ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್‌ ಎನ್‌ಫೀಲ್ಡ್‌: ಬಿಎಸ್‌–6 ಗುಣಮಟ್ಟದ 'ಹಿಮಾಲಯನ್‌' ಬೈಕ್‌ ಬಿಡುಗಡೆ

Last Updated 20 ಜನವರಿ 2020, 13:11 IST
ಅಕ್ಷರ ಗಾತ್ರ

ನವದೆಹಲಿ:ರಾಯಲ್‌ ಎನ್‌ಫೀಲ್ಡ್‌ ಬಿಎಸ್‌–6 ಗುಣಮಟ್ಟದ ಎಂಜಿನ್‌ ಹೊಂದಿರುವ 'ಹಿಮಾಲಯನ್‌' ಬೈಕ್‌ ಬಿಡುಗಡೆ ಮಾಡಿದೆ. ಬೈಕ್‌ ಆರಂಭಿಕ ಬೆಲೆ ₹ 1.86 ಲಕ್ಷ ನಿಗದಿಯಾಗಿದೆ.

ಸಾಹಸ ಯಾತ್ರೆಗಳಿಗೆ ಸೂಕ್ತವಾದ ಬೈಕ್‌ ಆಗಿ ಜನಪ್ರಿಯಗೊಂಡಿರುವ ಹಿಮಾಲಯನ್‌ 2016ರಿಂದ ದೇಶ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಂಡಿದೆ. ಬಿಡುಗಡೆಯಾಗಿರುವ ಬೈಕ್‌ನಲ್ಲಿಸ್ವಿಚೆಬಲ್‌ ಎಬಿಎಸ್‌ ಬ್ರೇಕಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ. ಯಾವುದೇ ಸ್ಥಳದಲ್ಲಿ ಬೈಕ್‌ ನಿಲ್ಲಿಸಲು ನೆರವಾಗಲು ಸೈಡ್‌ ಸ್ಟ್ಯಾಂಡ್‌ನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

411 ಸಿಸಿ ಸಿಂಗಲ್‌–ಸಿಲಿಂಡರ್‌ ಫ್ಯೂಯಲ್‌ ಇಂಜೆಕ್ಟೆಡ್‌ ಪೆಟ್ರೋಲ್‌ ಎಂಜಿನ್‌, 5 ಸ್ಪೀಡ್‌ ಟ್ರಾನ್ಸ್‌ಮಿಷನ್‌ನಲ್ಲಿ ಬದಲಾವಣೆಯಾಗಿಲ್ಲ. ಹಿಂದಿನ ಆವೃತ್ತಿಯ ಹಿಮಾಲಯನ್‌ ಬೈಕ್‌ 24.3 ಬಿಎಚ್‌ಪಿ ಮತ್ತು 32 ನ್ಯೂಟರ್‌ ಮೀಟರ್‌ ಟಾರ್ಕ್ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಬಿಎಸ್‌–6 ಮಾದರಿಯ ಬೈಕ್‌ನ ಸಾಮರ್ಥ್ಯದ ಕುರಿತ ವಿವರ ಬಿಡುಗಡೆಯಾಗಿಲ್ಲ.

ಕಂಪನಿಯು ಹೊಸ ಆವೃತ್ತಿಯ ಹೆಲ್ಮೆಟ್‌, ಜೆರ್ಸಿ, ಟಿ–ಶರ್ಟ್‌ಗಳು ಹಾಗೂ ಸ್ವೆಟ್‌ಶರ್ಟ್‌, ಹೆಡ್‌ಗೇರ್‌ಗಳನ್ನು ಹೊರ ತರುವುದಾಗಿ ಹೇಳಿಕೊಂಡಿದೆ.

ದೇಶದ ಎಲ್ಲ ರಾಯಲ್‌ ಎನ್‌ಫೀಲ್ಡ್‌ ಮಳಿಗೆಗಳಲ್ಲಿ ಬೈಕ್‌ ಲಭ್ಯವಿರಲಿದ್ದು, 3 ವರ್ಷಗಳ ವಾರೆಂಟಿ ಸಹ ಸಿಗಲಿದೆ. ಸ್ನೋ ವೈಟ್‌ ಮತ್ತು ಗ್ರಾನೈಟ್‌ ಬಣ್ಣದ ಬೈಕ್‌ಗಳಿಗೆ ₹ 1,86,811; ಸ್ಲೀಟ್‌ ಗ್ರೇ ಮತ್ತು ಗ್ರಾವೆಲ್‌ ಗ್ರೇ ಬಣ್ಣದ ಬೈಕ್‌ಗಳಿಗೆ ₹ 1,89,565 ಹಾಗೂ ರಾಕ್‌ ರೆಡ್‌ ಮತ್ತು ಲೇಕ್‌ ಬ್ಲೂ ಬಣ್ಣದ ಬೈಕ್‌ಗಳಿಗೆ ₹ 1,91,401 ಬೆಲೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT