ಸೋಮವಾರ, ಸೆಪ್ಟೆಂಬರ್ 16, 2019
26 °C

ನಿಸಾನ್‌ ಕಿಕ್ಸ್‌ ಎಕ್ಸ್‌ಇ ಮಾರುಕಟ್ಟೆಗೆ

Published:
Updated:

ನಿಸಾನ್ ಇಂಡಿಯಾ ತನ್ನ ಇಂಟೆಲಿಜೆಂಟ್ ಎಸ್‍ಯುವಿ ಶ್ರೇಣಿಯ ಕಿಕ್ಸ್ ಎಕ್ಸ್‌ಇ ಡೀಸೆಲ್ ಶ್ರೇಣಿಯ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೇಶದಾದ್ಯಂತ ಇದರ ಬೆಲೆ ₹ 9.89 ಲಕ್ಷ ಇದೆ. 

ಸಾಕಷ್ಟು ಸ್ಥಳಾವಕಾಶ ಹೊಂದಿದ ಇಂಟೀರಿಯರ್ಸ್ ಮತ್ತು ಸ್ಟೈಲಿಶ್ ಹೊರಾಂಗಣವನ್ನು ಬಯಸುವ ಗ್ರಾಹಕರಿಗೆ ಈ ಕಿಕ್ಸ್ ಹೇಳಿ ಮಾಡಿಸಿದಂತಹ ವಾಹನವಾಗಿದೆ. ಹಿಂಭಾಗದ ಎಸಿ ವೆಂಟ್ ಆಟೊ ಎಸಿ, ಡ್ಯುಯೆಲ್ ಏರ್‌ಬ್ಯಾಗ್‌, ಎಬಿಎಸ್+ಇಬಿಡಿ+ಬ್ರೇಕ್ ಅಸಿಸ್ಟ್, ನಿಸಾನ್ ಕನೆಕ್ಟ್, ಯುಎಸ್‍ಬಿ ಮತ್ತು ಬ್ಲೂಟೂತ್‌ ಕನೆಕ್ಟಿವಿಟಿ, ಕೂಲ್ಡ್ ಗ್ಲೋವ್ ಬಾಕ್ಸ್, ಶಾರ್ಕ್ ಫಿನ್ ಆಂಟೆನಾ, ಚೈಲ್ಡ್ ಲಾಕ್  ಸೇರಿದಂತೆ 50 ಕ್ಕೂ ಹೆಚ್ಚು ವೈಶಿಷ್ಟ್ಯ ಹೊಂದಿದೆ.  

‘ಹೊಸ ನಿಸಾನ್ ಎಸ್‌ಯುವಿಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಗ್ರಾಹಕರಿಗೆ ಅತ್ಯುತ್ತಮ ಎನಿಸುವ ಮೌಲ್ಯವನ್ನು ತಂದುಕೊಡಲಿದೆ. ಇದರ ಜತೆಗೆ ಅತ್ಯುತ್ತಮ ದರ್ಜೆಯ ಸೇವೆ ಮತ್ತು ಗುಣಮಟ್ಟದ ಭರವಸೆಯನ್ನು ನೀಡಲಿದೆ’ ಎಂದು ನಿಸಾನ್ ಮೋಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಶ್ರೀರಾಂ ಪದ್ಮನಾಭನ್‌ ತಿಳಿಸಿದ್ದಾರೆ.

5 ವರ್ಷಗಳ ಉಚಿತ ವಾರಂಟಿ ಮತ್ತು ದಿನದ 24 ಗಂಟೆಯೂ ರೋಡ್‍ಸೈಡ್ ಅಸಿಸ್ಟನ್ಸ್ ನೀಡಲಿದೆ.    ಇಂಟಲಿಜೆಂಟ್ ಕೀ ಮೂಲಕ ಪುಷ್-ಸ್ಟಾಪ್-ಸ್ಟಾರ್ಟ್ ಮತ್ತು ‘ಲೀಡ್ ಮಿ ಟು ಕಾರ್’ ಸೌಲಭ್ಯವನ್ನು ಹೊಂದಿದೆ. ಇದು ಕಾರಿನ ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ ಮತ್ತು ವಾಹನ ಚಾಲಕನಿಗೆ ಅನುಕೂಲಕರವಾದ ಅನುಭವವನ್ನು ನೀಡಲಿದೆ. 

ಬೆನೆಲ್ಲಿಯ ಹೊಸ ಲಿಯೋನ್‌ಸಿಯೊ

ಸೂಪರ್‌ ಬೈಕ್‌ಗಳನ್ನು ತಯಾರಿಸುವ ಇಟಲಿಯ ಬೆನೆಲ್ಲಿ ಕಂಪನಿಯ ಭಾರತದಲ್ಲಿ ತನ್ನ ಮಾರಾಟ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಕೆಲವು ಬೈಕ್‌ಗಳನ್ನು ಇಲ್ಲಿನ ಮಾರುಕಟ್ಟಗೆ ಬಿಡುಗಡೆ ಮಾಡಿದೆ. ಆದೀಶ್ವರ್‌ ಆಟೊ ರೈಡ್‌ ಕಂಪನಿಯು ಭಾರತದಲ್ಲಿ ಈ ಬೈಕ್‌ಗಳನ್ನು ಪರಿಚಯಿಸಲಿದೆ.

ಬೆನೆಲ್ಲಿಯ ಹೊಸ ಲಿಯೋನ್‌ಸಿಯೊ ಎಕ್ಸ್‌ ಷೋರೂಂ ಬೆಲೆ ₹ 4.79 ಲಕ್ಷ ಇದೆ. ಗ್ರಾಹಕರು india.benelli.comಗೆ ಭೇಡಿ ನೀಡಿ ಅಥವಾ ಹತ್ತಿರದ ಬೆನೆಲ್ಲಿ ವಿತರಣಾ ಕೇಂದ್ರದಲ್ಲಿ ₹ 10 ಸಾವಿರ ಪಾವತಿಸಿ ಬುಕಿಂಗ್‌ ಮಾಡಬಹುದಾಗಿದೆ. ಈ ಬೈಕ್‌ಗೆ ಕಿಲೋ ಮೀಟರ್‌ನ ಮಿತಿ ಇಲ್ಲದೇ 5 ವರ್ಷಗಳ ವಾರಂಟಿಯೂ ಸಹ ಭಾರತದ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

‘ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸವನ್ನು ಒಳಗೊಂಡಿದೆ. ಇದು ಬ್ರ್ಯಾಂಡ್‌ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಭಾರತದಲ್ಲಿ ಗ್ರಾಹಕರ ಸಂಖ್ಯೆ ಮತ್ತು ಸಂಪರ್ಕ ಜಾಲವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದೇವೆ. ಮುಂಬರುವ ವರ್ಷಗಳಲ್ಲಿ ಉತ್ತಮ ಮಾರಾಟ ಮತ್ತು ಸಕಾರಾತ್ಮಕ ಪ್ರಗತಿ ಸಾಧಿಸುವ ವಿಶ್ವಾಸವಿದೆ’ ಎಂದು ಬೆನೆಲ್ಲಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕಾಸ್‌ ಜೆ. ಹೇಳಿದ್ದಾರೆ.

Post Comments (+)