ವಾಹನ–ತಂತ್ರಜ್ಞಾನ

ಭಾನುವಾರ, ಏಪ್ರಿಲ್ 21, 2019
26 °C

ವಾಹನ–ತಂತ್ರಜ್ಞಾನ

Published:
Updated:
Prajavani

ಅಪಾಚೆಯಲ್ಲಿ ಎಬಿಎಸ್ ತಂತ್ರಜ್ಞಾನ

ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟಾರ್ಸ್ ಅಪಾಚೆ ಆರ್‌ಟಿಆರ್ ಬೈಕ್‌ಗಳಲ್ಲಿನ ತಂತ್ರಜ್ಞಾನವನ್ನು ಮೇಲ್ದರ್ಜಗೆ ಏರಿಸಿದ್ದು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್‌) ತಂತ್ರಜ್ಞಾನವನ್ನು ಅಳವಡಿಸಿದೆ. ₹85,510 ಮೌಲ್ಯದ ಅಪಾಚೆ ಆರ್‌ಟಿಆರ್‌ 160, ₹90,978 ಮೌಲ್ಯದ ಅಪಾಚೆ ಆರ್‌ಟಿಆರ್ 180, ₹89,795 ಮೌಲ್ಯದ ಅಪಾಚೆ ಆರ್‌ಟಿಆರ್‌ 4ವಿ 160 ಮತ್ತು ₹1,11 ಲಕ್ಷ ಮೌಲ್ಯದ ಅಪಾಚೆ ಆರ್‌ಟಿಆರ್‌ನಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿದೆ. ಸುರಕ್ಷಿತ ಪ್ರಯಾಣಕ್ಕೆ ಮತ್ತು ರಸ್ತೆ ತಿರುವುಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದಕ್ಕೆ ಇದು ನೆರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. 

ಬಿಎಂಡಬ್ಲ್ಯೂನಿಂದ ಹೊಸ ಎಸ್‌ಯುವಿ

ಜರ್ಮನಿಯ ವಿಲಾಸಿ ವಾಹನಗಳ ತಯಾರಿಕಾ ಕಂಪನಿ ಬಿಎಂಡಬ್ಲ್ಯೂ 530ಐ ಎಂ ಸ್ಪೋರ್ಟ್‌ ಹೆಸರಿನ ಹೊಸ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.  ಇದರ ಎಕ್ಸ್‌ಷೋರೂಂ ಬೆಲೆ ₹ 59.2 ಲಕ್ಷ.  ಇದು ಪೆಟ್ರೋಲ್‌ನಿಂದ ಚಲಿಸುವಂತಹ ವಾಹನವಾಗಿರುವುದು ವಿಶೇಷ. ಇದನ್ನು ಚೆನ್ನೈನಲ್ಲಿ ತಯಾರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. 

ಸಂಸ್ಥೆಯು ಈಗಾಗಲೇ ಈ ಮಾದರಿಯ ಡೀಸೆಲ್ ಚಾಲಿತ ವಾಹನವನ್ನು ಮಾರುಕಟ್ಟೆಗೆ ತಂದಿದೆ.  ಈ ಹೊಸ ವಾಹನದಲ್ಲಿ ಡಿಸ್‌ಪ್ಲೇ ತಂತ್ರಜ್ಞಾನ ಅಳವಡಿಸಲಾಗಿದ್ದು, 24 ಗಂಟೆಯೂ ಮಾಲೀಕರ ಸಂಪರ್ಕದಲ್ಲಿ ಕಾರ್ ಇರುವಂತೆ ಮಾಡಲಾಗಿದೆ. ಅಲ್ಲದೇ ಚಾಲಕನಿಗೆ ನೆರವಾಗುವ ಗೆಸ್ಚರ್ ಕಂಟ್ರೋಲ್ ತಂತ್ರಜ್ಞಾನವನ್ನೂ ಒಳಗೊಂಡಿದೆ.

ಸುರಕ್ಷತೆ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು,  ಎಬಿಎಸ್‌ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ), ಡಿಎಸ್‌ಸಿ  (ಡೈನಮಿಕ್‌ ಸ್ಟೆಬಿಲಿಟಿ ಕಂಟ್ರೋಲ್‌) ಡಿಟಿಸಿ (ಡೈನಮಿಕ್ ಟ್ರ್ಯಾಕ್ಷನ್ ಕಂಟ್ರೋಲ್‌ ಮತ್ತು ಒಬಿಸಿ ( ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ತಂತ್ರಜ್ಞಾನಗಳನ್ನೂ ಅಳವಡಿಸಲಾಗಿದೆ.

ಮಾರುತಿಯಿಂದ ಸಿಯಾಜ್‌ (Ciaz)

ಭಾರತದಲ್ಲಿ ಅತಿದೊಡ್ಡ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಸ್‌ಐ) ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

1.5 ಲೀಟರ್ ಡೀಸೆಲ್‌ ಎಂಜಿನ್ ಸಾಮರ್ಥ್ಯದ ಈ ವಾಹನದ ಎಕ್ಸ್‌–ಷೋರೂಂ ಬೆಲೆ ₹9.97ಲಕ್ಷ. ಇಂಧನ ಉಳಿತಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವಾಹನ ತಯಾರಿಸಲಾಗಿದ್ದು, ವಿಶೇಷ ಎಂಜಿನ್ ಅಳವಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.  ಸಿಯಾಜ್ ಡೆಲ್ಟಾ (₹9.97 ಲಕ್ಷ), ಜೆಟಾ (₹11.8 ಲಕ್ಷ), ಮತ್ತು ಟಾಪ್‌ಎಂಡ್ ಆಲ್ಫಾ ಟ್ರಿಮ್‌ (₹11.37 ಲಕ್ಷ) ಮೂರು ಮಾದರಿಗಳಲ್ಲಿ ವಾಹನ ಲಭ್ಯವಿದೆ.

ಮುಂದಿನ ಪೀಳಿಗೆಯ ಸ್ಮಾರ್ಟ್ ಕಾರ್‌

ವಿಲಾಸಿ ವಾಹನಗಳ ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಜ್‌ನ ಸಹ ಸಂಸ್ಥೆ ಡೈಮ್ಲರ್‌ ಮತ್ತು ಚೀನಾದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾದ ಗೀಲಿ, ಮುಂದಿನ ಪೀಳಿಗೆಯ ವಿದ್ಯುತ್‌ ಚಾಲಿತ ಸ್ಮಾರ್ಟ್ ಕಾರ್‌ ಅನ್ನು ಚೀನಾದಲ್ಲಿ ತಯಾರಿಸುತ್ತಿರುವುದಾಗಿ ಘೋಷಿಸಿವೆ. 

2022ರ ವೇಳೆಗೆ ಈ ವಾಹನ ರಸ್ತೆಗಿಳಿಯಲಿದೆ ಎಂದು ಎರಡೂ ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.  ಈ ಹೊಸ ವಾಹನದ ವಿನ್ಯಾಸ ಜವಾಬ್ದಾರಿ ಮರ್ಸಿಡಿಸ್ ಬೆಂಜ್ ಹೊತ್ತಿಕೊಂಡಿದ್ದು, ತಂತ್ರಜ್ಞಾನ ಒದಗಿಸುವ ಹೊಣೆ ಗೀಲಿ ಸಂಸ್ಥೆಯದ್ದು.

ಸಾಫ್ಟ್‌ಬ್ಯಾಂಕ್‌–ಟೊಯೊಟಾ ಜತೆ ಕೈ ಜೋಡಿಸಿದ ಹೋಂಡ–ಹಿನೊ

ಜಪಾನ್‌ನ ವಾಹನ ತಯಾರಿಕಾ ಸಂಸ್ಥೆಗಳಾದ ಹೋಂಡ ಮತ್ತು ಹಿನೊ, ಟೊಯೊಟಾ ಮೊಬಿಲಿಟಿ ಸರ್ವಿಸ್‌ ಮತ್ತು ಸಾಫ್ಟ್‌ಬ್ಯಾಂಕ್ ಜತೆ ಕೈ ಜೋಡಿಸಿವೆ.  ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಜಪಾನ್‌ ಈ ಸಂಸ್ಥೆಗಳು ಒಟ್ಟುಗೂಡುವುದಾಗಿ ಹಿಂದಿನ ವರ್ಷವೇ ಘೋಷಿಸಿದ್ದವು. 

ಪ್ರತಿ ಸಂಸ್ಥೆಯು ಶೇ 9.9ರಷ್ಟು ಪಾಲು ಪಡೆಯುವುದಾಗಿ ತಿಳಿಸಿವೆ.  ಪ್ರತಿ ಕಂಪನಿ ಸುಮಾರು ₹ 1600 ಕೋಟಿ ಹೂಡಿಕೆ ಮಾಡುತ್ತಿವೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !