮಳಿಗೆಯಲ್ಲಿ ಅನಾವರಣ ಮಾಡುವ ಮೂಲಕ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಟೆಸ್ಲಾ, ಈಗ ‘ಮಾಡೆಲ್ ವೈಎಲ್’ ಕಾರನ್ನು ಅನಾವರಣಗೊಳಿಸಿದೆ. ಇದು ಈ ವರ್ಷದ ಜೂನ್ನಿಂದ ಗ್ರಾಹಕರಿಗೆ ಲಭ್ಯವಾಗಲಿದೆ.

ಗಂಟೆಗೆ ಗರಿಷ್ಠ 200 ಕಿ.ಮೀ. ಕ್ರಮಿಸಲಿದ್ದು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 681 ಕಿ.ಮೀ.ವರೆಗೂ ಸಂಚರಿಸಬಹುದು. ಬೆಂಗಳೂರು, ದೆಹಲಿ, ಚಂಡೀಗಢ, ಜೈಪುರ, ಅಹಮದಾಬಾದ್, ಪುಣೆ ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳು ಮತ್ತು ಹೆದ್ದಾರಿಗಳಲ್ಲಿ ಸೂಪರ್ ಜಾರ್ಜಿಂಗ್ ಸ್ಟೇಷನ್ಗಳನ್ನು ಆರಂಭಿಸಲಾಗುವುದು ಎಂದು ಅಗರ್ವಾಲ್ ತಿಳಿಸಿದರು.

ಕಂಪನಿಯು ಈಗಾಗಲೇ 21 ರಾಜ್ಯಗಳಲ್ಲಿ ಕಾರುಗಳನ್ನು ಪೂರೈಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಳಗಳಿಗೆ ವಿಸ್ತರಣೆಯಾಗಲಿದೆ. ‘ಮಾಡೆಲ್ ವೈಎಲ್’ ಕಾರನ್ನು ಅತ್ಯುತ್ತಮ ಕೌಟುಂಬಿಕ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ. ಒಳಾಂಗಣದಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಇದರ ಉಪಯುಕ್ತತೆ ಹೆಚ್ಚು ಎಂದು ವಿವರಿಸಿದರು.

ಟೆಸ್ಲಾ ಪ್ರಸ್ತುತ ಮುಂಬೈ, ಗುರುಗ್ರಾಮ, ದೆಹಲಿ ಮತ್ತು ಪುಣೆಯಲ್ಲಿ ಸೇವಾ ಕೇಂದ್ರಗಳನ್ನು ಹೊಂದಿದೆ. ಜೂನ್ ಒಳಗಾಗಿ ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್ನಲ್ಲಿ ಈ ಕೇಂದ್ರಗಳನ್ನು ಆರಂಭಿಸಲಿದೆ. ಗ್ರಾಹಕರ ಹಿತಾಸಕ್ತಿ, ಗುಣಮಟ್ಟಕ್ಕೆ ಟೆಸ್ಲಾ ಮೊದಲ ಆದ್ಯತೆ ನೀಡಿದ್ದು, ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ ಎಂದರು.

‘ಟೆಸ್ಲಾ ಕಳೆದ ವರ್ಷದ ಸೆಪ್ಟೆಂಬರ್ನಿಂದ ಭಾರತದಲ್ಲಿ ‘ಮಾಡೆಲ್ ವೈ’ ಕಾರುಗಳ ವಿತರಣೆಯನ್ನು ಆರಂಭಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ. ನಮ್ಮ ಮಳಿಗೆಗಳಲ್ಲಿ ಗ್ರಾಹಕಸ್ನೇಹಿ ವಾತಾವರಣವಿದೆ. ಉತ್ತಮ ಸೇವೆ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ’ ಎಂದು ತಿಳಿಸಿದರು.

(ಕಂಪನಿ ಆಹ್ವಾನದ ಮೇರೆಗೆ ಪ್ರತಿನಿಧಿ ಮುಂಬೈಗೆ ತೆರಳಿದ್ದರು)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1385483320

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.