ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್‌ ಚಾಲಿತ ಬೈಕ್‌: ಅರಣ್ಯ ಸಂಚಾರಕ್ಕೆ ಇ–ಬೈಕ್ ‘ವಿಧ್‌ಯುಗ್‌’

Last Updated 21 ಡಿಸೆಂಬರ್ 2021, 5:10 IST
ಅಕ್ಷರ ಗಾತ್ರ

ಮಂಗಳೂರು: ಅರಣ್ಯ ಪ್ರದೇಶದೊಳಗೆ ಸುರಕ್ಷಿತವಾಗಿ ಸಂಚರಿಸಬಹುದಾದ, ಮಾಲಿನ್ಯರಹಿತ ಇ–ಬೈಕ್ ‘ವಿಧ್‌ಯುಗ್‌–4.0’ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿಕೆ) ಸುರತ್ಕಲ್‌ನ ಇ–ಮೊಬಿಲಿಟಿ ಪ್ರಾಜೆಕ್ಟ್‌ನ ತಂಡ ಅಭಿವೃದ್ಧಿಪಡಿಸಿದೆ.

ಈ ಪರಿಸರಸ್ನೇಹಿ ಬೈಕ್‌ ಸೋಲಾರ್‌ ಚಾರ್ಜರ್ ಹೊಂದಿದೆ. ಇದಕ್ಕಿರುವ ಹೆಡ್‌ಲೈಟ್‌ ಅನ್ನು ಸುಲಭವಾಗಿ ತೆಗೆದು, ಟಾರ್ಚ್‌ ಆಗಿ ಬಳಕೆ ಮಾಡಬಹುದು. ಸಂವಹನ ಸಾಧನವಾದ ವಾಕಿ–ಟಾಕಿ, ಪುಸ್ತಕ ಇಟ್ಟುಕೊಳ್ಳಲು ಯುಟಿಲಿಟಿ ಬಾಕ್ಸ್ ಅಳವಡಿಸಲಾಗಿದೆ. ನೀರಿನ ಕ್ಯಾನ್ ಅಳವಡಿಸುವ ಸೌಲಭ್ಯವೂ ಇದೆ.

2 ಕಿಲೊ ವಾಟ್‌ನ ಬಿಎಲ್‌ಡಿಸಿ ಮೋಟಾರ್ ಮತ್ತು 72 ವೋಲ್ಟ್‌, 33 ಎಎಚ್‌ ಲಿಥಿಯಂ–ಐಯಾನ್ ಬ್ಯಾಟರಿ ಹೊಂದಿರುವ ಬೈಕ್‌ ಅನ್ನು 3–4 ತಾಸು ಚಾರ್ಜ್‌ ಮಾಡಿ, ಸುಮಾರು 70 ಕಿ.ಮೀ.ವರೆಗೆ ಓಡಿಸಬಹುದಾಗಿದೆ. ಅರಣ್ಯ ಪ್ರದೇಶದಲ್ಲಿ ಒಂದೂವರೆ ವಾರ ನಿರಂತರವಾಗಿ ಪ್ರಯೋಗ ನಡೆಸಿ, ಕಳೆದ ತಿಂಗಳು ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ನಡೆದ ಶೋಲಾ ಉತ್ಸವದಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದೆ ಎಂದು ಇ–ಮೊಬಿಲಿಟಿ ಪ್ರಾಜೆಕ್ಟ್‌ ತಂಡದ ಮುಖ್ಯಸ್ಥ ಪ್ರೊ. ಯು. ಪೃಥ್ವಿರಾಜ್ ತಿಳಿಸಿದರು.

‘ಸುಮಾರು ಒಂದು ದಶಕದ ಕಾಲ ಅರಣ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅನುಭವ ಇತ್ತು. ಪೆಟ್ರೋಲಿಂಗ್ ಸೇರಿದಂತೆ ಇಲಾಖೆಯ ಅನೇಕ ಅಗತ್ಯಗಳಿಗೆ ಅರಣ್ಯದೊಳಗೆ ಬೈಕ್‌, ಜೀಪ್‌ಗಳು ನಿತ್ಯ ಹಲವಾರು ಕಿ.ಮೀ ಸಂಚರಿಸುತ್ತವೆ. ವಾಹನಗಳ ಸದ್ದಿನಿಂದ ಪ್ರಾಣಿಗಳಿಗೆ ತೊಂದರೆ ಆಗುವುದರ ಜತೆಗೆ, ಇಂಧನ ಚಾಲಿತ ವಾಹನಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ಇದನ್ನು ಮನಗಂಡು, ಕೋವಿಡ್ ಎರಡನೇ ಲಾಕ್‌ಡೌನ್ ವೇಳೆ ಸಂಶೋಧನಾ ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ನಿರಂತರ ನಾಲ್ಕು ತಿಂಗಳು ಶ್ರಮವಹಿಸಿ, ಇ–ಬೈಕ್ ವಿನ್ಯಾಸಗೊಳಿಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಂಶೋಧನಾ ವಿದ್ಯಾರ್ಥಿ ಗಳಾಗಿರುವ ರಕ್ಷಿತ್, ಸ್ಟೀವನ್, ರಜತ್, ಸಂದೇಶ್, ಅನುರಾಧಾ ತಂಡದಲ್ಲಿದ್ದಾರೆ. ಅರಣ್ಯ ಅಧಿಕಾರಿಗಳ ಬಳಕೆಗೆ ಈ ರೀತಿಯ ಬೈಕ್ ಅಭಿವೃದ್ಧಿಪಡಿಸಿದ್ದು ದೇಶದಲ್ಲೇ ಮೊದಲ ಪ್ರಯೋಗವಾಗಿದೆ. ಇದಕ್ಕೆ ₹ 1.5 ಲಕ್ಷ ವೆಚ್ಚ ತಗುಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT