ಭಾನುವಾರ, ಅಕ್ಟೋಬರ್ 2, 2022
19 °C

ಓಲಾದಿಂದ S1 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: ಎಲೆಕ್ಟ್ರಿಕ್ ಕಾರ್‌ ಸಹ ಬರಲಿದೆ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಸದ್ದು ಮಾಡಲು ಅಣಿಯಾಗಿರುವ ಓಲಾ ಕಂಪನಿ ಇದೀಗ 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹೊಸ ಸಾಹಸಕ್ಕೆ ಮುಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ ದೇಶಿಯ ಮಾರುಕಟ್ಟೆಯನ್ನು ಆಕ್ರಮಿಸಲು ಎಲ್ಲ ತಯಾರಿ ಮಾಡಿಕೊಂಡಿದೆ. ಈ ಬೆಳವಣಿಗೆಯೊಂದಿಗೆ ಉತ್ಸಾಹದಲ್ಲಿರುವ ಓಲಾ ಇದೀಗ ಎಸ್‌1 ಎಲೆಕ್ಟ್ರಿಕ್ ಸ್ಕೂಟರ್‌ನ್ನು ಇಂದು ಅನಾವರಣಗೊಳಿಸಿದೆ. ಹಾಗೆಯೇ ತನ್ನ ಮಿಷನ್ ಎಲೆಕ್ಟ್ರಿಕ್ 2022 ಕಾರ್ಯಕ್ರಮದಲ್ಲಿ ಎಲೆಕ್ಟ್ರಿಕ್ ಕಾರ್‌ ಉತ್ಪಾದನೆ ಮಾಡುವುದಾಗಿ ಘೋಷಿಸಿದೆ.

ಓಲಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ s1 ಇಂದು ಅನಾವರಣವಾಗಿದೆ. ಬೆಲೆ ₹ 1 ಲಕ್ಷ (ಎಕ್ಸ್‌ ಶೋರೂಂ) ನಿಗದಿ ಮಾಡಲಾಗಿದೆ. ಈ ಸ್ಕೂಟರ್‌ನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 130 ರಿಂದ 137 ಕಿಮೀ ಓಡಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಓಲಾ ಆ್ಯಪ್‌ನಲ್ಲಿ ₹499 ನೀಡುವ ಮೂಲಕ ಮುಂಗಡ ಬುಕ್ ಮಾಡಬಹುದಾಗಿದೆ. ಮನೆ ಬಾಗಿಲಿಗೇ ಡಿಲೆವರಿ ಆಗಲಿದೆ ಹಾಗೂ ಸೆಪ್ಟೆಂಬರ್ 2 ರಿಂದ ಲಭ್ಯವಾಗಲಿದೆ.

ಉದ್ದೇಶಿತ ಓಲಾ ಎಲೆಕ್ಟ್ರಿಕ್ ಕಾರ್ 2024 ರಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಬಗ್ಗೆ ಕಳೆದ ಜನವರಿಯಲ್ಲೇ ಕಂಪನಿ ಸಿಇಒ ಭವೀಶ್ ಅಗರವಾಲ್ ಅವರು ಎಲೆಕ್ಟ್ರಿಕ್ ಕಾರ್‌ನ ವಿನ್ಯಾಸವನ್ನು ಹಂಚಿಕೊಂಡಿದ್ದರು. ಇಂದು ಈ ಬಗ್ಗೆಯೇ ಅವರು ಘೋಷಣೆ ಮಾಡಿದ್ದಾರೆ. ಈ ಕಾರ್ ಕೇವಲ 4 ಸೆಕೆಂಡುಗಳಿಗೆ 0 ದಿಂದ 100 ಕಿಮೀ ವೇಗ ತಲುಪಬಲ್ಲದು ಎನ್ನಲಾಗಿದೆ. 2024 ರ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ಭವೀಶ್ ತಿಳಿಸಿದ್ದಾರೆ.


ಭವೀಶ್ ಅಗರವಾಲ್ ಅವರು ಜನವರಿಯಲ್ಲಿ ಹಂಚಿಕೊಂಡಿದ್ದ ಓಲಾ ಎಲೆಕ್ಟ್ರಿಕ್ ಕಾರ್‌ನ ಉದ್ದೇಶಿತ ಮಾದರಿ

ಓಲಾ ತಮಿಳುನಾಡಿನಲ್ಲಿ ಅತಿದೊಡ್ಡ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದೆ. ಇಲ್ಲಿ ಸುಮಾರು 3500 ರೊಬೋಟ್‌ಗಳು ಹಾಗೂ ಮಹಿಳೆಯರೇ ಮಾತ್ರ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ. ಇಲ್ಲಿಂದ 2023 ರ ಅಂತ್ಯದೊಳಗೆ 10 ಮಿಲಿಯನ್ ಎಲೆಕ್ಟ್ರಿಕ್  ಸ್ಕೂಟರ್‌ಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಓಲಾ ಹೊಂದಿದೆ.

ಓಲಾ 2021 ರ ಡಿಸೆಂಬರ್‌ನಲ್ಲಿ ಎಸ್‌1 ಪ್ರೊ ಎಂಬ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅನಾವರಣಗೊಳಿಸಿತ್ತು. ಆದರೆ, ಉತ್ಪಾದನೆ ಸಮಸ್ಯೆಯಿಂದ ದೇಶದಲ್ಲಿ ಕೇವಲ 7000 ಸ್ಕೂಟರ್‌ಗಳನ್ನು ಮಾತ್ರ ಮಾರಾಟ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು