ಎಲೆಕ್ಟ್ರಿಕ್‌ ಕಾರು ಸದ್ಯ ಮಾರುಕಟ್ಟೆಗೆ

ಭಾನುವಾರ, ಏಪ್ರಿಲ್ 21, 2019
26 °C

ಎಲೆಕ್ಟ್ರಿಕ್‌ ಕಾರು ಸದ್ಯ ಮಾರುಕಟ್ಟೆಗೆ

Published:
Updated:
Prajavani

ಮೋರಿಸ್‌ ಗ್ಯಾರೇಜಸ್‌ (ಎಂ.ಜಿ ಮೋಟಾರ್ಸ್‌) ಸಂಸ್ಥೆ ಸದ್ಯದಲ್ಲೇ ಎಲೆಕ್ಟ್ರಿಕ್‌ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. 

ಭಾರತ ಸೇರಿದಂತೆ ಈ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಗೂ ಕಾಲಿಡಲಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನೂ ಹೊಂದಿದೆ. 

ವಿನ್ಯಾಸ ಹಾಗೂ ಸುಧಾರಿತ ತಂತ್ರಜ್ಞಾನದಲ್ಲೂ ಈ ಕಾರು ಮಹತ್ವದ ಸ್ಥಾನ ಪಡೆಯಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಎಂಜಿ ಝಡ್‌ಎಸ್‌  ಪೆಟ್ರೋಲ್‌ ಆವೃತ್ತಿ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಅದೇ ರೀತಿ ಎಲೆಕ್ಟ್ರಿಕ್‌ ಆವೃತ್ತಿ ಕೂಡ ಗ್ರಾಹಕರನ್ನು ಮೆಚ್ಚಿಸಲಿದೆ ಎಂದು ಎಂ.ಜಿ ಮೋಟಾರ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಹೇಳಿದರು. 

ಬ್ರಿಟನ್‌, ಜರ್ಮನಿ, ಆಸ್ಟ್ರೇಲಿಯಾ, ಥಾಯ್ಲೆಂಡ್‌ನಲ್ಲಿ ವರ್ಷಾಂತ್ಯಕ್ಕೆ ಕಾರು ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !