ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾದಿಂದ ಹೊಸ ಪಿಕಪ್

Last Updated 26 ಸೆಪ್ಟೆಂಬರ್ 2022, 19:50 IST
ಅಕ್ಷರ ಗಾತ್ರ

ಹೈದರಾಬಾದ್: ಟಾಟಾ ಮೋಟರ್ಸ್‌ ಕಂಪನಿಯು ಹೊಸ ಮಾದರಿಯ ಪಿಕಪ್‌‌ ವಾಹನಗಳನ್ನು ಸೋಮವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇಲ್ಲಿನ ಜಿ.ಎಂ.ಆರ್. ಅರೆನಾ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಅವರು, ಟಾಟಾ ಯೋಧ 2.O, ಇಂಟ್ರಾ ವಿ50 ಹಾಗೂ ಇಂಟ್ರಾ ವಿ20 (ಸಿಎನ್‌ಜಿ ಮತ್ತು ಪೆಟ್ರೋಲ್‌) ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.

‘ಪಿಕಪ್‌ನಲ್ಲಿ ಕೃಷಿ ಉತ್ಪನ್ನಗಳನ್ನು ರೈತರು ಹಾಗೂ ಮಾರಾಟಗಾರರು ಸುರಕ್ಷಿತವಾಗಿ ಮಾರುಕಟ್ಟೆಗೆ ಒಯ್ಯ
ಬಹುದು. ಚಾಲಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ವಾಹನಗಳು ಆಧುನಿಕ ಸೌಲಭ್ಯವನ್ನು ಒಳಗೊಂಡಿವೆ’ ಎಂದು ವಾಘ್ ಮಾಹಿತಿ ನೀಡಿದರು.

‘ಬಿಡುಗಡೆಗೆ ಮುನ್ನವೇ ಒಂದು ಸಾವಿರ ವಾಹನಗಳ ಬುಕಿಂಗ್ ಸ್ವೀಕರಿಸಲಾಗಿತ್ತು. ಸೋಮವಾರ ದೇಶದ 200 ಸ್ಥಳಗಳಲ್ಲಿ ವಾಹನಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಟಾಟಾ ಯೋಧ ವಾಹನಕ್ಕೆ ₹ 10.74 ಲಕ್ಷ ಹಾಗೂ ಇಂಟ್ರಾ ವಿ-50ಗೆ ₹ 8.67 ಲಕ್ಷ ಬೆಲೆ ನಿಗದಿಪಡಿಸಲಾಗಿದೆ’ ಎಂದು ಅವರು ವಿವರಿಸಿದರು.

‘ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸಲು ಗಮನ ಹರಿಸಲಾಗುತ್ತಿದೆ. ಈ ವಾಹನಗಳಿಗೆ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳಬೇಕಿದ್ದು, ಮೇ ಅಂತ್ಯಕ್ಕೆ ಹೊಸ ಮಾದರಿಯ ಇ.ವಿ. ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.

‘ಯೋಧ 2.Oದಲ್ಲಿ ಎರಡು ಟನ್‌ವರೆಗೆ ಸರಕು ಸಾಗಿಸಲು ಸಾಧ್ಯವಿದೆ. ಇದು 2.2 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದ್ದು, ಕ್ಯಾಬಿನ್‌ನಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿದೆ. ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳ ರಸ್ತೆಯಲ್ಲೂ ಸರಕು ಸಾಗಣೆಯ ಸಾಮರ್ಥ್ಯ ‌ಹೊಂದಿದೆ‌. ಇಂಟ್ರಾದಲ್ಲಿ ಒಂದೂವರೆ ಟನ್ ಸರಕು ಸಾಗಣೆ ಸಾಧ್ಯ. ಸಿಎನ್‌ಜಿ ವಾಹನದಲ್ಲಿ ಸೋರಿಕೆ ಅಲರ್ಟ್ ಸೌಲಭ್ಯ ನೀಡಲಾಗಿದೆ. ಕ್ಯಾಬಿನ್‌ನಲ್ಲಿ ಹವಾನಿಯಂತ್ರಭ ವ್ಯವಸ್ಥೆಯಿದೆ’ ಎಂದರು.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ಹೈದರಾಬಾದ್‌ಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT