ಶನಿವಾರ, ಅಕ್ಟೋಬರ್ 19, 2019
22 °C

ಟಾಟಾ ಮೋಟರ್ಸ್‌ನ ನೆಕ್ಸಾನ್‌ ಕ್ರೇಜ್

Published:
Updated:
Prajavani

ಟಾಟಾ ಮೋಟರ್ಸ್‌ ಕಂಪನಿಯು ಕಾಂಪ್ಯಾಕ್ಟ್‌ ಎಸ್‌ಯುವಿ ನೆಕ್ಸಾನ್‌ನ ಸೀಮಿತ ಆವೃತ್ತಿ ‘ಕ್ರೇಜ್‌’ ಬಿಡುಗಡೆ ಮಾಡಿದೆ. 1 ಲಕ್ಷ ನೆಕ್ಸಾನ್ ಎಸ್‌ಯುವಿ ಮಾರಾಟವಾದ ಸಂಭ್ರಮದಲ್ಲಿ ಇದನ್ನು ಬಿಡುಗಡೆ ಮಾಡಿದೆ.

ಮ್ಯಾನ್ಯುಯಲ್‌ ಮತ್ತು ಆಟೊಮೆಟಿಕ್ ಆಯ್ಕೆಗಳಲ್ಲಿ ‘ಕ್ರೇಜ್‌’ ಲಭ್ಯ ಇರಲಿದೆ. ಬೆಲೆ ₹ 7.57 ಲಕ್ಷ ಮತ್ತು ₹ 8.17 ಲಕ್ಷ ಇದೆ. 1.5 ಲೀಟರ್‌ ಡೀಸೆಲ್‌ ಮತ್ತು 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ನಲ್ಲಿ ಲಭ್ಯವಿದೆ. 6 ಸ್ಪೀಡ್ ಮ್ಯಾನ್ಯುಯಲ್‌ ಮತ್ತು ಆಟೊಮೆಟೆಡ್‌ ಮ್ಯಾನ್ಯುಯಲ್‌ ಎಎಂಟಿ ಟ್ರಾನ್ಸ್‌ಮಿಷನ್‌ ಹೊಂದಿದೆ. 

‘ನೆಕ್ಸಾನ್‌ನ ಎರಡನೇ ಸೀಮಿತ ಆವೃತ್ತಿ ಇದಾಗಿದೆ. ಒಳಾಂಗಣ ಮತ್ತು ಹೊರಾಂಗಣ ಹೆಚ್ಚು ಆಕರ್ಷಕವಾಗಿವೆ’ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಮುಖಸ್ಥ ವಿವೇಕ್‌ ಶ್ರೀವಾಸ್ತವ್‌ ತಿಳಿಸಿದ್ದಾರೆ.

Post Comments (+)