ಮುಂಬೈ: ರೆನೊ ಕಂಪನಿಯು ತನ್ನ ಎಸ್ಯುವಿ ‘ಕಿಗರ್’ ಮಾರಾಟ ಆರಂಭಿಸಿದ್ದು, ಮೊದಲ ದಿನವೇ 1,100 ವಾಹನಗಳನ್ನು ಮಾರಾಟ ಮಾಡಿದೆ.
ಕಂಪನಿಯ ಜಾಲತಾಣದಲ್ಲಿ ಮಾತ್ರವಲ್ಲದೆ, ಕಂಪನಿಯ ಎಲ್ಲಾ ಡೀಲರ್ಶಿಪ್ ಕೇಂದ್ರಗಳ ಮೂಲಕವೂ ಈ ವಾಹನದ ಬುಕಿಂಗ್ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾರಿನ ಎಕ್ಸ್ ಷೋರೂಂ ಬೆಲೆ ₹ 5.45 ಲಕ್ಷದಿಂದ ₹ 9.55 ಲಕ್ಷದವರೆಗೆ ಇದೆ.